ಯೂಟ್ಯೂಬ್ ನಲ್ಲಿ 'ಅಮರ್' ಆರ್ಭಟ, ಬಹುಪರಾಕ್ ಎಂದ ವೀಕ್ಷಕ

ಅದೇ ಗತ್ತು, ಅದೇ ತಾಕತ್ತು, ಅಭಿ ರೂಪದಲ್ಲಿ ಅಂಬರೀಶ್ ಅಣ್ಣ ಮತ್ತೆ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಂತ ಅಮರ್ ಟೀಸರ್ ನೋಡಿದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರೇಮಿಗಳ ದಿನದ ಪ್ರಯುಕ್ತ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಟೀಸರ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ. ಬಿಡುಗಡೆಯಾಗದ ಕೆಲವೇ ಗಂಟೆಗಳಲ್ಲಿ 500k ವೀಕ್ಷಣೆ ಪಡೆದಿದ್ದ ಟೀಸರ್ ಈಗ 10 ಗಂಟೆಗಳಲ್ಲಿ 1 ಮಿಲಿಯನ್ ಗಡಿದಾಟಿದೆ.

ಈ ಸಂತಸದ ವಿಷ್ಯವನ್ನ ಆನಂದ್ ಆಡಿಯೋ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. 1 ಮಿಲಿಯನ್ ವೀಕ್ಷಣೆಯಲ್ಲಿ 81k ಲೈಕ್ಸ್ ಪಡೆದಿದ್ದು, 1.9k ಡಿಸ್ ಲೈಕ್ಸ್ ಪಡೆದುಕೊಂಡಿದೆ.

amar teaser crossed 1 million views

ಮೈನಾ ಖ್ಯಾತಿಯ ನಾಗಶೇಖರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದು, ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡ್ತಿದ್ದಾರೆ. ಅಭಿಗೆ ಜೋಡಿಯಾಗಿ ತಾನ್ಯ ಹೋಪ್ ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಅಮರ್ ಟೀಸರ್ ನೋಡಿ ಸ್ಯಾಂಡಲ್ ವುಡ್ ತಾರೆಯರೆಲ್ಲಾ ಯಂಗ್ ರೆಬೆಲ್ ಸ್ಟಾರ್ ಅಭಿಯನ್ನ ಸ್ವಾಗತಿಸಿದ್ದಾರೆ. ಅಭಿ ಅವರ ತಾಯಿ ಸುಮಲತಾ ಕೂಡ ಖುಷಿಯಾಗಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಸದ್ಯ ಟೀಸರ್ ರಿಲೀಸ್ ಮಾಡಿರುವ ಅಮರ್ ಇದೇ ವರ್ಷ ತೆರೆಮೇಲೆ ಬರಲಿದ್ದಾನೆ.

More from Filmibeat

English summary
Ambarish son abhishek starrer debut movie amar teaser has crossed 1 million views in 10 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X