»   » ರೆಬೆಲ್ ಸ್ಟಾರ್ ಮಗನ ಚಿತ್ರಕ್ಕೆ ನಿರ್ದೇಶಕ, ನಿರ್ಮಾಪಕ ಯಾರಾಗಬಹುದು?

ರೆಬೆಲ್ ಸ್ಟಾರ್ ಮಗನ ಚಿತ್ರಕ್ಕೆ ನಿರ್ದೇಶಕ, ನಿರ್ಮಾಪಕ ಯಾರಾಗಬಹುದು?

Posted By:
Subscribe to Filmibeat Kannada
Ambareesh And Sumalatha Talk About Abishek Movie | FIlmibeat Kannada

ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಇದಕ್ಕಾಗಿ ಅಭಿಷೇಕ್ ಕೂಡ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ.

ಇಂದು (ಅಕ್ಟೋಬರ್ 3) ಅಂಬರೀಷ್ ಪುತ್ರನ 25ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದಲ್ಲಿ ತಮ್ಮ ಮಗನ ಚೊಚ್ಚಲ ಚಿತ್ರದ ಬಗ್ಗೆ ಸುಮಲತಾ ಮತ್ತು ಅಂಬರೀಷ್ ದಂಪತಿ ಹಲವು ಕುತೂಹಲಕಾರಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಹಾಗಿದ್ರೆ, ಅಂಬರೀಷ್ ಪುತ್ರನ ಸಿನಿಮಾ ಪ್ರವೇಶ ಯಾವಾಗ? ಅಭಿಷೇಕ್'ರನ್ನ ಯಾರು ಪರಿಚಯಿಸಲಿದ್ದಾರೆ ಎಂದು ತಿಳಿಯಲು ಮುಂದೆ ಓದಿ....

ಸಿನಿಮಾ ಮಾಡೋದು ಖಚಿತಾ

ಅಂಬರೀಷ್ ಅವರ ಮಗ ಅಭಿಷೇಕ್ ಒಂದು ಕಡೆ ಸಿನಿಮಾ ಮಾಡ್ತಾರೆ ಅಂದ್ರೆ, ಮತ್ತೊಂದೆಡೆ ರಾಜಕೀಯಕ್ಕೆ ಬರ್ತಾರೆ ಎಂಬ ಮಾತುಗಳಿತ್ತು. ಆದ್ರೆ, ಅಭಿಷೇಕ್ ಸಿನಿಮಾ ಮಾಡ್ತಾರೆ ಎನ್ನುವುದು ಸ್ವತಃ ರೆಬೆಲ್ ಸ್ಟಾರ್ ದಂಪತಿ ಸ್ಪಷ್ಟಪಡಿಸಿದ್ದಾರೆ.

'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.!

ಅಂಬಿ ಪುತ್ರನನ್ನ ಲಾಂಚ್ ಮಾಡೋದು ಯಾರು?

ತಮ್ಮ ಮಗನ ಚೊಚ್ಚಲ ಚಿತ್ರವನ್ನ ನಿರ್ಮಾಣ ಮಾಡಲು ಅನೇಕ ನಿರ್ಮಾಪಕರು ಮುಂದೆ ಬಂದಿದ್ದು, ಈಗಾಗಲೇ ಸಿದ್ದತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅಭಿಷೇಕ್ ಸಿನಿಮಾರಂಗಕ್ಕೆ ಪ್ರವೇಶ ಮಾಡಿಸಲಿರುವವರು ಯಾರು ಎಂಬುದು ಕುತೂಹಲವಾಗಿದೆ.

ಅಂಬರೀಶ್ ಮಗನ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಬಂದ ಸುದ್ದಿ.!

ಮಾರ್ಷಲ್ ಆರ್ಟ್ಸ್ ತರಬೇತಿ

ಸದ್ಯ, ವಿದೇಶದಲ್ಲಿರುವ ಅಭಿಷೇಕ್ ಅಂಬರೀಷ್ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ತೆಲುಗು ನಟ ಮಂಚ್ ಮನೋಜ್ ಕೂಡ ಅಭಿಗೆ ಸಾಥ್ ಕೊಡ್ತಿದ್ದಾರೆ.

ಅಂಬಿ-ಅಭಿಷೇಕ್ ಒಟ್ಟಿಗೆ ಅಭಿನಯಿಸ್ತಾರ?

ಮಗನ ಚೊಚ್ಚಲ ಚಿತ್ರದಲ್ಲಿ ಅಂಬರೀಷ್ ಅಭಿನಯಿಸುತ್ತಾರ ಎಂಬ ಕುತೂಹಲ ಸಾಮಾನ್ಯ. ಸ್ಕ್ರಿಪ್ಟ್ ಕೇಳಿದ್ರೆ, ಖಂಡಿತಾ ಅಭಿನಯಿಸುತ್ತೇನೆ ಎನ್ನುತ್ತಾರೆ ಅಂಬರೀಷ್.

ಸ್ವಂತವಾಗಿ ಬೆಳೆಯಬೇಕು

ಅಂಬರೀಷ್ ಅವರ ಮಗ ಎಂಬ ಮೆಟ್ಟಿಲು ತಮ್ಮ ಮಗನಿಗೆ ಸಿಗಬಾರದು. ಅವನು ಸ್ವಂತವಾಗಿ ಬೆಳಯಬೇಕು. ಅವನ ಪ್ರತಿಭೆ ಮತ್ತು ಕೌಶಲ್ಯದಿಂದ ಅಭಿಮಾನಗಳಿಸಬೇಕು. ಹೀಗಾಗಿ, ನಾವು ಸಿನಿಮಾ ನಿರ್ಮಾಣ ಮಾಡಲ್ಲ. ಬೇರೆ ಯಾರಿಗೆ ಬೇಕೋ ಅವರೇ ಅಭಿ ಜೊತೆ ಸಿನಿಮಾ ಮಾಡಬಹುದು ಎಂದು ಅಂಬಿ ಹೇಳುತ್ತಾರೆ.

ಈ ವರ್ಷ ಸಿನಿಮಾ ಸೆಟ್ಟೇರಲ್ಲ

ಸದ್ಯಕ್ಕೆ ವಿದ್ಯಾಭ್ಯಾಸದಲ್ಲಿ ಬಿಜಿಯಾಗಿರುವ ಅಭಿಷೇಕ್ ಮುಂದಿನ ವರ್ಷ ಸಿನಿಮಾ ಲೋಕಕ್ಕೆ ಕಾಲಿಡಬಹುದು. ಅದರ ಮಧ್ಯೆ ಸಿನಿಮಾಗೆ ಬೇಕಾಗಿರುವ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.

English summary
Rebel star ambareesh and sumalatha ambareesh Talk About Abhishek Debut Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada