ಅಭಿಷೇಕ್ ಮೊದಲ ಚಿತ್ರದ ಮೊದಲ ಹಾಡು ಬರ್ತಿದೆ
ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮಗ ಅಭಿಷೇಕ್ ಸಹ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ನೊಂದು ಕಡೆ ಅವರ ಮೊದಲ ಸಿನಿಮಾದ ಮೊದಲ ಹಾಡು ಕೂಡ ಈ ವೇಳೆಯೇ ಬಿಡುಗಡೆಯಾಗುತ್ತಿದೆ.
ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾ 'ಅಮರ್' ಚಿತ್ರದ ಮೊದಲ ಹಾಡು ಯುಗಾದಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. ಏಪ್ರಿಲ್ 6ರ ಶನಿವಾರದಂದು ಸಿನಿಮಾದ ಫಸ್ಟ್ ಸಾಂಗ್ ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ.
ಈಗಾಗಲೇ, ಸಿನಿಮಾದ ಟೀಸರ್ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಹಾಡುಗಳ ಮೇಲೆ ನಿರೀಕ್ಷೆ ಇದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮೊದಲ ಬಾರಿಗೆ ನಾಗಶೇಖರ್ ಸಿನಿಮಾಗೆ ಜನ್ಯ ಮ್ಯೂಸಿಕ್ ಮಾಡುತ್ತಿದ್ದಾರೆ.

ಸಂದೇಶ್ ನಾಗರಾಜ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ತಾನ್ಯ ಹೂಪ್ ಸಿನಿಮಾದ ನಾಯಕಿಯಾಗಿದ್ದಾರೆ. ಚಿತ್ರ ಬೈಕ್ ರೇಸ್ ಜೊತೆಗೆ ನಡೆಯುವ ಲವ್ ಸ್ಟೋರಿಯಾಗಿದೆ.
English summary
Actor Abhishek Ambareesh's 'Amar' kannada moive 1st song will be releasing on on the occasion of ugadi.


Click it and Unblock the Notifications