ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಮಹೇಶ್ ಬಾಬು ಒಡೆತನದ ಚಿತ್ರಮಂದಿರ ಓಪನ್; ಮೊದಲ ಸಿನಿಮಾ ಯಾವ್ದು?

ಬೆಂಗಳೂರಿನ ಗಾಂಧಿನಗರದಲ್ಲಿದ್ದ ಕಪಾಲಿ ಚಿತ್ರಮಂದಿರ ನೆಲಸಮ ಮಾಡಿ ಅಲ್ಲಿ AMB ಸಿನಿಮಾಸ್ ಮಾಲ್ ಎದ್ದು ನಿಂತಿದೆ. ತೆಲುಗು ನಟ ಮಹೇಶ್ ಬಾಬು ಒಡೆತನದ ಈ ಥಿಯೇಟರ್ ಕಾಂಪ್ಲೆಕ್ಸ್ ಸಂಕ್ರಾಂತಿ ಸಂಭ್ರಮದಲ್ಲೇ ಕಾರ್ಯಾರಂಭ ಮಾಡುತ್ತಿದೆ. ಜನವರಿ 16ರಿಂದ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಗಾಂಧಿನಗರದ ಸುಬೇದಾರ್ ಛತ್ರಂ ರಸ್ತೆಯಲ್ಲಿ ಚಿತ್ರಮಂದಿರ ಎದ್ದು ನಿಂತಿದೆ.

ಏಷ್ಯಾದಲ್ಲಿಯೇ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ ಹೊಂದಿದ್ದ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿದ್ದ ಕಪಾಲಿ ಚಿತ್ರಮಂದಿರ 2017ರಲ್ಲೇ ಚಿತ್ರ ಪ್ರದರ್ಶನ ನಿಲ್ಲಿಸಿತ್ತು. ಬಳಿಕ ಕಟ್ಟಡ ನೆಲಸಮ ಮಾಡಲಾಗಿತ್ತು. ಕನ್ನಡದ ಹಲವು ಸಿನಿಮಾಗಳು ಅಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿದ್ದವು. 1465 ಆಸನಗಳಿದ್ದ ಚಿತ್ರಮಂದಿರ ನೆಲಸಮವಾದ ಬಳಿಕ ಅಲ್ಲಿ ತೆಲುಗು ನಟ ಮಹೇಶ್ ಬಾಬು ಮಾಲ್ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಏಷಿಯನ್ ಸಿನಿಮಾಸ್ ಜೊತೆ ಸೇರಿ ಈಗಾಗಲೇ ಮಹೇಶ್ ಬಾಬು ಹೈದರಾಬಾದ್‌ನಲ್ಲಿ AMB ಚಿತ್ರಮಂದಿರ ಹೊಂದಿದ್ದಾರೆ. ಅದೇ ರೀತಿ ಈಗ ಬೆಂಗಳೂರಿನಲ್ಲಿ ಬ್ಯುಸಿನೆಸ್ ಆರಂಭಿಸಿದ್ದಾರೆ.

AMB Cinemas Kapali Opens in Bengaluru Mahesh Babu Brings South India First Dolby Screen to majestic

ಹೊಸದಾಗಿ ಚಿತ್ರಮಂದಿರ ಸ್ಥಾಪಿಸಿದರೂ ಕಪಾಲಿ ಎನ್ನುವ ಹೆಸರನ್ನು ಮಹೇಶ್ ಬಾಬು ಕೈಬಿಟ್ಟಿಲ್ಲ. ಇದು ಕೆಲವರಿಗೆ ಸಮಾಧಾನ ತಂದಿತ್ತು. 'AMB ಸಿನಿಮಾಸ್ ಕಪಾಲಿ' ಎಂದು ಹೆಸರಿಟ್ಟಿದ್ದಾರೆ. ಜನವರಿ 16ರಂದು ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ದಕ್ಷಿಣಭಾರತದಲ್ಲೇ ಮೊದಲ ಡಾಲ್ಬಿ ಸ್ಕ್ರೀನ್ ಮಲ್ಟಿಪ್ಲೆಕ್ಸ್ ಅನ್ನು ಗಾಂಧಿನಗರದಲ್ಲಿ ನಿರ್ಮಿಸಲಾಗಿದೆ. ಮಹೇಶ್ ಬಾಬು ಟ್ಟೀಟ್ ಮಾಡಿ "ಜನವರಿ 16 ರಂದು ಬೆಂಗಳೂರಿನ AMB ಸಿನಿಮಾಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಡಾಲ್ಬಿ ಥಿಯೇಟರ್ ಔಪಚಾರಿಕವಾಗಿ ಬಾಗಿಲು ತೆರೆಯುತ್ತದೆ.. ಇದನ್ನು ಸಾಧಿಸಲು ಪ್ರಯತ್ನ ಮಾಡಿದ TEAM AMB ಬಗ್ಗೆ ತುಂಬಾ ಹೆಮ್ಮೆ ಇದೆ ... ಶೀಘ್ರದಲ್ಲೇ ನಮ್ಮ ಬೆಂಗಳೂರಿನಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

