Just In
Don't Miss!
- Automobiles
ಕೋವಿಡ್ ಲಸಿಕೆ ಸಾಗಾಣಿಕೆಗಾಗಿ ವಿಶೇಷ ಟ್ರಕ್ ಅಭಿವೃದ್ದಿಪಡಿಸಿದ ಟಾಟಾ ಮೋಟಾರ್ಸ್
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಉಪ್ಪಿಟ್ಟು' ಬಿಟ್ಟು ಆಂಧ್ರ ಮೀಲ್ಸ್ ಗೆ ಕೈಹಾಕಿದ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ 'ಉಪ್ಪಿ-2' ಚಿತ್ರದಲ್ಲಿ ಬಿಜಿಯಾಗಿರುವುದು ನಿಮ್ಗೆಲ್ಲಾ ಗೊತ್ತೇ ಇದೆ. ವರ್ಷಗಳ ನಂತ್ರ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಅಭಿಮಾನಿಗಳಿಗೆ ಖುಷಿ. ಹಾಗೆ, ಟಾಲಿವುಡ್ ನಲ್ಲಿ ಉಪ್ಪಿಯನ್ನ ಮಿಸ್ ಮಾಡಿಕೊಂಡಿದ್ದ ಭಕ್ತರಿಗೂ ಉಪ್ಪಿ ದಾದ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಮಲ್ಟಿ ಸ್ಟಾರರ್ ಮೂವಿಯಾಗಿರುವ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಉಪ್ಪೇಂದ್ರ ಅಭಿನಯಿಸುತ್ತಿದ್ದಾರೆ.
ಈ ಸುದ್ದಿ ಗಾಂಧಿನಗರದಲ್ಲಿ ಆಗಾಗ ಕೇಳಿ ಬಂದಿದ್ದು ಬಿಟ್ಟರೆ, ಅಲ್ಲು ಅರ್ಜುನ್ ಜೊತೆ ನಟಿಸುವುದು ಯಾವಾಗ? ಶೂಟಿಂಗ್ ಎಲ್ಲಿ? ಈ ಬಗ್ಗೆ ಮಾಹಿತಿ ಇರ್ಲಿಲ್ಲ. ಆದ್ರೀಗ, ಅಲ್ಲು ಅರ್ಜುನ್ ಮತ್ತು ಉಪೇಂದ್ರ ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕಿರುವ ಫೋಟೋ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ಗೆ ಲಭಿಸಿದೆ.
ತಮ್ಮ ವೃತ್ತಿ ಬದುಕಿನ ಅದ್ಭುತ ಸಾಧನೆಗೆ ಕೋಟಾ ಶ್ರೀನಿವಾಸ್ ರಾವ್ 'ಪದ್ಮಶ್ರೀ ಪ್ರಶಸ್ತಿ'ಯನ್ನ ಮುಡಿಗೇರಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿರುವ ಕೋಟಾ ಶ್ರೀನಿವಾಸ್ ರಾವ್ ಗೆ ಇಡೀ ಚಿತ್ರತಂಡ ನಿನ್ನೆ ಸನ್ಮಾನ ಮಾಡಿತು. [ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ]
ಆ ಸಂದರ್ಭದ ವೇಳೆ ಕ್ಲಿಕ್ ಮಾಡಿರುವ ಫೋಟೋದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸೆಟ್ ನಲ್ಲಿ ಉಪ್ಪಿ ಹಾಕಿರುವ ಗೆಟಪ್ ನೋಡಿದ್ರೆ, 'ರೆಡ್ಡಿಗಾರು' ರೇಂಜ್ ನಲ್ಲಿ ವೈಟ್ ಅಂಡ್ ವೈಟ್ ನಲ್ಲಿ ಮಿಂಚಿದ್ದಾರೆ.
ಇನ್ನು ಪಕ್ಕದಲ್ಲೇ ನಿಂತಿರುವ ನಟಿ ಸ್ನೇಹ, ಉಪ್ಪಿ ಜೋಡಿ ಅಂತ ಈ ಫೋಟೋನೇ ಸಾರಿ ಸಾರಿ ಹೇಳುತ್ತೆ. ಅಸಲಿಗೆ ಈ ಚಿತ್ರದಲ್ಲಿ ಉಪ್ಪಿ ಹೀರೋ ಅಲ್ಲ, ವಿಲನ್ ಕೂಡ ಅಲ್ಲ. ಆದರೂ, ಉಪ್ಪಿ ಪ್ರಮುಖ ಪಾತ್ರಧಾರಿ ಅನ್ನೋದು ಪಕ್ಕಾ.
ತಮ್ಮ ಪಾತ್ರದ ಬಗ್ಗೆ ಫುಲ್ ಖುಷಿಯಾಗಿರುವ ಉಪ್ಪಿ, ಬಿಜಿಯಿದ್ದರೂ ಕಾಲ್ ಶೀಟ್ ಕೊಟ್ಟು ಟಾಲಿವುಡ್ ನಲ್ಲಿದ್ದಾರೆ. ಈ ಚಿತ್ರ ಇನ್ನೂ ಚಿತ್ರೀಕರಣ ಹಂತದಲ್ಲಿರುವುದರಿಂದ ತೆರೆಗೆ ಬರೋಕ್ಕಿನ್ನೂ ತುಂಬಾ ಟೈಮ್ ಇದೆ. ಆ ಮೂಲಕ ಉಪ್ಪಿಟ್ಟಿನ ಜೊತೆ ಅಭಿಮಾನಿಗಳಿಗೆ ಆಂಧ್ರ ಮೀಲ್ಸ್ ಸವಿಯುವ ಯೋಗ ಇದೆ. (ಫಿಲ್ಮಿಬೀಟ್ ಕನ್ನಡ)