twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    |

    Recommended Video

    Ambareesh, Kannada Actor Demise : ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    ಅಂಬರೀಶ್ ತಮ್ಮ ಇಡೀ ಜೀವನದಲ್ಲಿ ತಾವು ಆಸೆ ಪಟ್ಟಂತೆ ಬದುಕಿ ಬಾಳಿದವರು. ರೆಬೆಲ್ ವ್ಯಕ್ತಿತ್ವ ಹೊಂದಿದ್ದ ಅಂಬರೀಶ್ ಇಂದಿನ ಚಿತ್ರರಂಗಕ್ಕೆ 'ದೊಡ್ಡಣ್ಣ'ನಂತಿದ್ದರು. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯಾದ್ರು ಮೊದಲು ಬರ್ತಿದ್ದೇ ಅಂಬಿ ಮನೆಗೆ.

    ಕೇವಲ ಸಿನಿಮಾರಂಗ ಮಾತ್ರವಲ್ಲ, ಕೆಲವರ ವೈಯಕ್ತಿಕ ಜೀವನದಲ್ಲಾದ ಸಮಸ್ಯೆಗಳಿಗೂ ಅಂಬರೀಶ್ ಪರಿಹಾರ ನೀಡಿದ್ದಾರೆ. ಹೀಗಿದ್ದ ಅಂಬರೀಶ್ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.

    ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.? ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

    ಬಹಿರಂಗವಾಗಿ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಕಷ್ಟಪಡುತ್ತಿದ್ದರು. ಕೆಲವು ಕಡೆ ಕುಸಿದು ಬಿದ್ದ ಘಟನೆಗಳು ನಡೆದಿದ್ದವು. ಇಂತಹ ಅಂಬಿಗೆ ಕೊನೆಯ ದಿನದಲ್ಲೂ ಎರಡು ಪ್ರಮುಖ ಆಸೆಗಳು ಇದ್ದವು. ಆ ಎರಡು ಆಸೆಗಳನ್ನ ನೆರವೇರಿಸದೇ ಇಹಲೋಕ ತ್ಯಜಿಸಿದರು ಎನ್ನುವುದು ಈಗ ಬೇಸರದ ಸಂಗತಿ. ಅಂಬಿಗೆ ಕೊನೆಯ ದಿನಗಳಲ್ಲಿದ್ದ ಆ ಎರಡು ಆಸೆ ಯಾವುದು.? ಮುಂದೆ ಓದಿ....

    ಅಂಬಿ ಮಗನ ಸಿನಿಮಾ

    ಅಂಬಿ ಮಗನ ಸಿನಿಮಾ

    ಅಂಬರೀಶ್ ಅವರ ಮಗ ಅಭಿಷೇಕ್ 'ಅಮರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಹುತೇಕ 'ಅಮರ್' ಸಿನಿಮಾ ಚಿತ್ರೀಕರಣ ಮುಗಿದಿತ್ತು. ಮಗನ ಸಿನಿಮಾ ನೋಡುವ ಆಸೆ ಮತ್ತು ಉದ್ದೇಶ ಎರಡೂ ಅಂಬಿಗಿತ್ತು. ಮಗನನ್ನ ಇಂಡಸ್ಟ್ರಿಗೆ ದೊಡ್ಡದಾಗಿ ಪರಿಚಯ ಮಾಡಬೇಕು ಎಂಬ ಕನಸು ಕೂಡ ಕಂಡಿದ್ದರು. ಆದ್ರೆ, ಅಂಬರೀಶ್ ಅವರ ಈ ಆಸೆ ಕೊನೆಗೂ ಈಡೇರಲೇ ಇಲ್ಲ. 'ಅಮರ್' ಸಿನಿಮಾ ನೋಡದೇ ಅಂಬಿ ಇಹಲೋಕ ತ್ಯಜಿಸಿದ್ದಾರೆ.

    ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

    ಜೆಪಿ ನಗರ ಮನೆ ರೆಡಿಯಾಗ್ಬೇಕಿತ್ತು

    ಜೆಪಿ ನಗರ ಮನೆ ರೆಡಿಯಾಗ್ಬೇಕಿತ್ತು

    ಜೆಪಿ ನಗರದಲ್ಲಿರುವ ಅಂಬರೀಶ್ ಅವರ ನಿವಾಸ ನವೀಕರಣದ ಕೆಲಸ ನಡೆಯುತ್ತಿತ್ತು. ಮನೆಯನ್ನ ಹೊಸದಾಗಿ ವಿನ್ಯಾಸಗೊಳಿಸುತ್ತಿದ್ದರು. ಹೀಗಾಗಿ, ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿದ್ದ ಅಪಾರ್ಟ್ ಮೆಂಟ್ ನಲ್ಲಿ ಕೆಲವು ದಿನ ವಾಸವಾಗಿದ್ದರು. ಬಟ್, ಕೊನೆಯ ತಮ್ಮ ದಿನಗಳನ್ನ ಕನಸಿನ ಮನೆಯಲ್ಲಿ ಕಳೆಯಲು ಸಾಧ್ಯವಾಗಿಲ್ಲ ಎಂಬ ಕೊರಗು ಅವರನ್ನ ಕಾಡಿತ್ತು.

    ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

    ಕಲಾವಿದರ ಸಂಘದ ಕಟ್ಟಡ ನಿರ್ಮಾಣ

    ಕಲಾವಿದರ ಸಂಘದ ಕಟ್ಟಡ ನಿರ್ಮಾಣ

    ಇನ್ನು ಕಲಾವಿದರಿಗಾಗಿ ಒಂದು ಕಟ್ಟಡ ಬೇಕು ಎನ್ನುವುದು ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಇದ್ದ ಮಹಾದಾಸೆ. ಇಂತಹ ಆಸೆಯನ್ನ ಅಂಬರೀಶ್ ಅವರ ನೆರವೇರಿಸಿದ್ದರು. ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಅಂತಹ ಕಲಾವಿದರಮ್ನ ಜೊತೆಗೂಡಿಸಿಕೊಂಡು ಕಲಾವಿದರಿಗಾಗಿ ಚಾಮರಾಜಪೇಟೆಯಲ್ಲಿ ಕಲಾವಿದರ ಸಂಘ ಕಟ್ಟಿದರು. ಇದು ಅಂಬಿಗೆ ಬಹಳ ಸಂತೋಷ ನೀಡಿತ್ತು.

     ಅಂಬಿ ವಿಧಿವಶ: ವಿಕ್ರಂ ಆಸ್ಪತ್ರೆಯಲ್ಲಿ ಗಣ್ಯರ ದಂಡು ಅಂಬಿ ವಿಧಿವಶ: ವಿಕ್ರಂ ಆಸ್ಪತ್ರೆಯಲ್ಲಿ ಗಣ್ಯರ ದಂಡು

    ತಾಯಿಗೆ ತಕ್ಕ ಮಗ

    ತಾಯಿಗೆ ತಕ್ಕ ಮಗ

    ಅಂಬರೀಶ್ ಅವರ ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಿದ್ದರೂ, ಸುದೀಪ್ ಅವರ ಒತ್ತಾಯದ ಮೆರೆಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಎಂಬ ಸಿನಿಮಾ ಮಾಡಿದರು. ದುರದೃಷ್ಟವಶಾತ್ ಅದೇ ಅವರ ಕೊನೆಯ ಸಿನಿಮಾ ಆಯ್ತು. ಇನ್ನು ಸುಮಲತಾ ಹಾಗೂ ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ' ಸಿನಿಮಾವನ್ನ ಅಂಬಿ ಕೊನೆಯದಾಗಿ ನೋಡಿದ್ದರು.

    English summary
    Kannada Actor Former Minister Ambareesh (66) passes away.
    Sunday, November 25, 2018, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X