ಹಳೇ ವಿಡಿಯೋ ತೋರಿಸಿ ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ತಿರುಗೇಟು ಕೊಟ್ಟ ಯಶ್ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಅದೇ ದಿನ 'ಧುರಂಧರ್'- 2 ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಹಾಗಾಗಿ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಎರಡೂ ಸಿನಿಮಾಗಳು ರಿಲೀಸ್ ಡೇಟ್ ಬದಲಿಸಲು ಸಿದ್ಧರಿಲ್ಲ. ಹಾಗಾಗಿ ಕದನ ಕುತೂಹಲ ಮೂಡಿದೆ.

ಯುಗಾದಿ, ಈದ್ ಸಂಭ್ರಮದಲ್ಲಿ ಸಾಲು ಸಾಲು ರಜೆಗಳು ಇರುವುದರಿಂದ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆಗೆ ಎರಡೂ ಚಿತ್ರತಂಡಗಳು ಮುಂದಾಗಿವೆ. ಯಾವ ಸಿನಿಮಾ ಬಲಾಬಲ ಹೇಗಿದೆ ಎನ್ನುವುದೇ ಈಗ ಕುತೂಹಲಕ್ಕೆ ಕಾರಣವಾಗಿದೆ. 'ಧುರಂಧರ್' ಬ್ಲಾಕ್‌ಬಸ್ಟರ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಸೀಕ್ವೆಲ್ ಹೈಪ್ ಕ್ರಿಯೇಟ್ ಮಾಡಿದ. ಇನ್ನು 'KGF -2' ಬಳಿಕ ಯಶ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ 'ಟಾಕ್ಸಿಕ್' ಸದ್ದು ಮಾಡ್ತಿದೆ. ಇತ್ತೀಚೆಗೆ ಟೀಸರ್ ಬಂದು ಹಿಟ್ ಲಿಸ್ಟ್ ಸೇರಿದೆ.

Allu Arjun Fans Take Dig at Yash s Toxic Ahead of Dhurandhar-2 Clash Fan War Erupts Online

'ಟಾಕ್ಸಿಕ್' ವರ್ಸಸ್ 'ಧುರಂಧರ್'- 2 ಬಾಕ್ಸಾಫೀಸ್‌ ಕದನದಲ್ಲಿ ಯಾರ ಕೈ ಮೇಲಾಗುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಸದ್ಯ ಆದಿತ್ಯಧರ್ ನಿರ್ದೇಶನದ 'ಧುರಂಧರ್'- 2 ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದೆಲ್ಲದರ ನಡುವೆ ಅಲ್ಲು ಅರ್ಜುನ್ ಫ್ಯಾನ್ಸ್ 'ಟಾಕ್ಸಿಕ್' ಸಿನಿಮಾ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪೋಸ್ಟ್, ಕಾಮೆಂಟ್ಸ್ ಮಾಡುತ್ತಿದ್ದಾರೆ.

'ಧುರಂಧರ್'- 2 ಎದುರು 'ಟಾಕ್ಸಿಕ್' ಯಶ್ ಆಟ ನಡೆಯಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಕೂಡ ತಿರುಗೇಟು ಕೊಟ್ಟಿದ್ದಾರೆ. 'ಪುಷ್ಪ'-2 ಸಿನಿಮಾ ರಿಲೀಸ್ ಸಮಯದಲ್ಲಿ ಕಾಡಬೇಡಿ 'ಛಾವ' ಸಿನಿಮಾ ಬಿಡುಗಡೆ ತಡ ಆಗುವಂತೆ ನೋಡಿಕೊಂಡಿದ್ರು ಅಲ್ಲು ಅರ್ಜುನ್. ಅದನ್ನು ಮರೆಯಬೇಡಿ. ಹೇಳಿದ ಮಾತಿಗೆ ಬದ್ಧವಾಗಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಮಾಡ್ತಿದ್ದಾರೆ. ಇದು ಧೈರ್ಯ ಅಂದ್ರೆ ಎಂದು ಕೌಂಟರ್ ಕೊಡುತ್ತಿದ್ದಾರೆ.

Allu Arjun Fans Take Dig at Yash s Toxic Ahead of Dhurandhar-2 Clash Fan War Erupts Online

'ಪುಷ್ಪ'-2 ರಿಲೀಸ್ ಸಮಯದಲ್ಲಿ 'ಛಾವ' ಸಿನಿಮಾ ರಿಲೀಸ್ ಮುಂದೂಡಿದ್ದಕ್ಕೆ ಆ ತಂಡಕ್ಕೆ ಧನ್ಯವಾದ ಎಂದು ಅಲ್ಲು ಅರ್ಜುನ್ ಹೇಳಿದ್ದ ವೀಡಿಯೋವನ್ನು ಯಶ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. "ಡಿಸೆಂಬರ್ 5ಕ್ಕೆ 'ಛಾವ' ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ನಾವು ಕೇಳಿಕೊಂಡಿದ್ದಕ್ಕೆ ರಿಲೀಸ್ ಮುಂದೂಡಿದ್ದರು. ನಾನು ಅವರಿಗೆ ಕರೆ ಮಾಡಿ ಧನ್ಯವಾದ ತಿಳಿಸಿದೆ. ನಾವೆಲ್ಲಾ 'ಪುಷ್ಪ' ಫ್ಯಾನ್ಸ್. ನಿಮ್ಮ ಸಿನಿಮಾ ಬರಲಿ, ದಾರಿ ಮಾಡಿಕೊಡ್ತೀವಿ ಅಂದ್ರು. ಅವರಿಗೆ ಧನ್ಯವಾದ" ಎಂದು ಅಲ್ಲು ಅರ್ಜುನ್ ಅಂದು ಹೇಳಿದ್ದರು.

ಹಣ ಹಾಕಿರುವ ನಿರ್ಮಾಪಕರಿಗೆ ನಷ್ಟ ಆಗಬಾರದು ಎಂದು ಅಲ್ಲು ಅರ್ಜುನ್ ಮನವಿ ಮಾಡಿಕೊಂಡಿದ್ದರು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ 'ಟಾಕ್ಸಿಕ್' ಸಿನಿಮಾ ನಿರ್ಮಾಪಕರಲ್ಲಿ ಯಶ್ ಕೂಡ ಒಬ್ರು. ತಲೆ ಕೆಡಿಸಿಕೊಳ್ಳುವುದು ಬೇಡ. ಅವರಿಗೆ ಎಲ್ಲಾ ಗೊತ್ತಿಲ್ಲ ಎಂದು ಯಶ್ ಫ್ಯಾನ್ಸ್ ಕೌಂಟರ್ ಕೊಟ್ಟಿದ್ದಾರೆ. ಸುಖಾಸುಮ್ಮನೆ ಅಲ್ಲು ಅರ್ಜುನ್ ಫ್ಯಾನ್ಸ್ ಯಾಕೆ ಕಾಲು ಕೆರೆದುಕೊಂಡು ಕಿರಿಕ್ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ನಯನತಾರಾ, ಹುಮಾ ಖುರೇಷಿ, ಕಿಯಾರಾ ಅದ್ವಾನಿ, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್, ಟೊವಿನೊ ಥಾಮಸ್ ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

More from Filmibeat

Read more about: yash toxic allu arjun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X