»   » ಆಲ್ಫೋನ್ಸಾ ಮದುವೆಯಾಗಿದ್ದಾರೆ ಎನ್ನುವ ಸುದ್ದಿ

ಆಲ್ಫೋನ್ಸಾ ಮದುವೆಯಾಗಿದ್ದಾರೆ ಎನ್ನುವ ಸುದ್ದಿ

By: *ಜಲಪತಿ, ಧರ್ಮ
Subscribe to Filmibeat Kannada

ನೀವು ಮಿಡ್‌ನೈಟ್‌ ಮಸಾಲ ನೋಡುತ್ತೀರಾದರೆ, 'ಬೊಂಬಾಟು ಹುಡುಗಿ ಥಕಥೈ ಅಂತಾ ಬಂದೇ ಬಿಟ್ಟಿತಲ್ಲೋ..." ಹಾಡು ನೋಡಿಯೇ ಇರುತ್ತೀರಿ. ಮಿಂಚಿನ ತೊಡೆಗಳನ್ನು ಬಳುಕಿಸುತ್ತಾ ಕುಣಿಯುವ ಆಲ್ಫೋನ್ಸಾ ಎನ್ನುವ ಸುಂದರಿಯನ್ನು ಕಣ್ಣು ತುಂಬಿ ಕೊಂಡಿಯೇ ಇರುತ್ತೀರಿ. ಇದು ಆಂಧ್ರ ಹೆಂಡ್ತಿ ಚಿತ್ರದ ಸೆನ್ಸೇಷನ್‌ ಹಾಡು. ಈ ಹಾಡಿನ ಮೂಲಕ ಚಿತ್ರದ ನಾಯಕಿ ರಮ್ಯಕೃಷ್ಣಳಿಗಿಂತ ಹೆಚ್ಚು ಹೆಸರು ಆಲ್ಫೋನ್ಸಾ ಗೆ ದೊರೆಯಿತು.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಈ ಹೊತ್ತಿನ ಸೆನ್ಸೇಷನ್‌ಗಳಲ್ಲಿ ಆಲ್ಫೋನ್ಸಾ ಕೂಡ ಒಬ್ಬರು. ಮಿಡ್‌ನೈಟ್‌ ಮಸಾಲಾ ಸರಣಿಯಲ್ಲಿ ಯಾವುದಾದರೊಂದು ಹಾಡಲ್ಲಿ ಬಳುಕುತ್ತಾ ಕಾಣುವ ಈ ನಟಿ ಎಂಟ್ರಿ ಕೊಟ್ಟದ್ದು ರಜನೀಕಾಂತ್‌ ನಟಿಸಿದ ಭಾಷಾ ಚಿತ್ರದಲ್ಲಿ ! ಪ್ರಭುದೇವ ಮೊದಲಾದ ದಿಗ್ಗಜರ ಜೊತೆಗೂ ಹೆಜ್ಜೆ ಹಾಕುವ ಅವಕಾಶ ಗಿಟ್ಟಿಸಿದ ಆಲ್ಫೋನ್ಸಾ ಒಂದು ಹಿಡಿ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಸಿಲ್ಕ್‌ಸ್ಮಿತಾ ಇವರ ಸ್ಫೂರ್ತಿಯಂತೆ.ಆಲ್ಫೋನ್ಸಾ ಅಂತರಂಗವನ್ನು ನೀವೇ ಓದಿ..

ಡ್ಯಾನ್ಸರ್‌ ಆಗಲು ನಿಮಗೆ ಪ್ರೇರೇಪಣೆ ಏನು?
ನನ್ನ ಕುಟುಂಬ. ನನ್ನ ಅಪ್ಪ ಆ್ಯಂಥೋನಿ, ಚಿರಂಜೀವಿ ಹಾಗೂ ರಜನೀಕಾಂತ್‌ ಜೊತೆಗೆ ಡ್ಯಾನ್ಸ್‌ ಮಾಸ್ಟರ್‌ ಆಗಿ ಕೆಲಸ ಮಾಡಿದ್ದಾರೆ. ತಮಿಳು, ತೆಲುಗಿನ 250 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕುಟುಂಬದ ಬಿಸಿನೆಸ್ಸೇ ನೃತ್ಯವಾದ್ದರಿಂದ ಸ್ವಾಭಾವಿಕವಾಗಿ ನನ್ನನ್ನೂ ಅದೇ ಸೆಳೆಯಿತು.

ರಜನೀಕಾಂತ್‌ ಜೊತೆಗೆ ಮೊದಲ ಚಿತ್ರ! ಈ ಅಪರೂಪದ ಅವಕಾಶ ಸಿಕ್ಕಿದ್ದು ಹೇಗೆ?
ಚೆನ್ನೈನಲ್ಲಿ ಒಂದು ಡ್ಯಾನ್ಸ್‌ ಶೋ ಇತ್ತು. ರಜನೀಕಾಂತ್‌ ಆ ಕಾರ್ಯಕ್ರಮಕ್ಕೆ ಬಂದಿದ್ದರು. ನನ್ನ ಡ್ಯಾನ್ಸ್‌ ಅವರಿಗೆ ಇಷ್ಟವಾಯಿತು. 'ಭಾಷಾ"ದಲ್ಲಿ ಒಂದು ಹಾಡಿಗೆ ನೀವ್ಯಾಕೆ ಡ್ಯಾನ್ಸ್‌ ಮಾಡಬಾರದು ಅಂದರು. ಅದೃಷ್ಟ ಖುಲಾಯಿಸಿತು.

