ಮಾರ್ಚ್ 1 ರಂದು ಅಣ್ಣನ ಜೊತೆಯಲ್ಲೇ ಬರ್ತಾರೆ ಅಭಿಷೇಕ್.!
Recommended Video

ಮಾರ್ಚ್ 1 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ತೆರೆಗೆ ಬರ್ತಿದೆ. ವಿಶೇಷ ಅಂದ್ರೆ, ಅದೇ ದಿನ ದರ್ಶನ್ ಸಹೋದರ ಅಭಿಷೇಕ್ ಅಂಬರೀಶ್ ಕೂಡ ಎಂಟ್ರಿ ಕೊಡ್ತಿದ್ದಾರೆ.
ಹೌದು, ಯಜಮಾನ ಸಿನಿಮಾ ರಿಲೀಸ್ ದಿನವೇ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಟ್ರೈಲರ್ ಬಿಡುಗಡೆಯಾಗಲಿದೆ. ಈಗಾಗಲೇ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ವಿಶೇಷವಾಗಿ ಅಮರ್ ಟೀಸರ್ ಬಂದಿತ್ತು.
ಟೀಸರ್ ಮೂಲಕ ಸ್ಯಾಂಡಲ್ ವುಡ್ ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದ ಯಂಗ್ ರೆಬೆಲ್ ಸ್ಟಾರ್ ಈಗ ಟ್ರೈಲರ್ ಮೂಲಕ ಮತ್ತಷ್ಟು ಸದ್ದು ಮಾಡಲಿದ್ದಾರೆ.
ಹೌದು, ಸದ್ಯದ ಮಾಹಿತಿ ಪ್ರಕಾರ ಯಜಮಾನ ಸಿನಿಮಾ ಬಿಡುಗಡೆ ದಿನವೇ ಅಮರ್ ಟ್ರೈಲರ್ ಬರಲಿದೆ. ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಟ್ರೈಲರ್ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಲಿದೆ ಎನ್ನಲಾಗುತ್ತಿದೆ.

ಅಭಿಷೇಕ್ ನನ್ನ ತಮ್ಮ ಎಂದು ಮಾತಿಗೆ ಹೇಳಿ ಸುಮ್ಮನಾದ ದರ್ಶನ್, ಜೊತೆಯಲ್ಲಿ ಪ್ರೇಕ್ಷಕರೆದುರು ಕರೆದುಕೊಂಡು ಬರ್ತಿದ್ದಾರೆ. ಸಂದೇಶ್ ನಾಗರಾಜ್ ಅಮರ್ ಚಿತ್ರವನ್ನ ನಿರ್ಮಿಸಿದ್ದು, ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಅಮರ್ ಚಿತ್ರದ ನಾಯಕಿ ತಾನ್ಯ ಹೋಪ್, ಈ ಕಡೆ ಯಜಮಾನ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











