For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ನೆನದು ಭಾವುಕರಾದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ

  |

  ನಟ ಪುನೀತ್ ರಾಜ್‌ಕುಮಾರ್ ನಿಧನವಾಗಿ ಮೂರು ದಿನವಾಗಿದೆ ಆದರೆ ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನ್ನಡಿಗರು ಮಾತ್ರವಲ್ಲ ನೆರೆ-ಹೊರೆಯ ಸಿನಿಮಾ ಸ್ಟಾರ್‌ಗಳು ಸಹ ತೀವ್ರ ಆಘಾತಕ್ಕೆ ಒಳಪಟ್ಟಿದ್ದಾರೆ.

  ನಟ ಪುನೀತ್ ರಾಜ್‌ಕುಮಾರ್ ಗೆಳೆಯರಾಗಿದ್ದ ಅಲ್ಲು ಅರ್ಜುನ್ ಗೆಳೆಯನ ಹಠಾತ್ ಅಗಲಿಕೆಯ ಬಗ್ಗೆ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದು, ತೆಲುಗು ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪುನೀತ್ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅಗಲಿದ ತಮ್ಮ ಗೆಳೆಯನ್ನು ಕೊಂಡಾಡಿದ್ದಾರೆ.

  ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟಿಸಿರುವ 'ಪುಷ್ಪಕ ವಿಮಾನ' ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್ ಮಾತನಾಡುತ್ತಾ, ''ಮುಖ್ಯ ವಿಷಯ ಮಾತನಾಡಬೇಕು. ಪುನೀತ್ ರಾಜ್‌ಕುಮಾರ್ ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಿತರು. ನಮ್ಮ ಮನೆಗೆ ಹಲವು ಬಾರಿ ಬಂದಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಾನು ಸಹ ಬೆಂಗಳೂರಿಗೆ ಹೋದಾಗೆಲ್ಲ ಅವರನ್ನು ಭೇಟಿ ಮಾಡುತ್ತಿದ್ದೆ. ಇಬ್ಬರ ನಡುವೆ ಒಂದು ಪರಸ್ಪರ ಗೌರವ-ಆದರ ಇತ್ತು. ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಪರಸ್ಪರ ಭೇಟಿಯಾಗಿದ್ದೆವು. ಡ್ಯಾನ್ಸ್ ಕಾರ್ಯಕ್ರಮವೊಂದಕ್ಕೆ ಒಟ್ಟಿಗೆ ಜಡ್ಜ್ ಆಗಿ ಭಾಗವಹಿಸಿದ್ದೆವು'' ಎಂದಿದ್ದಾರೆ ಅಲ್ಲು ಅರ್ಜುನ್.

  ಸಮಯ ಕಳೆದಂತೆ ನನ್ನ ಎದೆ ಭಾರವಾಗತೊಡಗಿತು: ಅಲ್ಲು ಅರ್ಜುನ್

  ಸಮಯ ಕಳೆದಂತೆ ನನ್ನ ಎದೆ ಭಾರವಾಗತೊಡಗಿತು: ಅಲ್ಲು ಅರ್ಜುನ್

  ''ಯಾವಾಗ ಸಿಕ್ಕರೂ ಪ್ರೀತಿಯಿಂದ ಮಾತನಾಡುತ್ತಿದ್ದರು. ಮನೆಗೆ ಆಹ್ವಾನಿಸುತ್ತಿದ್ದರು. ಹೀಗೆ ಪ್ರೀತಿಯಿಂದ ಇರಬೇಕಾದರೆ ಹಠಾತ್ತನೆ ಇಂದು ಅವರಿಲ್ಲ. ಸುದ್ದಿ ಮೊದಲ ಬಾರಿಗೆ ಕೇಳಿದಾಗ ನನಗೆ ಆಘಾತ ಎನಿಸಿತು. ಸುದ್ದಿ ಕೇಳಿದಾಗ ಉಂಟಾಗಿದ್ದ ಆಘಾತ ಸಮಯ ಕಳೆಯುತ್ತಾ ಕಳೆಯುತ್ತಾ ಹೆಚ್ಚಾಗುತ್ತಾ ಸಾಗಿತು. ಜೀವನ ಎಷ್ಟು ಅನಿರೀಕ್ಷಿತ ಎನ್ನಿಸಲು ಆರಂಭವಾಯ್ತು. ಒಂದು ಚಿಟಿಕೆ ಹೊಡೆಯುವಷ್ಟರಲ್ಲಿ ಜೀವನಗಳು ಪಲ್ಲಟವಾಗಿ ಹೋಗುತ್ತವೆ'' ಎಂದರು ಅಲ್ಲು ಅರ್ಜುನ್.