ನೀವು ನಟನೆಗೆ ಯಾಕೆ ಪ್ರಾಮುಖ್ಯತೆ ಕೊಡಲಿಲ್ಲ?
'
ಭಾಷಾ" ನಂತರ ನಿರ್ಮಾಪಕರು ನನ್ನನ್ನು ಕರೆಯುತ್ತಿರುವುದು ಡ್ಯಾನ್ಸ್‌ ಮಾಡಲು ಮಾತ್ರ. ನಾನೇನು ಮಾಡಲಿ ನೀವೇ ಹೇಳಿ? 'ಕುಯಾಲ್‌ ಟೊಪ್ಪು " ಎಂಬ ತಮಿಳು ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದೆ. ಆದರೆ ಚಿತ್ರ ಇನ್ನೂ ತೆರೆ ಕಂಡಿಲ್ಲ. ಹೀಗಾಗಿ ನನಗೆ ನಟನೆ ಇಷ್ಟವಿಲ್ಲ. ಡ್ಯಾನ್ಸ್‌ ಮಾಡಿಯೇ ಹಣ ಸಂಪಾದಿಸುತ್ತಿದ್ದೇನೆ. ಏನೇ ಮಾತಾಡಿದರೂ ಕೊನೆಗೆ ದುಡ್ಡೇ ಮುಖ್ಯ ಅಲ್ಲವೇ? ಅದು ನನಗೆ ಸಿಗುತ್ತಿದೆ. ನಾನು ಸಂತೋಷವಾಗಿದೇನೆ.

ಹಾಗಾದರೆ ನೀವು ಡ್ಯಾನ್ಸರ್‌ ಆಗಿಯೇ ಉಳಿಯುವಿರಾ?
ಹೌದು ಮತ್ತೆ ಇಲ್ಲ. ಸಿನಿಮಾ ಜಗತ್ತಿನಲ್ಲಿ ಇರುವವರೆಗೆ ಡ್ಯಾನ್ಸರ್‌ ಆಗಿಯೇ ಉಳಿಯುತ್ತೇನೆ. ಹೆಲೆನ್‌ ಹಾಗೂ ಸಿಲ್ಕ್‌ ಸ್ಮಿತಾ ವರ್ಚಸ್ಸನ್ನು ಗಳಿಸಬೇಕು ಅನ್ನೋದು ನನ್ನ ಆಸೆ ! ಆದರೆ, ಮದುವೆ ಆದ ಮೇಲೆ ಕುಣಿತಕ್ಕೆ ಗುಡ್‌ ಬೈ ಹೇಳುತ್ತೇನೆ. ಮದುವೆ ನಂತರ ಈ ಪ್ರೊಫೆಷನ್‌ ಸರಿಯಲ್ಲ ಅನ್ನೋದು ನನ್ನ ಅಭಿಪ್ರಾಯ.

ನಿಮ್ಮ ಮದುವೆ ಯಾವಾಗ?
ಗೊತ್ತಿಲ್ಲ. ಇನ್ನು 2 ವರ್ಷ ಅಂತೂ ಖಂಡಿತ ಇಲ್ಲ.

ಲವ್‌ ಮ್ಯಾರೇಜ್‌ ಹಾಗೂ ಅರೇಂಜ್‌ ಮ್ಯಾರೇಜ್‌- ನಿಮ್ಮ ಛಾಯ್ಸ್‌ ಯಾವುದು?
ಇದುವರೆಗೂ ಯಾರನ್ನೂ ನಾನು ಪ್ರೀತಿಸಿಲ್ಲ. ಬಾಯ್‌ ಫ್ರೆಂಡ್ಸೂ ಇಲ್ಲ. ಯಾರಾದರೂ ಮೆಚ್ಚಾದರೆ, ಲವ್‌ ಮ್ಯಾರೇಜೇ ಆಗುತ್ತೇನೆ.

ನಿಮ್ಮ ನೆಚ್ಚಿನ ಡ್ಯಾನ್ಸರ್‌ಗಳು ಹಾಗೂ ಡ್ಯಾನ್ಸ್‌ ಮಾಸ್ಟರ್‌ಗಳಾರು?
ನನಗೆ ಹೆಲೆನ್‌ ಅಂದರೆ ತುಂಬಾ ಇಷ್ಟ. ಶೀ ಈಸ್‌ ಗ್ರೇಟ್‌. ಡ್ಯಾನ್ಸ್‌ ಮಾಸ್ಟರ್‌ ಹೀರಾ ಲಾಲ್‌ ಕೂಡ ತುಂಬಾ ಮೆಚ್ಚು. ಆದರೆ, ಸಪ್ನೆ ಚಿತ್ರದಲ್ಲಿ ಪ್ರಭುದೇವ ಜೊತೆ ಕುಣಿದದ್ದನ್ನ ನಾನು ಮರೆಯಲಾರೆ.

ಶೂಟಿಂಗ್‌ ಬಿಡುವಿನಲ್ಲಿ ಏನು ಮಾಡುತ್ತೀರಿ?
ಸಿನಿಮಾ ನೋಡ್ತೀನಿ. ಡ್ಯಾನ್ಸ್‌ ಪ್ರಾಕ್ಟೀಸ್‌ ಮಾಡ್ತೀನಿ. ಕುದುರೆ ಸವಾರಿ ಮಾಡೋದು ನಂಗಿಷ್ಟ.

English summary
Meet Alphonsa, Night Queen of Midnight Masalas
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada