ಮತ್ತೊಂದು ಬೆತ್ತಲೆ ದೃಶ್ಯ ಹಂಚಿಕೊಂಡ ಅಮಲಾ ಪೌಲ್
ನಟಿ ಅಮಲಾ ಪೌಲ್ ತಮಿಳಿನ 'ಅಡೈ' ಸಿನಿಮಾದ ಕೆಲವು ದೃಶ್ಯಗಳಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಮೊದಲು ಬಿಡುಗಡೆಯಾದ ಟೀಸರ್ ಇದೇ ಕಾರಣಕ್ಕೆ ದೊಡ್ಡ ಪ್ರಚಾರ ಪಡೆದಿತ್ತು.
ಈಗ ಈ ಸಿನಿಮಾದ ಮತ್ತೊಂದು ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಆ ದೃಶ್ಯವೂ ಕೂಡ ಬೆತ್ತಲೆಯ ದೃಶ್ಯವಾಗಿದೆ. ಮೈ ಮೇಲೆ ಬಟ್ಟೆ ಇಲ್ಲದೆ ಕನ್ನಡಿಯನ್ನು ಹಿಡಿದುಕೊಂಡು ಬರುವ ದೃಶ್ಯ ಇದಾಗಿದೆ. 2 ನಿಮಿಷ 31 ಸೆಕೆಂಡ್ ನ ಈ ವಿಡಿಯೋ ಯೂ ಟ್ಯೂಬ್ ನಲ್ಲಿ 5 ಲಕ್ಷ ಹಿಟ್ಸ್ ಪಡೆದುಕೊಂಡಿದೆ.
ಈ ದೃಶ್ಯವನ್ನು ಅಮಲಾ ಪೌಲ್ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ದೃಶ್ಯವನ್ನು ಸ್ಕ್ರಿಪ್ಟ್ ನಲ್ಲಿ ಓದುವಾಗ ಅದು ಆಕರ್ಷಣೆ ಎನಿಸಲಿಲ್ಲ. ಆದರೆ, ಆ ದೃಶ್ಯವನ್ನು ಮಾಡುವಾಗ ನನ್ನ ಮನಸ್ಸಿಗೆ ಖುಷಿಯಾಯ್ತು. ಎಂದು ಅಮಲಾ ಹೇಳಿಕೊಂಡಿದ್ದಾರೆ.

ಮತ್ತೊಂದು ಕಡೆ ಅಮಲಾ ವಿರುದ್ಧ ತಮಿಳು ರಾಜಕಾರಣಿ ರಾಜೇಶ್ವರಿ ಪ್ರಿಯಾ ಸಿಡಿದೆದಿದ್ದಾರೆ. ಅಮಲಾ ನಗ್ನತೆಯನ್ನು ಪ್ರಚೋದನೆ ಮಾಡುತ್ತಿದ್ದಾರೆ. ಅಲ್ಲದೆ, ತಮಿಳು ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಎ ಪ್ರಮಾಣ ಪತ್ರದೊಂದಿಗೆ 'ಅಡೈ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ.
ವಿಡಿಯೋ ನೋಡಲು ಕ್ಲಿಕ್ ಮಾಡಿ


Click it and Unblock the Notifications