  ರಾಣಾ ಕರೆ ಮಾಡಿ ಭಾವುಕನಾದ: ಅಲ್ಲು ಅರ್ಜುನ್

  ರಾಣಾ ಕರೆ ಮಾಡಿ ಭಾವುಕನಾದ: ಅಲ್ಲು ಅರ್ಜುನ್

  ''ನನಗೆ ನಟ ರಾಣಾ ಹಲವು ಬಾರಿ ಕರೆ ಮಾಡಿದ್ದ. ಆತ ನನಗೆ ಆತ್ಮೀಯ ಗೆಳೆಯ. ಕರೆ ಮಾಡಿದವನೇ ಪುನೀತ್ ಸಾವಿನ ಬಗ್ಗೆ ಮಾತನಾಡುತ್ತಾ, ''ಜೀವನ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ ಎಂದ ಅವನು ಬಹಳ ಡಿಸ್ಟರ್ಬ್ ಆಗಿದ್ದ. ಪುನೀತ್ ರಾಜ್‌ಕುಮಾರ್ ದೊಡ್ಡ ಸೂಪರ್ ಸ್ಟಾರ್. ಅದ್ಭುತವಾದ ವ್ಯಕ್ತಿತ್ವ ಉಳ್ಳವರಾಗಿದ್ದರು. ಕನ್ನಡ ಉದ್ಯಮ ಮತ್ತು ಭಾರತೀಯ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆ ಅವರು'' ಎಂದರು ಅಲ್ಲು ಅರ್ಜುನ್. ಅಲ್ಲಿದ್ದ ಎಲ್ಲರಿಗೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡುವಂತೆ ಅಲ್ಲು ಅರ್ಜುನ್ ಮನವಿ ಮಾಡಿದರು ಅಂತೆಯೇ ಎಲ್ಲರೂ ಎರಡು ನಿಮಿಷ ಮೌನ ಆಚರಿಸಿದರು.

  ಪಾರ್ವತಮ್ಮ ರಾಜ್‌ಕುಮಾರ್ ಅವರಿಗಾಗಿ ಮೌನ ಆಚರಿಸಿದ್ದ ಅಲ್ಲು

  ಪಾರ್ವತಮ್ಮ ರಾಜ್‌ಕುಮಾರ್ ಅವರಿಗಾಗಿ ಮೌನ ಆಚರಿಸಿದ್ದ ಅಲ್ಲು

  ಅಲ್ಲು ಅರ್ಜುನ್ ಹಾಗೂ ಪುನೀತ್ ಬಹಳ ಆತ್ಮೀಯ ಗೆಳೆಯರು. ಅಲ್ಲು ಅರ್ಜುನ್ ತಮ್ಮ ಮದುವೆ ಆಹ್ವಾನ ಪತ್ರಿಕೆ ನೀಡಲು ಪುನೀತ್ ಮನೆಗೆ ಬಂದಿದ್ದಾಗ. ನನಗೆ ಅಪ್ಪು ಫೈಟ್ ನೋಡಿದರೆ ಭಯವಾಗುತ್ತದೆ ಎಂದಿದ್ದರು. ಶಿವಣ್ಣನ ಮನೆಗೂ ತೆರಳಿದ್ದ ಅಲ್ಲು ಅರ್ಜುನ್ ಶಿವಣ್ಣನ ಅಭಿಮಾನಿ ತಾನು ಎಂದಿದ್ದರು. ದೊಡ್ಮನೆ ಕುಟುಂಬದ ಜೊತೆ ಆಪ್ತ ಬಂಧ ಹೊಂದಿದ್ದ ಅಲ್ಲು ಅರ್ಜುನ್ ತಮ್ಮ 'ದುವ್ವಾಡ ಜಗನ್ನಾದ' ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದಾಗ ಆಗಷ್ಟೆ ನಿಧನರಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಎರಡು ನಿಮಿಷ ಮೌನ ಆಚರಿಸಿದ್ದರು.

  ಎರಡು ಗಂಟೆಗಳಷ್ಟೆ ನಾನು ಅವರೊಟ್ಟಿಗೆ ಕಳೆದಿದ್ದೇನೆ: ವಿಜಯ್-ಪುನೀತ್

  ಎರಡು ಗಂಟೆಗಳಷ್ಟೆ ನಾನು ಅವರೊಟ್ಟಿಗೆ ಕಳೆದಿದ್ದೇನೆ: ವಿಜಯ್-ಪುನೀತ್

  'ಪುಷ್ಪಕ ವಿಮಾನ' ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿಜಯ್ ದೇವರಕೊಂಡ ಸಹ, ''ನಾನು ಪುನೀತ್‌ ಅಣ್ಣನನ್ನು ಎರಡು ಭಾರಿ ಮಾತ್ರವೇ ಭೇಟಿಯಾಗಿದ್ದೆ. ಅವರು ತಮ್ಮ ಮನೆಗೆ ನನ್ನನ್ನು ಆಹ್ವಾನಿಸಿದ್ದರು. ಹೋಗಿ ಒಂಡೆರಡು ಗಂಟೆಗಳ ಕಾಲ ಅವರೊಟ್ಟಿಗೆ ಕಾಲ ಕಳೆದಿದ್ದೆ. ನನಗೆ ಅವರ ಸಾವು ತೀವ್ರ ಆಘಾತ ಉಂಟು ಮಾಡಿದೆ. ಸಾವಿನ ಸುದ್ದಿ ಕೇಳಿದಾಗಿನಿಂದಲೂ ವೈರಾಗ್ಯ ಭಾವ ಆವರಿಸಿದೆ. ನಾಳೆ ನಾವೆಲ್ಲರೂ ಹೋಗುತ್ತೇವೆ. ದಯವಿಟ್ಟು ಇರುವಷ್ಟು ಕಾಲ ಸಂತೋಶದಿಂದಿರಿ'' ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

  English summary
  Allu Arjuna and Vijay Devarkonda emotional words about late actor Puneeth Rajkumar. Allu says Puneeth is pride of south Indian cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X