ಹೊಸ ಸಿನಿಮಾ ಟೀಸರ್ ನಲ್ಲಿ ನಗ್ನವಾದ ಅಮಲಾ ಪೌಲ್ !
ಅಮಲಾ ಪೌಲ್ ದಕ್ಷಿಣ ಭಾರತದ ಖ್ಯಾತ ನಟಿ. ಇದೀಗ ಅಮಲಾ ಅಭಿನಯದ ಒಂದು ಸಿನಿಮಾ ಟೀಸರ್ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣ ಈ ಸಿನಿಮಾದ ಟೀಸರ್ ನಲ್ಲಿ ಅಮಲಾ ಪೌಲ್ ನಗ್ನವಾಗಿದ್ದಾರೆ.
'ಅಡೈ' ಅಮಲಾ ಪೌಲ್ ನಟನೆಯ ಹೊಸ ತಮಿಳು ಸಿನಿಮಾ. ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್ ನೋಡುತ್ತಿರುವವರಿಗೆ ಕೊನೆಗೆ ಶಾಕ್ ಆಗುತ್ತದೆ. ಸಿನಿಮಾದ ಒಂದು ದೃಶ್ಯಕ್ಕಾಗಿ ಅಮಲಾ ಯಾವುದೇ ಬಟ್ಟೆ ಧರಿಸಿಲ್ಲ ಎನ್ನುವುದು ಹಾಟ್ ಟಾಪಿಕ್ ಆಗಿದೆ.
ಅಮಲಾ ಪೌಲ್ ಅವರ ಈ ದೃಶ್ಯ ಪೂರ ನಗ್ನವಾದಂತೆ ಕಾಣುತ್ತಿದೆ. ಟೀಸರ್ ನಲ್ಲಿ ಕೆಲವೇ ಸೆಕೆಂಡ್ ಗಳಲ್ಲಿ ಈ ದೃಶ್ಯ ಇದೆ. ಸಿನಿಮಾದ ಈ ದೃಶ್ಯದಲ್ಲಿ ಅಮಲಾ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಈ ಹಿಂದೆ ಕೂಡ ಚಿತ್ರದ ಪೋಸ್ಟರ್ ಸಾಕಷ್ಟು ಸದ್ದು ಮಾಡಿತ್ತು.

ಒಳ್ಳೆಯ ಸಿನಿಮಾಗಳು, ಒಳ್ಳೆಯ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ಅಮಲಾ ಈ ದೃಶ್ಯವನ್ನು ಒಪ್ಪಿಕೊಳ್ಳಲು ಸಿನಿಮಾದ ಕಥೆ, ಹಾಗೂ ಅವರ ಪಾತ್ರ ಕಾರಣ ಆಗಿರಬಹುದು.
ಸದ್ಯ, ಟೀಸರ್ ಗಮನಿಸಿದ್ರೆ, ತುಂಬಾ ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿದೆ ಎನಿಸುತ್ತದೆ. ಎಂ ರತ್ನಂ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿಬರ್ತಿದೆ.
ಅಂದಹಾಗೆ, ಅಮಲಾ ಪೌಲ್ 'ಹೆಬ್ಬುಲಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಹ ಕಾಲಿಟ್ಟಿದ್ದರು.


Click it and Unblock the Notifications











