Exclusive : ಒಂದಾದ್ರು ಆಲ್ ಓಕೆ & ಚಂದನ್ ಶೆಟ್ಟಿ, ಬರ್ತಿದೆ ಬಿಗ್ ಪ್ರಾಜೆಕ್ಟ್

ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಆಲ್ ಓಕೆ ಹಾಗೂ ಚಂದನ್ ಶೆಟ್ಟಿ ತಮ್ಮದೆ ಹಾಡುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇಬ್ಬರು ತಮ್ಮ ಹಿಟ್ ಹಾಡುಗಳಿಂದ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿದ್ದಾರೆ.

ಇನ್ನೊಂದು ಕಡೆ, ಆಲ್ ಓಕೆ ಹಾಗೂ ಚಂದನ್ ಶೆಟ್ಟಿ ನಡುವೆ ಮನಸ್ತಾಪ ಇದೆ ಎನ್ನುವ ಮಾತು ಕೆಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಚಂದನ್ ಶೆಟ್ಟಿ Rap ಹಾಡುಗಳ ಬಗ್ಗೆ ಆಲ್ ಓಕೆ ತಂಡದ DIT-O ಹಾಡಿನ ಮೂಲಕವೇ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಅಲ್ಲಿಂದ ಆಲ್ ಓಕೆ ತಂಡ ಹಾಗೂ ಚಂದನ್ ನಡುವೆ ಮುನಿಸು ಇದೆ ಎಂದು ದೊಡ್ಡ ಸುದ್ದಿಯಾಗಿತ್ತು.

ಆದರೆ, ಈಗ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಂದಾಗಿದ್ದಾರೆ. 'ಭರಾಟೆ' ಸಿನಿಮಾದ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದು, ಅದೇ ಹಾಡಿನಲ್ಲಿ ಆಲ್ ಓಕೆ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ಆಲ್ ಓಕೆ, ತಮ್ಮ ಹಾಗೂ ಚಂದನ್ ಶೆಟ್ಟಿ ನಡುವಿನ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಚಂದನ್ ಜೊತೆಗಿನ ಸ್ನೇಹ, ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ.

ನಾನು, ಚಂದನ್ ಇಬ್ರು ಫ್ರೆಂಡ್ಸ್

ನಾನು, ಚಂದನ್ ಇಬ್ರು ಫ್ರೆಂಡ್ಸ್

ಚಂದನ್ ಶೆಟ್ಟಿ, ನೀವು ಒಂದಾದ್ರ..? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆಲ್ ಓಕೆ ''ನಾನು ಚಂದನ್ ಶೆಟ್ಟಿ ಬೇರೆ ಬೇರೆ ಆಗಿದ್ದೀವಿ ಎಂದೇನು ಇಲ್ಲ. ಮನಸ್ತಾಪ ಇತ್ತು. ಆದರೆ, ಅದು ನಮ್ಮ ನಡುವೆ ಅಂತೇನು ಅಲ್ಲ. ಅದೆಲ್ಲ ಕ್ರಿಯೇಟ್ ಮಾಡಲಾಗಿದ್ದು ಅಷ್ಟೇ. ನಾನು ಹಾಗೂ ಚಂದನ್ ಇಬ್ಬರು ತುಂಬ ಒಳ್ಳೆಯ ಸ್ನೇಹಿತರು.'' ಎಂದರು.

ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಒಗ್ಗಟ್ಟು ಮುಖ್ಯ

ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಒಗ್ಗಟ್ಟು ಮುಖ್ಯ

''ನಾನು ಹಾಗೂ ಚಂದನ್ ಇಬ್ಬರು ಕೂಡ ಕನ್ನಡ ಮ್ಯೂಸಿಕ್ ಇಂಡಸ್ಟ್ರಿಗೆಗಾಗಿ ಕೆಲಸ ಮಾಡುತ್ತಿದ್ದೇವೆ. ಇಬ್ಬರು ಕನ್ನಡ ಮ್ಯೂಸಿಕ್ ಇಂಡಸ್ಟ್ರಿ ಬೆಳೆಸಲು ಕಷ್ಟ ಪಡುತ್ತಿದ್ದೇವೆ. ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಒಗ್ಗಟ್ಟು ಮುಖ್ಯ. ನಮ್ಮ ನಡುವೆ ಯಾವುದೇ ಜಗಳ ಇಲ್ಲ. ಎರಡು ವಾರದ ಹಿಂದೆಯಷ್ಟೇ ಮೀಟ್ ಆಗಿದ್ವಿ. ಎಲ್ಲ ಗುಡ್ ವೈಬ್ಸ್ ಅಷ್ಟೇ.'' ಎಂದರು ಮಾತು ಮುಂದುವರೆಸಿದರು ಆಲ್ ಓಕೆ.

ಇಬ್ಬರು ಒಟ್ಟಿಗೆ ಸೇರಿ ಹಾಡು ಮಾಡುವ ಪ್ಲಾನ್ ಇದೆ

ಇಬ್ಬರು ಒಟ್ಟಿಗೆ ಸೇರಿ ಹಾಡು ಮಾಡುವ ಪ್ಲಾನ್ ಇದೆ

ಆಲ್ ಓಕೆ ಹಾಗೂ ಚಂದನ್ ಶೆಟ್ಟಿ ಇಬ್ಬರು ಸೇರಿ ಒಂದು ಹಾಡು ಮಾಡುವ ಪ್ಲಾನ್ ಇದೆಯಂತೆ. ಆದರೆ, ಅದಿನ್ನು ಮಾತುಕತೆ ಹಂತದಲ್ಲಿ ಇದೆಯಂತೆ. ಇನ್ನು, ಈ ಇಬ್ಬರು ರಾಕ್ ಸ್ಟಾರ್ಸ್ ಒಟ್ಟಿಗೆ ಸೇರಿದರೆ, ಆ ಪ್ರಾಜೆಕ್ಟ್ ದೊಡ್ಡದಾಗಿ ಇರಲಿದೆ. ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಮಾಡಲಿದೆ. ಹಾಡಿನ ಬಗ್ಗೆ ಕುತೂಹಲ ಕೂಡ ಹೆಚ್ಚಿರುತ್ತದೆ.

'ಭರಾಟೆ' ಹಾಡಿನಲ್ಲಿ ಒಂದಾದ ಸ್ನೇಹಿತರು

'ಭರಾಟೆ' ಹಾಡಿನಲ್ಲಿ ಒಂದಾದ ಸ್ನೇಹಿತರು

'ಭರಾಟೆ' ಸಿನಿಮಾದ ರೋರಿಂಗ್ ಹಾಡು ಇಂದು (ಸಪ್ಟೆಂಬರ್ 25) ಬಿಡುಗಡೆಯಾಗಿದೆ. ಈ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಹಾಡಿನ ವಿಡಿಯೋದಲ್ಲಿ ಆಲ್ ಓಕೆ ಕಾಣಿಸಿಕೊಂಡಿದ್ದಾರೆ. 'ಭರಾಟೆ'ಯ ಮೂಲಕ ಇಬ್ಬರು ಸ್ನೇಹಿತರು ಒಂದಾಗಿದ್ದಾರೆ. ಚಿತ್ರದ ಒಂದು ಪಾತ್ರದಲ್ಲಿ ಆಲ್ ಓಕೆ ನಟಿಸಿದ್ದಾರೆ. ಶ್ರೀ ಮುರಳಿ ಜೊತೆಗೆ ಮೊದಲ ಬಾರಿಗೆ ಆಲ್ ಓಕೆ ತೆರೆ ಹಂಚಿಕೊಂಡಿದ್ದಾರೆ.

More from Filmibeat

English summary
Kannada rap singers All Ok and Chandan Shetty planning for a big music project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X