For Quick Alerts
  ALLOW NOTIFICATIONS  
  For Daily Alerts

  ಮಾಜಿ ಪತಿ ಮದುವೆ ಬೆನ್ನಲ್ಲೆ ಬಾಯ್ ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಅಮಲಾ ಪೌಲ್

  |

  ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿ ಅಮಲಾ ಪೌಲ್ ಅವರ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಮರು ವಿವಾಹವಾಗಿದ್ದಾರೆ. ಚೆನ್ನೈ ಮೂಲದ ವೈದ್ಯೆಯೊಬ್ಬರ ಕೈಹಿಡಿದ ವಿಜಯ್, ಹಳೆಯದನ್ನು ಮರೆತು ಹೊಸ ಜೀವನ ಅರಂಭಿಸಿದ್ದಾರೆ.

  ಈ ಕಡೆ ವಿಜಯ್ ಅವರಿಂದ ಡಿವೋರ್ಸ್ ಪಡೆದುಕೊಂಡು ಒಂಟಿಯಾಗಿ ಉಳಿದಿದ್ದ ಅಮಲಾ ಪೌಲ್ ಬರಿ ಸಿನಿಮಾಗಳನ್ನ ಮಾಡ್ಕೊಂಡು ಮುಂದೆ ಸಾಗುತ್ತಿದ್ದರು. ಈ ನಡುವೆ ಅಮಲಾ ಕೂಡ ಎರಡನೇ ವಿವಾಹಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಿತ್ತು.

  ಅಮಲಾ ಪೌಲ್ ಮಾಜಿ ಪತಿ ವಿಜಯ್ ಮದುವೆ ಫಿಕ್ಸ್: ಹುಡುಗಿ ಈಕೆನೇ.! ಅಮಲಾ ಪೌಲ್ ಮಾಜಿ ಪತಿ ವಿಜಯ್ ಮದುವೆ ಫಿಕ್ಸ್: ಹುಡುಗಿ ಈಕೆನೇ.!

  ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿರಲಿಲ್ಲ. ಅಮಲಾ ಕೂಡ ಈ ವಿಷ್ಯವನ್ನ ತಳ್ಳಿ ಹಾಕುತ್ತಿದ್ದರು. ಇದೀಗ, ಅಮಲಾ ಪೌಲ್ ಶಾಕಿಂಗ್ ಸುದ್ದಿಯೊಂದನ್ನ ನೀಡಿದ್ದಾರೆ. ಮಾಜಿ ಪತಿ ಎರಡನೇ ವಿವಾಹವಾದ ಬೆನ್ನಲ್ಲೆ ತನಗೂ ಬಾಯ್ ಫ್ರೆಂಡ್ ಇದ್ದಾನೆ ಎಂದು ಬಾಯ್ಬಿಟ್ಟಿದ್ದಾರೆ. ಯಾರದು? ಮುಂದೆ ಓದಿ...

  ನನಗೂ ಒಬ್ಬ ಗೆಳೆಯನಿದ್ದಾನೆ

  ನನಗೂ ಒಬ್ಬ ಗೆಳೆಯನಿದ್ದಾನೆ

  ಆ ಕಡೆ ಮಾಜಿ ಪತಿ ಎ.ಎಲ್ ವಿಜಯ್ ಮದುವೆ ಆಗುತ್ತಿದ್ದಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಲಾ ಪೌಲ್, ನಾನು ಕೂಡ ಲವ್ ನಲ್ಲಿ ಇದ್ದೀನಿ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ನಾನು ಒಂಟಿ ಎಂದು ಹೇಳುತ್ತಿದ್ದ ಹೆಬ್ಬುಲಿ ನಟಿ ಗೆಳೆಯರೊಬ್ಬರ ಜೊತೆ ಪ್ರೀತಿಯಲ್ಲಿರುವ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ.

  ಮದುವೆ ಯಾವಾಗ ಗೊತ್ತಾ?

  ಮದುವೆ ಯಾವಾಗ ಗೊತ್ತಾ?

  ''ಬಹಳ ದಿನಗಳಿಂದ ನಾನು ಒಬ್ಬ ವ್ಯಕ್ತಿ ಜೊತೆ ಪ್ರೀತಿಯಲ್ಲಿದ್ದೇನೆ. ಆದರೆ ಅವರು ಸಿನಿಮಾರಂಗದಲ್ಲಿ ಇಲ್ಲ. ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ನಾನು ಯೋಚಿಸಿಲ್ಲ. ಕೆರಿಯರ್ ಬಗ್ಗೆ ಮಾತ್ರ ಫೋಕಸ್ ಮಾಡ್ತಿದ್ದೇನೆ. ನನ್ನ ಲೈಫ್ ಈಗ ತುಂಬಾ ಚೆನ್ನಾಗಿದೆ'' ಎಂದು ಅಮಲಾ ಪೌಲ್ ಹೇಳಿಕೊಂಡಿದ್ದಾರೆ.

  ಅಮಲಾ ಪೌಲ್ ಒಂಟಿಯಲ್ಲ

  ಅಮಲಾ ಪೌಲ್ ಒಂಟಿಯಲ್ಲ

  ನಿರ್ದೇಶಕ ವಿಜಯ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದ ಅಮಲಾ ಪೌಲ್, ಎರಡು ವರ್ಷದ ನಂತರ ವಿಚ್ಛೇದನ ಪಡೆದುಕೊಂಡರು. 2014ರಲ್ಲಿ ಮದುವೆ ಆಗಿದ್ದ ಅಮಲಾ ಮತ್ತು ವಿಜಯ್ ಜೋಡಿ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. ಅಲ್ಲಿಂದ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದರು. ಆಗಿನಿಂದಲೂ ಒಂಟಿಯಾಗಿದ್ದೇನೆ ಎಂದು ಬಿಂಬಿಸಿಕೊಂಡು ಬಂದಿದ್ದ ಅಮಲಾ ಪೌಲ್ ಈಗ ರಿಲೇಶನ್ ಷಿಪ್ ನಲ್ಲಿರುವುದನ್ನ ಖಚಿತಪಡಿಸಿದ್ದಾರೆ.

  'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ಸಲವೂ ಲವ್ ಮ್ಯಾರೇಜ್.!'ಹೆಬ್ಬುಲಿ' ನಟಿ ಅಮಲಾ ಪೌಲ್ 2ನೇ ಸಲವೂ ಲವ್ ಮ್ಯಾರೇಜ್.!

  'ಅಡೈ' ಸಿನಿಮಾದಲ್ಲಿ ನಗ್ನ.!

  'ಅಡೈ' ಸಿನಿಮಾದಲ್ಲಿ ನಗ್ನ.!

  ಸದ್ಯ ಅಮಲಾ ಪೌಲ್ ಅಡೈ ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಅಮಲಾ ಪೌಲ್ ಭಾರಿ ಸದ್ದು ಮಾಡಿದ್ದಾರೆ. ಈ ಚಿತ್ರದ ದೃಶ್ಯವೊಂದರಲ್ಲಿ ನಗ್ನವಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಟೀಸರ್ ಬಹಳ ಕುತೂಹಲ ಮೂಡಿಸಿದೆ.

  English summary
  South Indian actress Amala Paul revealed about her boyfriend. she confirmed about her love, and she is in love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X