twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಜಾಗೃತಿಗೆ ಅಣ್ಣಾವ್ರ ಹಾಡು ಬಳಸಿದ ವೈದ್ಯಕೀಯ ವಿದ್ಯಾರ್ಥಿಗಳು

    |

    ಇಂದು ಡಾ.ರಾಜ್‌ಕುಮಾರ್ ಹುಟ್ಟುಹಬ್ಬ. ರಾಜ್ಯದಾದ್ಯಂತ ಕೊರೊನಾದ ವಿಷಮ ಪರಿಸ್ಥಿತಿ ಇದೆ. ಈ ಸಂಕಷ್ಟದ ಸಮಯದಲ್ಲೂ ಅಣ್ಣಾವ್ರರನ್ನು ಅನುಕೂಲಾನುಸಾರ ನೆನಪಿಸಿಕೊಳ್ಳುತ್ತಿದ್ದಾರೆ. ಗೌರವ ಸಲ್ಲಿಸುತ್ತಿದ್ದಾರೆ ಅವರ ಅಭಿಮಾನಿಗಳು.

    ಡಾ.ರಾಜ್‌ಕುಮಾರ್ ಹುಟ್ಟುಹಬ್ಬವಾದ ಇಂದು ಮೈಸೂರಿನ ವೈದ್ಯಕೀಯ ವಿದ್ಯಾರ್ಥಿಗಳು ಭಿನ್ನವಾಗಿ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಅವರ ಹಾಡನ್ನು ಬಳಸಿಕೊಂಡು ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.

    ಮೈಸೂರಿನ ವಾಕ್ ಮತ್ತು ಶ್ರವಣ ಸಂಬಂಧಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಜ್‌ಕುಮಾರ್ ಅವರ 'ಪ್ರೇಮದ ಕಾಣಿಕೆ' ಸಿನಿಮಾದ ''ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ'' ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಕೊರೊನಾ ಜಾಗೃತಿ ಗೀತೆಯನ್ನಾಗಿ ಮಾಡಿ ಹಾಡಿಗೆ ನರ್ತಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಾಡಿನ ಸಾಹಿತ್ಯ ಇಂತಿದೆ.

    All India Insitute of Speech & Hearing Mysuru Students released a COVID19 version of Dr Rajkumar Song

    ''ಕೊರೊನಾಗೊಂದು ಎಲ್ಲೆ ಎಲ್ಲಿದೆ

    ಈ ಕೇಸಸ್‌ಗೆಲ್ಲಿ ಕೊನೆ ಎಲ್ಲಿದೆ

    ಏಕೆ ಹೊರಗೆ ಹೋಗುವೆ

    ಮನೇಲಿರು, ಮನೇಲಿರು''

    ''ಸಿನಿಮಾ ಹಾಲು, ಶಾಪಿಂಗ್ ಮಾಲು ಏಕೆ ಸುತ್ತುವೆ

    ಟ್ರಿಪ್ಪು, ಹರಟೆ, ಪಾರ್ಟಿ ಅಂತ ಏಕೆ ಅಲೆಯುವೆ

    ಹ್ಯಾಂಗೌಟು, ಟಿಂಡರ್‌ ಡೇಟು ಆಮೇಲ್ ಟೈಮಿದೆ

    ಈಗ ಮನೇಲಿರುವುದು ಅವಶ್ಯವಾಗಿದೆ

    ಕೈ ತೊಳೆಯಿರಿ, ಮಾಸ್ಕ್ ಧರಿಸಿರಿ

    ಅದೇನೇ ಆಗಲಿ ದೂರದಲ್ಲಿರಿ''

    Recommended Video

    Dr Rajkumar & Sachin Tendulkar ಹೆಸರಲ್ಲಿವೆ ಇದುವರೆಗೆ ಯಾರೂ ಮಾಡಿರದ ದಾಖಲೆ | Filmibeat Kannada

    ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕೊರೊನಾ ಕಿಟ್ ಹಾಕಿಕೊಂಡು ಹಾಡಿಗೆ ಅಭಿನಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    English summary
    All India Insitute of Speech & Hearing Mysuru's medical students uses Dr Rajkumar's song to creat awarness about COVID 19.
    Saturday, April 24, 2021, 16:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X