ಕನ್ನಡಕ್ಕೆ ಅಮಲೇರಿಸುವ ಬೆಡಗಿ ಅಮಲಾ ಪೌಲ್
ಇಷ್ಟು ಕಾಲ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸೊಂಟ ಬಳುಕಿಸಿದ್ದ ಅಮಲಾ ಪೌಲ್ ಈಗ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಅಂಬರೀಶ' ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಅಮಲಾ.
ಈಕೆಯ ತವರೂರು ಕೇರಳದ ಎರ್ನಾಕುಲಂ. ಈ ಮೂಲಕ ಮತ್ತೊಬ್ಬ ಮಲ್ಲು ಬೆಡಗಿ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಂತಾಗುತ್ತದೆ. ಆಗಸ್ಟ್ 15ಕ್ಕೆ ಅಂಬರೀಷ್ ಚಿತ್ರ ಸೆಟ್ಟೇರುತ್ತಿರುವ ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ.
ಮಹೇಶ್ ಸುಖಧರೆ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಅಂದಾಜಿನ ಪ್ರಕಾರ ಈ ಚಿತ್ರಕ್ಕೆ ರು.20 ಕೋಟಿ ಬಜೆಟ್ ಎನ್ನಲಾಗಿದೆ. ಇಬ್ಬರು ನಾಯಕಿಯರಲ್ಲಿ ಅಮಾಲಾ ಪೌಲ್ ಒಬ್ಬರು ಎನ್ನುತ್ತವೆ ಮೂಲಗಳು. ಇನ್ನೊಬ್ಬರು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಾಯಕಿ ಶ್ವೇತಾ ಶ್ರೀವಾತ್ಸವ್. ಆದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ.
ಅಮಲಾ ಜೊತೆ ಈಗಾಗಲೆ ಮಾತುಕತೆ ನಡೆದಿದ್ದು ಆಕೆ ಕಥೆ ಓಕೆ ಎಂದಿದ್ದಾರಂತೆ. ಇನ್ನೇನಿದ್ದರೂ ಕಾಲ್ ಶೀಟ್ ಗೆ ಸಹಿ ಹಾಕುವುದೊಂದು ಬಾಕಿ ಇದೆ. ಕೊನೆ ಘಳಿಗೆಯಲ್ಲಿ ಅಮಾಲಾ ಕೈಕೊಟ್ಟರೆ? ಇದಕ್ಕಾಗಿ ಕಥೆಗೆ ಹೊಂದಾಣಿಕೆಯಾಗುವ ಕನ್ನಡ ನಟಿಯರ ಜೊತೆಗೂ ಮಾತುಕತೆ ನಡೆದಿದೆಯಂತೆ.ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೂ ಚಿತ್ರದ ಶೀರ್ಷಿಕೆಗೂ ಸಂಬಂಧವಿಲ್ಲವಂತೆ. ಆದರೆ ಅಂಬರೀಷ್ ಹೆಸರು ಬಳಸಿಕೊಂಡಿರುವ ಕಾರಣ ಸಾಕಷ್ಟು ಜಾಗ್ರತೆ ವಹಿಸಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ದರ್ಶನ್ ಅವರ ವೃತ್ತಿಜೀವನದಲ್ಲಿ ಭಿನ್ನವಾದ ಚಿತ್ರ ಇದಾಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. (ಏಜೆನ್ಸೀಸ್)


Click it and Unblock the Notifications












