ಮದುವೆ ಸಂಭ್ರಮದಲ್ಲಿ ರಾಪರ್ ಚಂದನ್ ಶೆಟ್ಟಿ, 'ಗೊಂಬೆ' ನಿವೇದಿತಾ ಗೌಡ.!

'ಬಿಗ್ ಬಾಸ್' ಮನೆಯೊಳಗಿದ್ದಾಗ ಕ್ಲೋಸ್ ಫ್ರೆಂಡ್ಸ್ ಆಗಿದ್ದ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು 'ಗೊಂಬೆ' ನಿವೇದಿತಾ ಗೌಡ, ಹೊರಗೆ ಬಂದ ಮೇಲೆ ಪ್ರೇಮ ಪಕ್ಷಿಗಳಾದರು. ಒಬ್ಬರನ್ನೊಬ್ಬರು ಮನಸಾರೆ ಇಷ್ಟ ಪಡುವ ಈ ಜೋಡಿ ಇಂದು ಹೊಸ ಜೀವನ ಆರಂಭಿಸಲಿದ್ದಾರೆ.

Recommended Video

Chandan Shetty and Niveditha Gowda to tie knot tomorrow | Chandan Weds Niveditha | Filmibeat Kannada

ಹೌದು, ಇಂದು ಮತ್ತು ನಾಳೆ (ಫೆಬ್ರವರಿ 25 ಮತ್ತು 26) ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯಲಿದೆ. ವಧು ನಿವೇದಿತಾ ಗೌಡ ಮತ್ತು ವರ ಚಂದನ್ ಶೆಟ್ಟಿ ಕುಟುಂಬದಲ್ಲಿ ಸದ್ಯ ಮದುವೆ ಸಂಭ್ರಮ ತುಂಬಿ ತುಳುಕುತ್ತಿದೆ.

ವಧು ನಿವೇದಿತಾಗೆ ಖುಷಿಯೋ ಖುಷಿ

ವಧು ನಿವೇದಿತಾಗೆ ಖುಷಿಯೋ ಖುಷಿ

ಪ್ರೀತಿಸಿದ ಹುಡುಗ ಚಂದನ್ ಶೆಟ್ಟಿಯನ್ನ ಮದುವೆ ಆಗುತ್ತಿರುವುದಕ್ಕೆ 'ಗೊಂಬೆ' ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಖುಷಿ ಇದೆ. ನಿವೇದಿತಾ ಗೌಡ ಮನೆಯಲ್ಲಿ ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳಿಗೆ ಚಾಲನೆ ಕೊಟ್ಟಿದ್ದು, ಕೆಂಪು ಮತ್ತು ಗೋಲ್ಡನ್ ಬಣ್ಣದ ಕಾಂಬಿನೇಶನ್ ಇರುವ ಸೀರೆಯಲ್ಲಿ ವಧು ನಿವೇದಿತಾ ಗೌಡ ಮಿಂಚುತ್ತಿದ್ದರು.

ಸಿಂಗಾರಗೊಂಡಿರುವ ವಧು ಮನೆ

ಸಿಂಗಾರಗೊಂಡಿರುವ ವಧು ಮನೆ

ನಿವೇದಿತಾ ಗೌಡ ಮದುವೆ ಪ್ರಯುಕ್ತ ಮೈಸೂರಿನಲ್ಲಿರುವ ಅವರ ನಿವಾಸ ಸಿಂಗಾರಗೊಂಡಿದೆ. ಸದ್ಯಕ್ಕೆ ಚಪ್ಪರ ಶಾಸ್ತ್ರ, ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮ ಪೂರ್ಣಗೊಂಡಿದ್ದು, ಇಂದು ಸಂಜೆ ಆರತಕ್ಷತೆ ನಡೆಯಲಿದೆ. ನಾಳೆ ಬೆಳಗ್ಗೆ ನಿವೇದಿತಾ ಮತ್ತು ಚಂದನ್ ಹಸೆಮಣೆ ಏರಲಿದ್ದಾರೆ.

ಮದುವೆ ಎಲ್ಲಿ.?

ಮದುವೆ ಎಲ್ಲಿ.?

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಮದುವೆ ನಡೆಯಲಿದೆ. ಬುಧವಾರ ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇರುವ ಶುಭ ಲಗ್ನದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಲಿದ್ದಾರೆ.

ಸ್ಟಾರ್ ನಟರು ಬರುವ ನಿರೀಕ್ಷೆ

ಸ್ಟಾರ್ ನಟರು ಬರುವ ನಿರೀಕ್ಷೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ಆಮಂತ್ರಣ ನೀಡಿದ್ದಾರೆ. ಚಂದು-ನಿವಿ ಮದುವೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಸಾಕ್ಷಿ ಆಗುವ ಸಾಧ್ಯತೆ ಇದೆ.

More from Filmibeat

English summary
All set for Chandan Shetty Niveditha Gowda marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X