twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳು ಪೂರ್ಣ ತೆರೆಯದೇ ಇರುವ ಹಿಂದೆ ಅಂಬಾನಿ ಕೈವಾಡ: ದರ್ಶನ್ ಅನುಮಾನ

    |

    ನಟ ದರ್ಶನ್, ಉದ್ಯಮಿ ಅಂಬಾನಿಯ ಕುರಿತು ಅನುಮಾನವೊಂದನ್ನು ಎತ್ತಿದ್ದಾರೆ. ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯದೇ ಇರುವ ಹಿಂದೆ ಅಥವಾ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನಿರಾಕರಿಸುತ್ತಿರುವ ಹಿಂದೆ ಅಂಬಾನಿಯ ಕೈವಾಡ ಇರಬಹುದು ಎಂದಿದ್ದಾರೆ ದರ್ಶನ್ ಎತ್ತಿದ್ದಾರೆ.

    Recommended Video

    OTT, 5G ಇದೆಲ್ಲಾ ಅಂಬಾನಿ ಮಾಡ್ತಾ ಇರೋ Scam ..! | Darshan | Ambani | Filmibeat Kannada

    ಇಂದು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ನಟ ದರ್ಶನ್, ಮಾರ್ಕೆಟ್‌ನಲ್ಲಿ, ಮದುವೆಗಳಲ್ಲಿ ಜನವಿದ್ದಾರೆ. ಸ್ಕೂಲು-ಕಾಲೇಜುಗಳು ಸಹ ತೆರೆದಿವೆ. ಎಲ್ಲೆಡೆ ಜನಗಳು ಗುಂಪು ಸೇರುತ್ತಿದ್ದಾರೆ ಆದರೆ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ದರ್ಶನ್.

    ಒಟಿಟಿಯಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ಇಲ್ಲಿದೆ ಕಾರಣಒಟಿಟಿಯಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ಇಲ್ಲಿದೆ ಕಾರಣ

    ಉದ್ಯಮಿ ಅಂಬಾನಿ 5ಜಿ ನೆಟ್‌ವರ್ಕ್‌ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನಿಸುತ್ತಿದೆ. 5ಜಿ ಓಡಬೇಕು ಎದರೆ ಒಟಿಟಿ ಸಿನಿಮಾಗಳು, ಆನ್‌ಲೈನ್‌ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಒಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ಕೆಲವು ದೊಡ್ಡ-ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸಿರಬಹುದು ಎಂದರು ನಟ ದರ್ಶನ್.

    ನನ್ನ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವೆ: ದರ್ಶನ್

    ನನ್ನ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವೆ: ದರ್ಶನ್

    ಚಿತ್ರಮಂದಿರಗಳಲ್ಲಿ ಈಗ 50% ಪ್ರೇಕ್ಷಕರಿಗೆ ಅಷ್ಟೆ ಅವಕಾಶ ನೀಡಬೇಕು ಎಂದು ನಿಯಮ ಮಾಡಲಾಗಿದೆ. ಒಂದು ವೇಳೆ ಅದನ್ನು 25% ಇಳಿಸಿದರೂ ಸರಿಯೇ ನನ್ನ ಸಿನಿಮಾವನ್ನು ನಾನು ಚಿತ್ರಮಂದಿರಲ್ಲಿಯೇ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು ನಟ ದರ್ಶನ್.

    ತಮಿಳುನಾಡು ಸರ್ಕಾರ ಆದೇಶಕ್ಕೆ ಕೇಂದ್ರ ತಕರಾರು

    ತಮಿಳುನಾಡು ಸರ್ಕಾರ ಆದೇಶಕ್ಕೆ ಕೇಂದ್ರ ತಕರಾರು

    ಕೆಲವು ದಿನಗಳ ಹಿಂದಷ್ಟೆ ತಮಿಳುನಾಡು ಸರ್ಕಾರವು ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಆದೇಶ ಹೊರಡಿಸಿತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ತಕರಾರು ತೆಗೆದು, ಕೇಂದ್ರ ಸರ್ಕಾರ ನೀಡಿರುವ ಆದೇಶಗಳನ್ನೇ ರಾಜ್ಯ ಸರ್ಕಾರ ಪಾಲಿಸಬೇಕು, ತಮಿಳುನಾಡು ಸರ್ಕಾರ ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸೂಚಿಸಿತು. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ.

    ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?

    ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪೂರ್ಣ ಅನುಮತಿ

    ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪೂರ್ಣ ಅನುಮತಿ

    ತಮಿಳುನಾಡು ಸರ್ಕಾರದ ನಂತರ ಇದೀಗ ಪಶ್ಚಿಮ ಬಂಗಾಳ ಸರ್ಕಾರವೂ ಸಹ ರಾಜ್ಯದಲ್ಲಿ ಚಿತ್ರಮಂದಿರಗಳು 100% ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎಂಬ ಆದೇಶ ನೀಡಿದೆ. ಪಶ್ಚಿಮ ಬಂಗಾಳದ ಮೇಲೂ ಕೇಂದ್ರ ಕೆಂಗಣ್ಣು ಬೀರುವ ಸಾಧ್ಯತೆ ಇದೆ.

    ಕೇರಳ ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿಲ್ಲ

    ಕೇರಳ ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿಲ್ಲ

    ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ತೆರೆದಿವೆಯಾದರೂ ಬಹುತೇಕ ಎಲ್ಲ ಕಡೆ 50% ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೇರಳ ರಾಜ್ಯದಲ್ಲಿ ಮಾತ್ರ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ.

    ಕೊನೆ ಘಳಿಗೆಯಲ್ಲಿ ಥಿಯೇಟರ್‌ನಿಂದ ಹಿಂದೆ ಸರಿದ ರವಿತೇಜ ಕ್ರ್ಯಾಕ್, ಕಾರಣವೇನು?ಕೊನೆ ಘಳಿಗೆಯಲ್ಲಿ ಥಿಯೇಟರ್‌ನಿಂದ ಹಿಂದೆ ಸರಿದ ರವಿತೇಜ ಕ್ರ್ಯಾಕ್, ಕಾರಣವೇನು?

    English summary
    Darshan raised doubt over Ambani may be the reason behind theaters were not permitted to allow 100% viewers.
    Monday, January 11, 2021, 9:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X