ವಿಡಿಯೋ : 'ನೋ ವೇ ಚಾನ್ಸೆ ಇಲ್ಲ..' ಡೈಲಾಗ್ ಹೇಳ್ತಾನೆ ಬಂದ 'ಅಮರ್'
ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾ 'ಅಮರ್' ಟೀಸರ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನದ ವಿಶೇಷವಾಗಿ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.
ಟೀಸರ್ ನಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಿದ್ದಾರೆ. ಅಪ್ಪನ ಪಾಪ್ಯುಲರ್ ಡೈಲಾಗ್ ಆಗಿರುವ 'ನೋ ವೇ ಚಾನ್ಸೆ ಇಲ್ಲ..' ಎಂದು ಹೇಳುತ್ತ ಚಿತ್ರರಂಗಕ್ಕೆ 'ಅಮರ್' ಎಂಟ್ರಿ ಕೊಟ್ಟಿದ್ದಾರೆ. ಟೀಸರ್ ನೋಡಿದರೆ ಇದೊಂದು ಪವರ್ ಪ್ಯಾಕ್ ಸಿನಿಮಾ ಎಂಬುದು ತಿಳಿಯುತ್ತದೆ.
'ಹೀರೋ ತರ ನಾ... ನಾನ್ ಹೀರೋ ನೇ..' ಎಂಬ ಮಾಸ್ ಡೈಲಾಗ್ ಅನ್ನು ಅಭಿಷೇಕ್ ಹೊಡೆದಿದ್ದಾರೆ. ಮುಖ್ಯವಾಗಿ ಅವರ ಆಕ್ಷನ್ ಗಮನ ಸೆಳೆಯುತ್ತಿದೆ. 1 ನಿಮಿಷ 48 ಸೆಕೆಂಡ್ ಟೀಸರ್ ಮೂಲಕ ಅವರನ್ನು ಪರಿಚಯ ಮಾಡಲಾಗಿದೆ.

ಪ್ರಾರಂಭದಲ್ಲಿ ಅಂಬರೀಶ್ ಅವರಿಗೆ ನಿರ್ಮಾಪಕ ಸಂದೇಶ್ ನಾಗರಾಜ್ ನುಡಿ ನಮನ ಸಲ್ಲಿಸಿದ್ದಾರೆ. ರೆಬಲ್ ಸ್ಟಾರ್ ಅವರಿಗೆ ಈ ಸಿನಿಮಾವನ್ನು ಅರ್ಪಣೆ ಮಾಡಿದ್ದಾರೆ.
ನಾಗಶೇಖರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಟಿ ತಾನ್ಯ ಹೋಪ್ ಸಿನಿಮಾದ ನಾಯಕಿ ಆಗಿದ್ದಾರೆ. ಅಭಿಷೇಕ್ ಹಾಗೂ ತಾನ್ಯ ಇಬ್ಬರೂ ಇಲ್ಲಿ ಬೈಕ್ ರೇಸರ್ ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಸತ್ಯ ಹೆಗಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.


Click it and Unblock the Notifications











