For Quick Alerts
  ALLOW NOTIFICATIONS  
  For Daily Alerts

  'ಲೈಫ್ ಈಸ್ ಬ್ಯೂಟಿಫುಲ್' ನಾಯಕ ಪೃಥ್ವಿ ಅಂಬರ್ ಈಗ ಗಾಯಕ

  |

  ನಾಯಕ ನಟರು ಗಾಯಕರಾಗುವುದು ಹೊಸದೇನಲ್ಲ. ಅಣ್ಣಾವ್ರು ಹಾಡಿದ್ದಾರೆ, ವಿಷ್ಣುವರ್ಧನ್ ಹಾಡಿದ್ದಾರೆ, ಸುದೀಪ್, ಪುನೀತ್, ಉಪೇಂದ್ರ, ಶಿವಣ್ಣ, ಯಶ್ ಸೇರಿದಂತೆ ಹಲವರು ಸ್ಟಾರ್ಸ್ ನಟಿಸುವುದರ ಜೊತೆಗೆ ಹಾಡುಗಳನ್ನು ಸಹ ಹಾಡಿದ್ದಾರೆ.

  ಇದೀಗ, ಯುವ ನಟ ಪೃಥ್ವಿ ಅಂಬರ್ ಗಾಯಕರಾಗಿ ಪ್ರಮೋಟ್ ಆಗಿದ್ದಾರೆ. ಹೌದು 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ಹಾಡೊಂದನ್ನು ಪೃಥ್ವಿ ಅಂಬರ್ ಹಾಡಿದ್ದಾರೆ.

  ಪೃಥ್ವಿ ಅಂಬರ್ ಅನ್ನು ಹುಡುಕಿ ಬಂದ ಬಂಪರ್ ಆಫರ್

  'ಲೈಫ್ ಈಸ್ ಬ್ಯೂಟಿಫುಲ್' ಚಿತ್ರಕ್ಕೆ ನೊಬಿಲ್ ಪೌಲ್ ಸಂಗೀತ ನಿರ್ದೇಶನವಿದೆ. ಈ ಹಾಡಿಗೆ ಪೃಥ್ವಿ ಅಂಬರ್ ಹಾಗೂ ಮದನ್ ಬೆಳ್ಳಿಸಾಲು ಸಾಹಿತ್ಯ ರಚಿಸಿದ್ದಾರೆ.

  ಅಂದ್ಹಾಗೆ, ಜಾಹೀರಾತು ಲೋಕದಲ್ಲಿ ಖ್ಯಾತಿ ಗಳಿಸಿಕೊಂಡಿರುವ ಮಲಯಾಳಂ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಾಬು ಅಲೋಷಿಯಸ್ ಜಂಟಿಯಾಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫ್ರೈಡೆ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷಿನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು,

  'ಮಮ್ಮಿ' ಮತ್ತು 'ದೇವಕಿ' ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

  #PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada

  ಇನ್ನು 'ದಿಯಾ' ಸಿನಿಮಾದ ಯಶಸ್ಸಿನ ಬಳಿಕ ಪೃಥ್ವಿ ಅಂಬರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. 'ಶುಗರ್‌ಲೆಸ್' ಚಿತ್ರೀಕರಣ ಮುಗಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಶಿವಪ್ಪ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Dia Fame actor Ambar Pruthvi sings for Life is Beautiful Movie, A film directed by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X