For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಫ್ ದಿ ಡೇ: ಇದು ಇಂಡಸ್ಟ್ರಿಗೆ ಬೇಕಾಗಿರುವುದು.!

  |

  ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ನಡೆಯುತ್ತೆ. ಸ್ಟಾರ್ ನಟರ ಅಭಿಮಾನಿಗಳು ನಾನಾ....ನೀನಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡ್ತಾರೆ.

  ನಮ್ಮ ಸಿನಿಮಾ ಗ್ರೇಟ್, ನಮ್ಮ ಬಾಸ್ ಗ್ರೇಟ್, ನಮ್ಮ ಸಿನಿಮಾದ ರೆಕಾರ್ಡ್ ಅಂತ ಹಿಗ್ಗುವುದನ್ನ ನೋಡಿದ್ದೇವೆ. ನೆಚ್ಚಿನ ನಟನ ಸಿನಿಮಾ ಬಂದಾಗ ಚಿತ್ರಮಂದಿರಗಳ ಬಳಿ ಆ ನಟನ ಪೋಸ್ಟರ್ ನಿಲ್ಲಿಸಿ, ಹಾರ, ಹಾಲಾಭಿಷೇಕ ಮಾಡುವುದು ಹೊಸದೇನಲ್ಲ.

  Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

  ಆದ್ರೀಗ, ಒಂದು ವಿಶೇಷವಾದ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಯಾರೇ ಎಷ್ಟೇ ಕಿತ್ತಾಡಿದ್ರು ನಾವೆಲ್ಲ ಒಂದೇ ಇಂಡಸ್ಟ್ರಿ. ಇದು ನಮ್ಮ ಸಿನಿಮಾಗಳು, ಇವರು ನಮ್ಮ ನಟರು ಎಂದು ಹೇಳುವ ಪೋಸ್ಟರ್ ಒಂದು ಕಣ್ಣಿಗೆ ಬಿದ್ದಿದೆ.

  Twitter Review: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು

  ಪುನೀತ್ ರಾಜ್ ಕುಮಾರ್ ಸಿನಿಮಾ ಶತದಿನ ಆಚರಿಸಲೆಂದು ದರ್ಶನ್, ಯಶ್, ಅಂಬರೀಶ್, ಶಿವಣ್ಣ, ಉಪೇಂದ್ರ ಅಭಿಮಾನಿಗಳು ಒಂದೇ ಪೋಸ್ಟರ್ ನಲ್ಲಿ ಶುಭಹಾರೈಸಿದ್ದಾರೆ. ಇಂತಹ ಅಭಿಮಾನ, ಇಂತಹ ಒಗ್ಗಟ್ಟು ಬಹಳ ಅಪರೂಪ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಯಾವುದೇ ನಟನ ಸಿನಿಮಾ ಬಂದಾಗಲೂ ಹೀಗೆ ಉಳಿದ ನಟರ ಅಭಿಮಾನಿಗಳು ಚಿತ್ರವನ್ನ ನೋಡಿ, ಪ್ರೋತ್ಸಾಹಿಸಬೇಕು.

  ಅಂದ್ಹಾಗೆ, ಈ ಪೋಸ್ಟರ್ ಯಾವ ಥಿಯೇಟರ್ ಬಳಿ ಇದೆಯೋ ಗೊತ್ತಿಲ್ಲ. ಬಟ್, ಮಂಡ್ಯ ಜಿಲ್ಲೆ ಎಂಬುದು ಮಾತ್ರ ಪೋಸ್ಟರ್ ನಲ್ಲಿರುವ ಹೆಸರುಗಳನ್ನ ಗಮನಿಸಿದ್ರೆ ತಿಳಿಯುತ್ತಿದೆ.

  English summary
  Kannada actor darshan, upendra, ambarish, shiva rajkumar and yash fans wish to puneeth rajkumar starrer nata sarvabhouma movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X