ದುಡ್ಡು, ದುಡ್ಡು, ದುಡ್ಡು, ರಚಿತಾ ರಾಮ್ ಹೋದಲ್ಲಿ ಬಂದಲ್ಲಿ ಬರೀ ದುಡ್ಡಿನದ್ದೇ ಪ್ರಶ್ನೆ..!

ರಚಿತಾ ರಾಮ್ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್. ಬಿಂದಾಸ್ ಚೆಲುವೆ. ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ಚಾಲ್ತಿಯಲ್ಲಿರುವ ರಚಿತಾ ಇಲ್ಲಿಯವರೆಗೆ ದರ್ಶನ್, ಸುದೀಪ್, ಪುನೀತ್, ಶಿವಣ್ಣ, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಹೀಗೆ ಅನೇಕ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದಾರೆ.

ಇನ್ನು, ರಚಿತಾ ಏಕಾಏಕಿ ಸ್ಟಾರ್ ಆದವರಲ್ಲ. ಚಿತ್ರರಂಗಕ್ಕೆ ಇದ್ದಕ್ಕಿದ್ದಂತೆ ಬಂದವರಲ್ಲ. ಬೆಳ್ಳಿತೆರೆಗೆ ಲಗ್ಗೆ ಇಡುವ ಮುನ್ನ ಹಲವು ವರ್ಷ ಕಿರುತೆರೆಯಲ್ಲಿ ರಚಿತಾ ರಾಮ್ ಬೆವರು ಸುರಿಸಿದ್ದಾರೆ. ಹಂತ ಹಂತವಾಗಿ ಒಂದೊಂದೆ ಮೆಟ್ಟಿಲನ್ನೇರುತ್ತಾ ಮೇಲೆ ಬಂದಿದ್ದಾರೆ. ಆದರೆ .. ಕೆಲವರಿಗೆ ರಚಿತಾ ರಾಮ್ ಈ ಬೆಳವಣಿಗೆಯ ಬಗ್ಗೆ ಅನುಮಾನ ಇದೆ.

am-i-working-for-free-rachita-ram-reacts-angrily-to-questions-about-her-changed-lifestyle

ರಚಿತಾ ರಾಮ್ ಅವರ ಈ ಸುದೀರ್ಘ ಪ್ರಯಾಣದಲ್ಲಿ ಕಲ್ಲು ಮುಳ್ಳುಗಳಿಗಿಂತ ಹೂವಿನ ಗೊಂಡೆ ಹಿಡಿದು ನಿಂತವರೇ ಹೆಚ್ಚು ಎನ್ನುವ ವಾದವನ್ನು ಅನೇಕರು ಮಾಡುತ್ತಿದ್ದಾರೆ. ಉದಾಹರಣೆಗೆ ವಕೀಲ್ ಸಾಬ್ ಜಗದೀಶ್. ರಚಿತಾ ರಾಮ್ ಅವರ ಸಂಪಾದನೆ -ಸಂಭಾವನೆ ಮತ್ತು ಖರ್ಚು-ವೆಚ್ಚದ ಕುರಿತು ಮೊದಲಿಂದ ಪ್ರಶ್ನೆಗಳನ್ನು ಕೇಳುತ್ತಾ ಜಗದೀಶ್ ಬರುತ್ತಿದ್ದಾರೆ. ದುಬಾರಿ ಕಾರು ಖರೀದಿಸಲು ದುಡ್ಡು ಎಲ್ಲಿಂದ ಬಂತು ಎಂದೆಲ್ಲ ಪ್ರಶ್ನೆಯನ್ನು ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ರಚಿತಾ ರಾಮ್ ಖಂಡತುಂಡ ಉತ್ತರ ನೀಡಿದ್ದಾರೆ. ನಾನೇನು ಫ್ರೀ ಆಗಿ ಕೆಲಸ ಮಾಡ್ತಿದ್ದೀನಾ ಎಂದು ಗುಡುಗಿದ್ದಾರೆ.

ಈ ಕುರಿತು ಪವರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಚಿತಾ ರಾಮ್ ನನಗೊಂದು ವಿಚಾರ ಹೇಳಿ ನಾನೇನಾದರೂ ಫ್ರೀ ಆಗಿ ಕೆಲಸ ಮಾಡ್ತಿದ್ದೀನಾ ಎಂದು ಪ್ರಶ್ನೆ ಕೇಳಿದ್ಧಾರೆ. ಯಾವ ಕೆಲಸ ಮಾಡದೇ ಮನೆಯಲ್ಲಿ ಆರಾಮಾಗಿ ರಾಣಿಯಂತೆ ಕುಂತ್ಕೊಂಡಿದ್ದರೆ ಹಣ ಎಲ್ಲಿಂದ ಬರುತ್ತೆ ಎಂಬ ಪ್ರಶ್ನೆ ಕೇಳಬಹುದು ಎಂದಿರುವ ರಚಿತಾ ರಾಮ್ ಹಣ ಎಲ್ಲಿಂದ ಬರುತ್ತೆ ಎನ್ನುವ ಪ್ರಶ್ನೆ ನನ್ನ ತಂದೆ ತಾಯಿ ನನ್ನ ಕೇಳಿದರೆ ಅದಕ್ಕೊಂದು ಬೆಲೆ ಅವರನ್ನು ಹೊರತು ಪಡಿಸಿದರೆ ಬೇರೆಯವರಿಗೆ ಈ ಪ್ರಶ್ನೆ ಕೇಳುವ ಅರ್ಹತೆ ಇಲ್ಲ ಎಂದಿದ್ದಾರೆ. ನನಗೆ ಜನ್ ನೀಡಿದವರು ಹಣ ಎಲ್ಲಿಂದ ಬರ್ತಿದೆ ಎಂದು ಪ್ರಶ್ನೆ ಕೇಳಿದಾಗ ಉತ್ತರ ಕೊಡುವುದು ನನ್ನ ಕರ್ತವ್ಯ ಎಂದಿದ್ದಾರೆ. ಕೆಲಸ ಮಾಡ್ತಿದ್ದರೂ ಈ ತರಹದ ಪ್ರಶ್ನೆ ಕೇಳ್ತಾರೆ ಅಂದರೆ ಹೇಳುವ ರೀತಿಯಲ್ಲಿ ಹೇಳ್ತೀವಿ ಅಷ್ಟೇ ಎಂದು ಹೇಳಿದ್ದಾರೆ.

