For Quick Alerts
  ALLOW NOTIFICATIONS  
  For Daily Alerts

  ಅಮಲಾ ಪೌಲ್ ಮಾಜಿ ಪತಿ ವಿಜಯ್ ಮದುವೆ ಫಿಕ್ಸ್: ಹುಡುಗಿ ಈಕೆನೇ.!

  |

  ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ 2014ರಲ್ಲಿ ಮದುವೆ ಆಗಿದ್ದರು. ಕೇವಲ ಒಂದು ವರ್ಷದ ಸುಖಕರ ದಾಂಪತ್ಯ ನಡೆಸಿದ ಈ ತಾರಾಜೋಡಿ 2017ರಲ್ಲಿ ವಿಚ್ಛೇದನ ಪಡೆದುಕೊಂಡರು.

  ಅದಾದ ಬಳಿಕ ಅಮಲಾ ಪೌಲ್ ಇನ್ನೊಂದು ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಅದೇ ರೀತಿ ನಿರ್ದೇಶಕ ವಿಜಯ್ ಕೂಡ ಇನ್ನೊಂದು ಮದುವೆಗೆ ರೆಡಿಯಾಗಿದ್ದಾರೆ ಎನ್ನಲಾಯ್ತು. ದಕ್ಷಿಣ ಭಾರತದ ಓರ್ವ ಸ್ಟಾರ್ ನಟಿಯನ್ನ ಅಮಲಾ ಪೌಲ್ ಮಾಜಿ ಪತಿ ವಿವಾಹವಾಗಲಿದ್ದಾರೆ ಎಂಬ ಅಂತೆ-ಕಂತೆಗಳು ಚರ್ಚೆಯಾದವು.

  'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ಸಲವೂ ಲವ್ ಮ್ಯಾರೇಜ್.! 'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ಸಲವೂ ಲವ್ ಮ್ಯಾರೇಜ್.!

  ಇದೀಗ, ಈ ಎಲ್ಲ ವದಂತಿಗಳಿಗೆ ನಿರ್ದೇಶಕ ವಿಜಯ್ ಬ್ರೇಕ್ ಹಾಕಿದ್ದಾರೆ. ಎರಡನೇ ಮದುವೆ ದಿನಾಂಕ ಮತ್ತು ಹುಡುಗಿಯ ಪರಿಚಯ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ, ಅಮಲಾ ಪೌಲ್ ಮಾಜಿ ಪತಿ ಮದುವೆಯಾಗಲಿರುವ ಆ ಹುಡುಗಿ ಯಾರು? ಮುಂದೆ ಓದಿ.....

  ಡಾಕ್ಟರ್ ಕೈಹಿಡಿಯಲಿರುವ ವಿಜಯ್

  ಡಾಕ್ಟರ್ ಕೈಹಿಡಿಯಲಿರುವ ವಿಜಯ್

  ನಿರ್ದೇಶಕ ವಿಜಯ್ ಅವರು ಸಿನಿಮಾ ನಟಿ ಅಥವಾ ಸಿನಿಮಾರಂಗಕ್ಕೆ ಸಂಬಂಧಪಟ್ಟ ಯಾರನ್ನು ಮತ್ತೆ ಮದುವೆ ಆಗುತ್ತಿಲ್ಲ. ಬದಲಾಗಿ ಚೆನ್ನೈ ಮೂಲದ ವೈದ್ಯರೊಬ್ಬರ ಜೊತೆ ಹೊಸ ಜೀವನ ಆರಂಭಿಸಲಿದ್ದಾರೆ. ಚೆನ್ನೈನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿರುವ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನ ಪ್ರಾರಂಭಿಸಲಿದ್ದಾರೆ.

  ಮದುವೆ ದಿನಾಂಕ ಯಾವಾಗ?

  ಮದುವೆ ದಿನಾಂಕ ಯಾವಾಗ?

  ಈ ಮದುವೆ ತೀರಾ ಖಾಸಗಿ ಕಾರ್ಯಕ್ರಮವಾಗಿರಲಿದ್ದು, ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಸದ್ಯಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜುಲೈ 11 ರಂದು ಇವರಿಬ್ಬರ ಮದುವೆ ಜರುಗಲಿದೆ. ಇದಕ್ಕಾಗಿ ಎರಡು ಕುಟುಂಬದವರು ಎಲ್ಲ ತಯಾರಿ ನಡೆಸುತ್ತಿದ್ದಾರಂತೆ.

  'ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ'ಹೆಬ್ಬುಲಿ' ನಟಿ ಅಮಲಾ ಪೌಲ್-ವಿಜಯ್ ವೈವಾಹಿಕ ಬದುಕು ಅಂತ್ಯ

  ಸಾಯಿ ಪಲ್ಲವಿ ಜೊತೆ ವಿಜಯ್ ನಂಟು.!

  ಸಾಯಿ ಪಲ್ಲವಿ ಜೊತೆ ವಿಜಯ್ ನಂಟು.!

  ಅಂದ್ಹಾಗೆ, ಅಮಲಾ ಪೌಲ್ ಜೊತೆ ಡಿವೋರ್ಸ್ ಪಡೆದುಕೊಂಡಿದ್ದ ನಿರ್ದೇಶಕ ವಿಜಯ್, ನಟಿ ಸಾಯಿ ಪಲ್ಲವಿ ಜೊತೆ ಲವ್ವಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಆದರೆ, ಈ ಸುದ್ದಿಯನ್ನ ಸಾಯಿ ಪಲ್ಲವಿ ನಿರಾಕರಿಸಿದ್ದರು. ಈಗ ವಿಜಯ್ ಕೂಡ ಈ ವದಂತಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ.

  ಸ್ಟಾರ್ ನಟಿಯ ಮಾಜಿ ಗಂಡನ ಜೊತೆ ಸಾಯಿ ಪಲ್ಲವಿ ಮದುವೆ?ಸ್ಟಾರ್ ನಟಿಯ ಮಾಜಿ ಗಂಡನ ಜೊತೆ ಸಾಯಿ ಪಲ್ಲವಿ ಮದುವೆ?

  ಕಂಗನಾ ಜೊತೆ ಸಿನಿಮಾ.!

  ಕಂಗನಾ ಜೊತೆ ಸಿನಿಮಾ.!

  ಸದ್ಯ ಮದುವೆ ತಯಾರಿಯಲ್ಲಿರುವ ನಿರ್ದೇಶಕ ವಿಜಯ್, ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಜೊತೆ ಸಿನಿಮಾ ಮಾಡಲಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಚಿತ್ರ ನಿರ್ದೇಶನ ಮಾಡ್ತಿದ್ದಾರೆ. ಮತ್ತೊಂದೆಡೆ ಅಮಲಾ ಪೌಲ್ ಅಡೈ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

  English summary
  Actress Amala paul ex husband director AL Vijay second marriage date fix with chennai based doctor aishwarya. Amala paul and AL Vijay married in 2014 and they granted divorce in 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X