'AMB ಸಿನಿಮಾಸ್ ಕಪಾಲಿ' ಚಿತ್ರಮಂದಿರದಲ್ಲಿ ಜನವರಿ 16ರಂದು ಪ್ರದರ್ಶನವಾಗುವ ಸಿನಿಮಾಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಬುಕ್‌ಮೈ ಶೋನಲ್ಲಿ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಬಹುದು. ಸದ್ಯ ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್‌ ಗಾರು' ಹಾಗೂ 'ಅವತಾರ್‌ ಫೈರ್ ಅಂಡ್ ಆಷ್' ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಎರಡೂ ಸಿನಿಮಾಗಳ ಟಿಕೆಟ್ ಈಗ್ಲೇ ಬುಕ್ ಮಾಡಬಹುದು. ಮುಂದೆ ಮತ್ತಷ್ಟು ಸಿನಿಮಾಗಳು ಅಲ್ಲಿ ಪ್ರದರ್ಶನ ಕಾಣಲಿವೆ.

ಈಗಾಗಲೇ ಕೆಲವರು ಟಿಕೆಟ್ ಬುಕ್ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ನಿಧಾನವಾಗಿ 'AMB ಸಿನಿಮಾಸ್ ಕಪಾಲಿ' ಉದ್ಘಾಟನೆ ಆಗುತ್ತಿರುವ ವಿಚಾರ ಸಿನಿರಸಿಕರಿಗೆ ಗೊತ್ತಾಗುತ್ತಿದೆ. ಸಾಕಷ್ಟು ಜನ ಅಲ್ಲಿ ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳ ಸಿನಿಮಾ ಹಬ್ಬವೇ ಅಲ್ಲಿ ಶುರುವಾಗಲಿದೆ. ಗಾಂಧಿನಗರದಲ್ಲಿದ್ದ ಸಾಕಷ್ಟು ಹಳೆಯ ಚಿತ್ರಮಂದಿರಗಳು ನೆಲಸಮ ಆಗಿದೆ. ಕೆಲವು ಕಟ್ಟಡಗಳನ್ನು ಕೆಡವಿ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ನಾಲ್ಕೈದು ಚಿತ್ರಮಂದಿರಗಳು ಮಾತ್ರ ಈಗ ಗಾಂಧಿನಗರದಲ್ಲಿ ಚಾಲ್ತಿಯಲ್ಲಿವೆ. ಇದೀಗ ಅದೇ ಸಾಲಿಗೆ 'AMB ಸಿನಿಮಾಸ್ ಕಪಾಲಿ' ಚಿತ್ರಮಂದಿರ ಸೇರಿಕೊಳ್ತಿದೆ.

1968ರಲ್ಲಿ ಶುರುವಾಗಿದ್ದ 'ಕಪಾಲಿ' ಚಿತ್ರಮಂದಿರ ಸುಮಾರು 50 ವರ್ಷಗಳ ಕಾಲ ಸಿನಿಮಾಗಳನ್ನು ಪ್ರದರ್ಶಿಸಿತ್ತು. ಏಷ್ಯಾದಲ್ಲೇ ಮೊದಲ 3-ಪ್ರೊಜೆಕ್ಟರ್ ಹಾಗೂ ಸಿನೆರಾಮ್ ತಂತ್ರಜ್ಞಾನ ಹೊಂದಿದ್ದ ಚಿತ್ರಮಂದಿರ ಎನಿಸಿಕೊಂಡಿತ್ತು. ಡಾ. ರಾಜ್‌ಕುಮಾರ್ ಅಭಿನಯದ ಸಾಕಷ್ಟು ಚಿತ್ರಗಳು ಅಲ್ಲಿ ತೆರೆಕಂಡು ಪ್ರೇಕ್ಷಕರನ್ನು ರಂಜಿಸಿತ್ತು. 1465 ಆಸನಗಳಿದ್ದ ಚಿತ್ರಮಂದಿರವನ್ನು ಬಳಿಕ 1,112ಕ್ಕೆ ಇಳಿಸಲಾಗಿತ್ತು. ಚಿತ್ರಮಂದಿರ ಜಾಗದ ಮಾಲೀಕರಾಗಿದ್ದ ದಾಸಪ್ಪ ಸಹೋದರರು ಬೆಳಗಾವಿಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದರು. ಅವರ ಬಳಿ ತೆಲುಗು ನಟ ಮಹೇಶ್ ಬಾಬು ಜಾಗ ಖರೀದಿಸಿ ಚಿತ್ರಮಂದಿರ ಸ್ಥಾಪಿಸಿದ್ದಾರೆ ಎನ್ನಲಾಗ್ತಿದೆ.

More from Filmibeat

Read more about: theater mahesh babu sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X