ಇನ್ನು ಅಂಬಾನಿ ಕುಟುಂಬದ ಹಿನ್ನೆಲೆ ಇಲ್ಲದಿರುವ ಪ್ರತಿಯೊಬ್ಬ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಾಧನೆ ಮಾಡಬೇಕೆನ್ನುವ ಹುಚ್ಚಿರುತ್ತೆ. ಪ್ರತಿ ದಿನ ಏನಾದರೂ ಒಳ್ಳೆಯದಾಗಬೇಕು ಎಂಬ ಆಸೆ ಇರುತ್ತೆ, ಜೊತೆಯಲ್ಲಿದ್ದವರೆಲ್ಲ ಬೆಳೆಯುತ್ತಿರುವಾಗ ನಾವು ಬೆಳಿಬೇಕು, ಲೈಫ್ ಸ್ಟೈಲ್ ಬದಲಿಸಿಕೊಳ್ಳಬೇಕೆಂಬ ಭಾವನೆ ಮೂಡುತ್ತೆ ಎಂದಿರುವ ರಚಿತಾ ರಾಮ್ ಬೇರೆಯವರಿಗೆ ಬಗ್ಗೆ ನನಗೆ ಗೊತ್ತಿಲ್ಲ ನನಗಂತೂ ಹಾಗೇ ಅನ್ಸುತ್ತೆ ಎಂದಿದ್ದಾರೆ. ದರ್ಶನ್ ಸರ್ ಇರಬಹುದು, ಯಶ್ ಅವರಿರಬಹುದು, ಗಣೇಶ್ ಸರ್ ಇರಬಹುದು ಇವರೆಲ್ಲ ನನ್ನ ಬದುಕಿಗೆ ಸ್ಫೂರ್ತಿ ಎಂದಿದ್ದಾರೆ. ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಸರ್ ಮತ್ತು ಸುಧಾಮೂರ್ತಿ ಮೇಡಂನ ನೋಡಿ ಕಲಿಯಬೇಕು. ಆಗ ಅವರು ಏನು ಮಾಡುತ್ತಿದ್ದರು ಈಗ ಅವರು ಹೇಗಿದ್ದಾರೆ? ನಮ್ಮ ಲೈಫ್‌ಸ್ಟೈಲ್ ಬದಲಾಗುತ್ತಿದೆ ಅಂದ್ರೆ ಮತ್ತೊಬ್ಬರು ಕಾಣಿಕೆ ಕೊಡುತ್ತಿದ್ದಾರೆ, ಸಹಾಯ ಮಾಡುತ್ತಿದ್ದಾರೆ ಅಂತಲ್ಲ. ನಾನು ಎಷ್ಟೋ ವರ್ಷಗಳಿಂದ ಕಷ್ಟ ಪಟ್ಟು ಕೆಲಸ ಮಾಡುತ್ತಿರುವಾಗ ಯಾಕೆ ನಾನು ಹೆದರಿಕೊಳ್ಳಬೇಕು..? ಎಂದು ಹೇಳಿರುವ ರಚಿತಾ ರಾಮ್ ನೀವು ಪ್ರಾಮಾಣಿಕರಾಗಿದ್ದಾಗ ನಿಮ್ಮ ಕೆಲಸದ ಮೇಲೆ ನಿಮಗೆ ಗೌರವ ಇದ್ದಾಗ ಇವೆಲ್ಲ ವಿಚಾರಕ್ಕೆ ತಲೆ ಕೊಡಬಾರದು ಎಂದು ಹೇಳಿದ್ದಾರೆ.

ಇನ್ನು ಸಂಭಾವನೆ ವಿಚಾರಕ್ಕೆ ಕೂಡ ಪ್ರತಿಕ್ರಿಯೆಯನ್ನು ನೀಡಿರುವ ರಚಿತಾ ರಾಮ್ ಗಂಡ ಮಕ್ಕಳ ಸಂಬಳ ಕೇಳಬಾರದು ಹೆಣ್ಣು ಮಕ್ಕಳ ವಯಸ್ಸು ಕೇಳಬಾರದು ಎಂದು ಹಿಂದೆ ಎಲ್ಲ ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಇಬ್ಬರಿಗೂ ವಯಸ್ಸು ಕೇಳಬಾರದು ಸಂಬಳವನ್ನು ಕೇಳಬಾರದು ಎಂದು ಹೇಳಿದ್ದಾರೆ. ಕೆಲ ವಿಚಾರ ಗೌಪ್ಯವಾಗಿ ಇದ್ದರೆ ಒಳ್ಳೆಯದು, ಆ ಪೈಕಿ ಸಂಭಾವನೆ ವಿಚಾರ ಕೂಡ ಒಂದು ಅದು ಹಾಗೇ ಇರಲಿ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X