'ಹೆಬ್ಬುಲಿ' ನಟಿ ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಅಂತೆ.!

By Bharath Kumar

ಸುದೀಪ್ ಅಭಿನಯದ 'ಹೆಬ್ಬುಲಿ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟಿ ಅಮಲಾ ಪೌಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದಾರೆ.

ಅಮಲಾ ಅಭಿನಯದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಆಶ್ಚರ್ಯಗೊಂಡಿರುವ ನೆಟ್ಟಿಗರು ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಎಂದು ಕಾಲೆಳೆಯುತ್ತಿದ್ದಾರೆ.

Amala Paul trolled over Aadai first look

ಅಮಲಾ ಅಭಿನಯದ 'ಅಡೈ' (Aadai) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಎಂ ರತ್ನಂ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಮಲಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿಬರ್ತಿದೆ.

ಸದ್ಯ, ಪೋಸ್ಟರ್ ಗಮನಿಸಿದ್ರೆ, ತುಂಬಾ ಥ್ರಿಲ್ಲಿಂಗ್ ಎನಿಸಿದ್ದು, ದಬ್ಬಾಳಿಕೆಗೆ ಒಳಗಾಗಿರುವ ಅಮಲಾ ಪೌಲ್ ನೋವಿನಿಂದ ಅಳುತ್ತಿದ್ದಾರೆ. ದೇಹದ ಮೇಲೆ ರಕ್ತದ ಕಲೆಯೂ ಇದ್ದು ಯಾವುದೋ ಸಂಕಷ್ಟದಲ್ಲಿ ಸಿಲುಕಿರುವ ಸನ್ನಿವೇಶವೆಂದು ವಿಶ್ಲೇಷಿಸಬಹುದು.

Amala Paul trolled over Aadai first look

ಆದ್ರೆ, ಅಮಲಾ ಅವರ ಇಷ್ಟೊಂದು ಬೋಲ್ಡ್ ಲುಕ್ ನೋಡಿದ ನೆಟ್ಟಿಗರು, ಮುಂದಿನ ಪೋರ್ನ್ ಸ್ಟಾರ್, ಸನ್ನಿ ಲಿಯೋನ್ ಎಂದು ಹೀಯಾಳಿಸುತ್ತಿದ್ದಾರೆ.

ನಿರ್ದೇಶಕ ಎ.ಎಲ್ ವಿಜಯ್ ಅವರಿಂದ ವಿಚ್ಛೇದನ ಪಡೆದ ನಂತರ ಅಮಲಾ ಪೌಲ್ ಅವರು ಸಿನಿಮಾಗಳನ್ನ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವಲ್ಲದೇ, ಮತ್ತೊಂದು ತಮಿಳು ಹಾಗೂ ಒಂದು ಮಲಯಾಳಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Netizens have come down heavily on Amala Paul for her bold first look poster of her forthcoming Tamil movie Aadai. describing her as next 'Sunny Leone'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X