ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಆಫರ್ ಪಡೆದ ಸೌತ್ ಇಂಡಿಯಾ ನಟಿ, ಯಾರಾಕೆ?
ಧಾರಾವಾಹಿ, ಸಿನಿಮಾ, ಟಿವಿ, ಚಿತ್ರಮಂದಿರಗಳನ್ನು ಮೀರಿ ಇಂದು ಮನರಂಜನಾ ಜಗತ್ತು ಬೆಳೆದಿದೆ. ಈಗೇನಿದ್ದರೂ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್, ವೆಬ್ ಸೀರಿಸ್ ಕಾಲ. ಇಂತಹ ಸಮಯದಲ್ಲಿ ದಕ್ಷಿಣ ಭಾರತದ ನಟಿಗೆ ದೊಡ್ಡದೊಂದು ಅವಕಾಶ ಸಿಕ್ಕಿದೆ.
ನಟಿ ಅಮಲಾ ಪೌಲ್ ನೆಟ್ ಫ್ಲಿಕ್ಸ್ ಇಂಡಿಯಾ ದಿಂದ ಆಫರ್ ಪಡೆದಿದ್ದಾರೆ. ವಿಶೇಷ ಎಂದರೆ, ನೆಟ್ ಫ್ಲಿಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಸೌತ್ ನಟಿ ಎನ್ನುವ ಹೆಗ್ಗಳಿಕೆ ಅಮಲಾ ಪೌಲ್ ಗೆ ಸಿಗುತ್ತಿದೆ. ಈ ಸಂಚಿಕೆಗಳನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗೆ ಇವರು 'ಓ ಬೇಬಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಅಮಲಾ ಪೌಲ್ ಕೆಲ ತಿಂಗಳುಗಳ ಹಿಂದೆಯಷ್ಟೇ 'ಅಡೈ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಕಥೆ ನೆಟ್ ಫ್ಲಿಕ್ಸ್ ಕಾಂಟೆಂಟ್ ಗೆ ಹೋಲಿಕೆ ಆಗುತ್ತಿತ್ತು. ಅಮಲಾ ಪೌಲ್ ತನ್ನ ಬೋಲ್ಡ್ ನಟನೆಯ ಮೂಲಕ ಗಮನ ಸೆಳೆದಿದ್ದರು. ಅಮಲಾ ಪೌಲ್ ನಟನಾ ಸಾಮರ್ಥ್ಯವನ್ನು ಸಿನಿಮಾ ತೋರಿಸಿತ್ತು. ಹೀಗಾಗಿ, ಅಮಲಾ ಪೌಲ್ ನೆಟ್ ಫಿಕ್ಸ್ ಇಂಡಿಯಾದಿಂದ ಅವಕಾಶ ಪಡೆಯಲು ಈ ಸಿನಿಮಾ ಕೂಡ ಕಾರಣ ಆಗಿರಬಹುದು.

ಅಂದಹಾಗೆ, ನೆಟ್ ಫ್ಲಿಕ್ಸ್ ಇಂಡಿಯಾದಲ್ಲಿ ಈಗಾಗಲೇ ಬಾಲಿವುಡ್ ನ ಅನೇಕ ನಟಿಯರು ಕಾಣಿಸಿಕೊಂಡಿದ್ದಾರೆ. ರಾಧಿಕಾ ಅಪ್ಟೆ, ಕೈರಾ ಅಡ್ವಾಣಿ, ಮನೀಶಾ ಕೊಯಿರಾಲಾ, ಭೂಮಿ ಪಡ್ನೇಕರ್ ಸೇರಿದಂತೆ ಸಾಕಷ್ಟು ನಟಿಯರು ಮಿಂಚಿದ್ದಾರೆ.


Click it and Unblock the Notifications











