For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ 70ನೇ ಹುಟ್ಟುಹಬ್ಬ: ಕೇಕ್ ಕತ್ತರಿಸಿ ಸಂಭ್ರಮಿಸಿದ ಸುಮಲತಾ!

  |

  ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್‌ವುಡ್‌ನ ಅಚ್ಚುಮೆಚ್ಚಿನ ನಟ. ನಿರ್ಮಾಪಕರ ಪಾಲಿನ ಸೂಪರ್‌ಸ್ಟಾರ್. ಪ್ರೀತಿಯ ಅಭಿಮಾನಿಗಳಿಗೆ ರೆಬೆಲ್ ಸ್ಟಾರ್. ಮಂಡ್ಯದ ಜನರಿಗೆ ಮಂಡ್ಯದ ಗಂಡು. ಸಿನಿಮಾ ಕ್ಷೇತ್ರದಲ್ಲೂ, ರಾಜಕೀಯದಲ್ಲೂ ಎರಡರಲ್ಲೂ ಮಿಂಚಿದ ಧ್ರುವತಾರೆ ಈ ರೆಬೆಲ್ ಸ್ಟಾರ್.

  ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಬರ್ತ್ ಡೇ ಅವರ ವ್ಯಕ್ತಿತ್ವದಂತೆ ಗ್ರ್ಯಾಂಡ್ ಆಗಿರುತ್ತಿತ್ತು. ಇಂದು ಅವರು ಬದುಕಿದ್ದರೆ, ಮನೆ ಮುಂದೆ ಜನಸಾಗರವನ್ನು ನೋಡುವುದೇ ಕಣ್ಣಿಗೆ ಹಬ್ಬ. ರಾಜ್ಯದ ಮೂಲೆ ಮೂಲೆಯಿಂದ ರೆಬೆಲ್ ಸ್ಟಾರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು ಆಗಮಿಸುತ್ತಿದ್ದರು. ಸಿನಿಮಾ ಹಾಗೂ ರಾಜಕೀಯ ಮುಖಂಡರುಗಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿತ್ತು.

  ಅಂಬಿ ಪುಣ್ಯಸ್ಮರಣೆ: ಸುಮಲತಾ ಬರೆದ ಭಾವುಕ ಸಾಲುಗಳು ಅಂಬಿ ಪುಣ್ಯಸ್ಮರಣೆ: ಸುಮಲತಾ ಬರೆದ ಭಾವುಕ ಸಾಲುಗಳು

  ಕೇಕ್ ಕತ್ತರಿಸಿ ಅಂಬಿ ಹುಟ್ಟುಹಬ್ಬ ಆಚರಿಸಿದ ಸುಮಲತಾ

  ರೆಬಲ್‌ ಸ್ಟಾರ್ ಅಂಬರೀಶ್ ನೆನಪಿನಲ್ಲಿಯೇ ಪತ್ನಿ ಸುಮಲತಾ ಹುಟ್ಟಹಬ್ಬ ಆಚರಿಸಿದ್ದಾರೆ. ಅಂಬಿಗಾಗಿ ಕೇಕ್ ತಂದು ಕತ್ತರಿಸಿದ್ದಾರೆ. ಫ್ರೆಂಡ್ಲಿ ನೇಚರ್‌ನ ಅಪರೂಪದ ನಟನಿಗೆ ಬರ್ತ್‌ಡೇ ಶುಭಾಶಗಳನ್ನೂ ತಿಳಿಸಿದ್ದಾರೆ. ಜೊತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

  " ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ನೀವು. 70 ವರ್ಷ ಅನ್ನುವುದು ಒಂದು ಚಿಕ್ಕ ಸಂಖ್ಯೆಯಷ್ಟೆ. ನೀವು ಯಾವಾಗಲೂ ಜೀವಿಸುತ್ತಲೇ ಇರುತ್ತೀರ. ನಿಮಗೆ ಎಂದೆಂದೂ ವಯಸ್ಸು ಅನ್ನುವುದೇ ಇಲ್ಲ. ಎಂದೆಂದಿಗೂ ಅಂಬಿ.. ಅಂಬಿ ಅಮರ." ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

  ಅಂಬಿ ಸ್ಮಾರಕ ನಿರ್ಮಿಸಲು ಭೂಮಿ ಪೂಜೆ: ಸ್ಮಾರಕ ಯಾಕೆ ಅನ್ನೋರಿಗೆ ಸುಮಲತಾ ಉತ್ತರ ಅಂಬಿ ಸ್ಮಾರಕ ನಿರ್ಮಿಸಲು ಭೂಮಿ ಪೂಜೆ: ಸ್ಮಾರಕ ಯಾಕೆ ಅನ್ನೋರಿಗೆ ಸುಮಲತಾ ಉತ್ತರ

  ರೆಬೆಲ್ ಸ್ಟಾರ್ ಅಂಬರೀಶ್ ಆಕಾಶಕ್ಕೆ ದೇವರು

  "ಗಗನಕ್ಕೆ ಯಾವುದೇ ಮಿತಿಯಿಲ್ಲ. ಅಂಬರೀಶ್ ಆ ಆಕಾಶಕ್ಕೆ ದೇವರಿದ್ದಂತೆ. ಅದರಂತೆ ನಿಮ್ಮ ಪ್ರೀತಿಗೂ ಕೂಡ ಮಿತಿಯಿಲ್ಲ. ನೀವು ಎಂದೆಂದೂ ಮರೆಯಲು ಸಾಧ್ಯವಾಗದಷ್ಟು ನೆನಪುಗಳನ್ನು ಕೊಟ್ಟು ಅಗಲಿದ್ದೀರಿ. ಜೀವನ ಪರ್ಯಂತ ಖುಷಿಯನ್ನು ಕೊಟ್ಟಿದ್ದೀರಿ. ಎಂದೆಂದಿಗೂ ಮುಗಿದ ಪ್ರೀತಿಯನ್ನು ಕೊಟ್ಟಿದ್ದೀರಿ." ಎಂದು ಇನ್ನೊಂದು ಟ್ವೀಟ್‌ನಲ್ಲಿ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ."

  Ambareesh Birth Anniversary: Sumalatha Celebrates With Special Cake

  ಅಂಬರೀಶ್ ಮಂಡ್ಯ ಜಿಲ್ಲೆಯ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದ್ದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ದಂಪತಿಯ ಪತ್ರ. ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಆಗಿದ್ದವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಂತೆ ಅಂಬರೀಶ್ ಆಗಿ ಬದಲಾಗಿದ್ದರು. ಇಂದು ( ಮೇ 29) ಅಂಬಿ 70ನೇ ಹುಟ್ಟುಹಬ್ಬ. ಒಂದು ಅಂಬಿ ಇದ್ದಿದ್ದರೆ, ಇಡೀ ಕರ್ನಾಟಕವೇ ರೆಬೆಲ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿತ್ತು.

  English summary
  Ambareesh Birth Anniversary: Sumalath Celebrates With Special Cake, Know More.
  Monday, May 30, 2022, 9:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X