For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ನಟಿ ಅಮಲಾ ಪೌಲ್ ಗೆ ಕಿರುಕುಳ ಕೊಟ್ಟಿದ್ರಂತೆ ನಿರ್ದೇಶಕ ಸುಶಿ

  |

  ಮೀಟೂ ಅಭಿಯಾನ ಬಲಿಷ್ಠವಾಗುತ್ತಿದ್ದಂತೆ ಒಬ್ಬರ ಹಿಂದೆ ಮತ್ತೊಬ್ಬರಂತೆ ನಟಿಯರು ತಮಗಾದ ಕೆಟ್ಟ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದ 'ಹೆಬ್ಬುಲಿ' ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಅಮಲಾ ಪೌಲ್ ಗೂ ನಿರ್ದೇಶಕರೊಬ್ಬರು ಕಿರುಕುಳ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.

  ಇತ್ತೀಚಿಗಷ್ಟೆ ಲೇಖಕಿ ಲೀನಾ ಮಣಿಮೆಕ್ಕಲೈ ಅವರು ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಲೀನಾ ಮಾಡಿದ್ದ ಆರೋಪಕ್ಕೆ ನಟಿ ಅಮಲಾ ಪೌಲ್ ಬೆಂಬಲ ಸೂಚಿಸಿದ್ದರು. ಲೇಖಕಿ ಲೀನಾ ಅವರ ಪರವಾಗಿ ನಿಂತಿದ್ದಕ್ಕೆ ನಿರ್ದೇಶಕ ಸುಶಿ ಗಣೇಶನ್ ಅಮಲಾ ಪೌಲ್ ಅವರನ್ನ ನಿಂದಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  MeToo ಆಯ್ತು ಈಗ SheToo: ರಾಖಿ ಸಾವಂತ್ ಸಿಡಿಸಿದ್ರು ಹೊಸ ಬಾಂಬ್ MeToo ಆಯ್ತು ಈಗ SheToo: ರಾಖಿ ಸಾವಂತ್ ಸಿಡಿಸಿದ್ರು ಹೊಸ ಬಾಂಬ್

  ಇದಕ್ಕೂ ಮುಂಚೆ ಸುಶಿ ಗಣೇಶನ್ ಅವರಿಂದ 'ತಿರುಟು ಪಾಯಾಲೆ-2' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದರು. ಗಣೇಶ್ ಸುಶಿ ನಿರ್ದೇಶನ ಮಾಡಿದ್ದ 'ತಿರುಟು ಪಾಯಾಲೆ-2' ಸಿನಿಮಾದಲ್ಲಿ ಅಮಲಾ ನಾಯಕಿಯಾಗಿ ಅಭಿನಯಿಸಿದ್ದರು. ಇದರಲ್ಲಿ ಹೆಚ್ಚು ಡಬಲ್ ಮೀನಿಂಗ್ ಡೈಲಾಗ್, ಬೇಡದಿರುವ ಆಫರ್ ಹಾಗೂ ದೈಹಿಕ ಸಂಪರ್ಕ ಬೆಳಸುವಂತೆ ಒತ್ತಾಯ ಮಾಡಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

  ಶ್ರುತಿ ಪರ ಎಂದಿದ್ದ ಪ್ರಕಾಶ್ ರೈ ಈಗ ಉಲ್ಟಾ ಹೊಡೆದರು ಶ್ರುತಿ ಪರ ಎಂದಿದ್ದ ಪ್ರಕಾಶ್ ರೈ ಈಗ ಉಲ್ಟಾ ಹೊಡೆದರು

  ಇನ್ನೊಂದು ಟ್ವೀಟ್ ನಲ್ಲಿ ''ಸುಶಿ ಗಣೇಶನ್ ವಿರುದ್ಧ ಆರೋಪ ಮಾಡಿದ್ದಕ್ಕೆ ಆತನ ಫೋನ್ ಮಾಡಿದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಪತ್ನಿ ಕೂಡ ನನ್ನ ಜೊತೆ ಮಾತನಾಡಿದ್ದು, ಆಕೆಗೆ ಘಟನೆ ವಿವರಿಸುವಾಗ ಸುಶಿ ಬೈಯುತ್ತಿದ್ದರು. ಇದನ್ನ ಕೇಳಿಸಿಕೊಂಡು ಅವರ ಪತ್ನಿ ಮಂಜರಿ ನಗುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  Amala paul says susi ganesan misbehaved with her

  ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ? ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ?

  ಇನ್ನೂ ಲೇಖಕಿ ಲೀನಾ ಮಣಿಮೆಕ್ಕಲೈ ಅವರು ಹೇಳಿರುವ ಪ್ರಕಾರ, ನಿರ್ದೇಶಕ ಸುಶಿ ಗಣೇಶನ್ ಅವರು 2005ರಲ್ಲಿ ನಿರೂಪಕಿಯಾಗಿದ್ದ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದರಂತೆ. ಆದ್ರೆ, ಈ ಆರೋಪವನ್ನ ನಿರ್ದೇಶಕ ತಳ್ಳಿ ಹಾಕಿದ್ದಾರೆ.

  English summary
  Actor Amala Paul, who starred in Thiruttu Payale 2, directed by Susi Ganesan, has come out in support of filmmaker Leena Manimekalai who recently accused the director of sexually harassing her in 2005.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X