ಮರಣಶಯ್ಯೆಯಲ್ಲಿ 'ಭೀಷ್ಮ' ಅಂಬಿ: 'ಕುರುಕ್ಷೇತ್ರ' ಚಿತ್ರದ ವಿಡಿಯೋ ಲೀಕ್.!
ನಿಮಗೆಲ್ಲಾ ಗೊತ್ತಿರುವ ಹಾಗೆ, ರೆಬೆಲ್ ಸ್ಟಾರ್ ಅಂಬರೀಶ್ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'ದಲ್ಲಿ ಅಂಬರೀಶ್ 'ಭೀಷ್ಮ'ನ ಪಾತ್ರ ನಿರ್ವಹಿಸಿದ್ದಾರೆ.
ಕಳೆದ ವರ್ಷವೇ 'ಕುರುಕ್ಷೇತ್ರ' ಚಿತ್ರದಲ್ಲಿನ ಅಂಬರೀಶ್ ಭಾಗದ ಚಿತ್ರೀಕರಣ ಪೂರ್ಣಗೊಂಡಿತ್ತು. 'ಭೀಷ್ಮ'ನ ಪಾತ್ರಕ್ಕೆ ಅಂಬರೀಶ್ ಡಬ್ಬಿಂಗ್ ಕೂಡ ಮುಗಿಸಿದ್ದರು. 'ಕುರುಕ್ಷೇತ್ರ' ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ. ಸದ್ಯ 'ಕುರುಕ್ಷೇತ್ರ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇಚ್ಛಾಮರಣಿಯಾದ ಭೀಷ್ಮ 'ಮಹಾಭಾರತ'ದಲ್ಲಿ ಅತ್ಯಂತ ಪ್ರಭಾವಿ. 'ದೇವವ್ರತ', 'ಗಾಂಗೇಯ', 'ಪಿತಾಮಹ' ಅಂತೆಲ್ಲಾ ಕರೆಯಿಸಿಕೊಳ್ಳುತ್ತಿದ್ದ ಭೀಷ್ಮ 'ಮಹಾಭಾರತ' ಯುದ್ಧದ ನಂತರ ತನ್ನ ಇಚ್ಛೆಯಂತೆ ಮರಣ ಹೊಂದುತ್ತಾನೆ.
ಇಂತಹ ಪಾತ್ರ ಪೋಷಿಸಿರುವ ಅಂಬರೀಶ್ 'ಕುರುಕ್ಷೇತ್ರ' ಚಿತ್ರದಲ್ಲಿ ಭೀಷ್ಮನಂತೆ ಮರಣಶಯ್ಯೆಯಲ್ಲಿ ಮಲಗಿರುವ ವಿಡಿಯೋವೊಂದು ಲೀಕ್ ಆಗಿದೆ. ಮುಂದೆ ಓದಿರಿ...

ಮರಣಶಯ್ಯೆಯಲ್ಲಿ 'ಭೀಷ್ಮ' ಅಂಬಿ
ಒಂದು ಕಡೆ ಅಂಬರೀಶ್ ರವರ ಅಂತಿಮ ಯಾತ್ರೆ ನಡೆಯುತ್ತಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಅಂಬರೀಶ್ ರವರ ಅಂತ್ಯಕ್ರಿಯೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಹೀಗಿರುವಾಗಲೇ, 'ಕುರುಕ್ಷೇತ್ರ' ಚಿತ್ರದಲ್ಲಿ ಅಂಬರೀಶ್, ಭೀಷ್ಮನ ಪಾತ್ರಧಾರಿಯಾಗಿ ಮರಣಶಯ್ಯೆಯಲ್ಲಿ ಮಲಗಿರುವ ವಿಡಿಯೋ 'ಕುರುಕ್ಷೇತ್ರ' ಚಿತ್ರ ತಂಡದಿಂದಲೇ ಲೀಕ್ ಆಗಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ಭೀಷ್ಮನ ಸಾವಿನ ದೃಶ್ಯ
ಸತ್ಯವತಿ ಕಡೆಯಿಂದ ಇಚ್ಛಾಮರಣ ಹೊಂದುವ ವರ ಪಡೆದಿದ್ದ ಭೀಷ್ಮ 'ಮಹಾಭಾರತ'ದ ಯುದ್ಧ ಸಮಾಪ್ತಿಯಾದ ಬಳಿಕ ಜೀವವನ್ನು ಅಂತ್ಯಗೊಳಿಸಲು ಮನಸ್ಸು ಮಾಡುತ್ತಾರೆ. ಇದೇ ಸನ್ನಿವೇಶ 'ಕುರುಕ್ಷೇತ್ರ' ಚಿತ್ರದಲ್ಲಿ ಇದೆ.

ಅಭಿಮಾನಿಗಳ ಕಣ್ಣಾಲಿಗಳು ಒದ್ದೆ ಆಗದೇ ಇರಲ್ಲ.!
ಅಂಬರೀಶ್ ಅಭಿನಯದ 'ಕುರುಕ್ಷೇತ್ರ' ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ. 'ಕುರುಕ್ಷೇತ್ರ' ಚಿತ್ರ ಬಿಡುಗಡೆ ಆದಾಗ, ಮರಣಶಯ್ಯೆಯಲ್ಲಿ ಭೀಷ್ಮ ಮಲಗಿರುವ ದೃಶ್ಯವನ್ನು ಕಂಡು ಅಂಬಿ ಅಭಿಮಾನಿಗಳ ಕಣ್ಣಾಲಿಗಳು ಒದ್ದೆ ಆಗದೇ ಇರಲ್ಲ.

ಪಾತ್ರಗಳ ಮೂಲಕ ಅಂಬಿ ಜೀವಂತ
ಕಾಲನ ಕರೆಗೆ ಓಗೊಟ್ಟು ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಪಂಚಭೂತಗಳಲ್ಲಿ ಅಂಬರೀಶ್ ಲೀನವಾಗಲಿದ್ದಾರೆ. ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಮಾಡಿರುವ ನೂರಾರು ಪಾತ್ರಗಳ ಮೂಲಕ 'ರೆಬೆಲ್ ಸ್ಟಾರ್' ಸದಾ ಜೀವಂತ.


Click it and Unblock the Notifications











