»   » 'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು?

'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು?

Posted By:
Subscribe to Filmibeat Kannada
ಈ ತೆಲುಗು ನಟನಿಗೆ ಶಿವಣ್ಣನ ಜೊತೆ ಕನ್ನಡದಲ್ಲಿ ಆಕ್ಟ್ ಮಾಡಬೇಕಂತೆ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಯಿತು. 'ಟಗರು' ಟೀಸರ್ ರಿಲೀಸ್ ಮಾಡಲು ಭಾರತದ ಮಾಜಿ ಕ್ರಿಕೆಟ್ ಆಟಗಾರ ಜಿ.ಆರ್ ವಿಶ್ವನಾಥ್, ನಟ ರಕ್ಷಿತ್ ಶೆಟ್ಟಿ ಹಾಗೂ ತೆಲುಗು ನಟ ಅಲ್ಲು ಸಿರೀಶ್ ಅತಿಥಿಗಳಾಗಿ ಆಗಮಿಸಿದ್ದರು.

'ಟಗರು' ಚಿತ್ರದ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೇದಿಕೆಯಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿ ಅಭಿಮಾನಿಗಳನ್ನ ರಂಜಿಸಿದರು. ತದ ನಂತರ ಕನ್ನಡದಲ್ಲೇ ಮಾತನಾಡಿದ ತೆಲಗು ನಟ ಸ್ಯಾಂಡಲ್ ವುಡ್ ನಲ್ಲಿ ತಮಗಿರುವ ಆಸೆಯೊಂದನ್ನ ವ್ಯಕ್ತಪಡಿಸಿದರು. ಈ ಆಸೆ ಕೇಳಿ ಅಭಿಮಾನಿಗಳು ಫುಲ್ ಖುಷ ಆದರು. ಏನದು? ಮುಂದೆ ಓದಿ......

ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ

ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆಯನ್ನ ಟಗರು ವೇದಿಕೆಯಲ್ಲಿ ವ್ಯಕ್ತಪಡಿಸಿದರು.

ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು

ಯಾರ ಜೊತೆ ಅಭಿನಯಿಸಬೇಕಂತೆ?

ಕನ್ನಡದಲ್ಲಿ ಸಿನಿಮಾ ಮಾಡುವುದಾದರೇ, ಅದು ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲೇ ತಮ್ಮ ಡೆಬ್ಯೂ ಮಾಡಬೇಕೆಂದು ನಟ ಸಿರೀಶ್ ಹೆಮ್ಮೆಯಿಂದ ಹೇಳಿಕೊಂಡರು.

ಪುಟ್ಟ ಪೋರನಿಗೆ ತಲೆಬಾಗಿದ 'ಅಣ್ಣಾವ್ರ' ಮಕ್ಕಳು

ಮೂರು ಭಾಷೆಯಲ್ಲಿ ಅಭಿನಯಿಸಿರುವ ಸಿರೀಶ್

ಈಗಾಗಲೇ ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಮೋಹನ್ ಲಾಲ್ ಜೊತೆ ನಟಿಸಿರುವ ಅಲ್ಲು ಸಿರೀಶ್ ಅವರಿಗೆ ಕನ್ನಡದಲ್ಲಿ ಅಭಿನಯಿಸುವ ಮನಸ್ಸು ಹೊಂದಿದ್ದಾರೆ. ಬಹುಶಃ ಸಿರೀಶ್ ಅವರ ಈ ಕೋರಿಕೆ ಆದಷ್ಟೂ ಬೇಗ ಈಡೇರಿದರೂ ಆಶ್ಚರ್ಯವಿಲ್ಲ.

ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.!

ಶಿವಣ್ಣ ಜೊತೆ ಹುಲಿ ಡ್ಯಾನ್ಸ್

ಇನ್ನು ಅಭಿಮಾನಿಗಳ ಒತ್ತಾಯದ ಮೆರೆಗೆ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಹುಲಿ ಡ್ಯಾನ್ಸ್ ಮಾಡಿದರು. ಶಿವಣ್ಣಗೆ ನಟ ಅಲ್ಲು ಸಿರೀಶ್ ಮತ್ತು ರಕ್ಷಿತ್ ಶೆಟ್ಟಿ ಕೂಡ ಸಾಥ್ ಕೊಟ್ಟಿದ್ದು ವಿಶೇಷವಾಗಿತ್ತು.

English summary
Telugu Actor Allu Sirish brother of Allu Arjun Speak About Tagaru and Shiva Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X