ಸಾವಿಗೂ ಮುನ್ನ ಅಂಬರೀಶ್ ಈ ಸಿನಿಮಾಗಳನ್ನು ನೋಡಬೇಕಿತ್ತು!

ರೆಬಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ ಎನ್ನುವ ಸುದ್ದಿ ನಂಬಲು ಆಗುತ್ತಿಲ್ಲ. ಇಷ್ಟು ವರ್ಷಗಳ ಕಾಲ ಸಿನಿಮಾರಂಗದಲ್ಲಿ ತಮ್ಮ ನಟನೆಯ ಮೂಲಕ ದೊಡ್ಡ ಹೆಸರು ಮಾಡಿದ್ದ ಈ ನಟ ಈಗ ಎಲ್ಲರಿಂದ ಮರೆಯಾಗಿದ್ದಾರೆ.

ಅಂಬರೀಶ್ ಒಬ್ಬ ಸಿನಿಮಾ ಪ್ರೇಮಿ. ಎಲ್ಲ ನಟರ ಸಿನಿಮಾಗಳಿಗೆ ಅವರು ಪ್ರೋತ್ಸಾಹ ನೀಡುತ್ತಿದ್ದರು. ಅದೆಷ್ಟೋ ಸಿನಿಮಾಗಳ ಟ್ರೇಲರ್, ಆಡಿಯೋ ಬಿಡುಗಡೆ ಮಾಡಿಕೊಟ್ಟು ಎಷ್ಟೋ ಸಿನಿಮಾಗಳಿಗೆ ಶಕ್ತಿ ನೀಡಿದ್ದರು.

ಹೀಗಿದ್ದ ಅಂಬರೀಶ್, ತಮ್ಮ ಸಾವಿಗೂ ಮೊದಲು ಕೆಲವು ಸಿನಿಮಾಗಳನ್ನು ನೋಡಬೇಕಿತ್ತು. ತಮ್ಮ ಮಗ ಅಭಿಷೇಕ್ ನಟನೆಯ 'ಅಮರ್' ಸೇರಿದಂತೆ ಕೆಲ ಸಿನಿಮಾಗಾಗಿ ಅಂಬರೀಶ್ ಆಸೆ ಪಟ್ಟು ಕಾದಿದ್ದರು. ಆದರೆ, ಕೊನೆಗೂ ಈ ಸಿನಿಮಾಗಳನ್ನು ಅವರು ನೋಡಲು ಆಗಲೇ ಇಲ್ಲ. ಮುಂದೆ ಓದಿ...

ಮಗನ 'ಅಮರ್' ಸಿನಿಮಾ ನೋಡಲಿಲ್ಲ

ಮಗನ 'ಅಮರ್' ಸಿನಿಮಾ ನೋಡಲಿಲ್ಲ

'ಅಮರ್' ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಮೊದಲ ಸಿನಿಮಾವಾಗಿದೆ. ಅಂಬಿ ಅವರ ಮೊದಲ ಹೆಸರಾದ ಅಮರ್ ನಾಥ್ ಅನ್ನೇ ಈ ಸಿನಿಮಾದ ಹೆಸರನ್ನಾಗಿ ಇಡಲಾಗಿತ್ತು. ಕೆಲ ತಿಂಗಳುಗಳ ಹಿಂದೆ ಮಗನ ಸಿನಿಮಾವನ್ನು ಅವರು ಲಾಂಚ್ ಮಾಡಿದ್ದರು. ತಮ್ಮ ರೀತಿ ಅಭಿಷೇಕ್ ಕೂಡ ಸ್ಟಾರ್ ಆಗಲಿ ಎಂಬ ಕನಸನ್ನು ಹೊಂದಿದ್ದ ಅವರು 'ಅಮರ್' ಚಿತ್ರವನ್ನ ನೋಡದೆ ಕಣ್ಣು ಮುಚ್ಚಿದರು.

'ಕುರುಕ್ಷೇತ್ರ' ಬಿಡುಗಡೆಯಾಗಲಿಲ್ಲ

'ಕುರುಕ್ಷೇತ್ರ' ಬಿಡುಗಡೆಯಾಗಲಿಲ್ಲ

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಅಂಬರೀಶ್ ಅವರ ಕೊನೆಯ ಸಿನಿಮಾವಾಗಿದ್ದರೂ, ಅವರ 'ಕುರುಕ್ಷೇತ್ರ' ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟರು ಒಟ್ಟಿಗೆ ನಟಿಸಿದ್ದರು. ಈ ಐತಿಹಾಸಿಕ ಮಹಾ ಸಿನಿಮಾದಲ್ಲಿ ಅಂಬಿ ಬೀಷ್ಮನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ರಿಲೀಸ್ ಆಗುವ ಮುನ್ನವೇ ಅಂಬರೀಶ್ ವಿಧಿವಶರಾದರು.

'ಕೆ ಜಿ ಎಫ್' ಬಗ್ಗೆ ಕನಸು

'ಕೆ ಜಿ ಎಫ್' ಬಗ್ಗೆ ಕನಸು

'ಕೆ ಜಿ ಎಫ್' ಚಿತ್ರದ ಬಗ್ಗೆ ಇಡೀ ದೇಶವೇ ನಿರೀಕ್ಷೆ ಇಟ್ಟುಕೊಂಡಿದೆ. ಅಂಬರೀಶ್ ಕೂಡ ಈ ಸಿನಿಮಾವನ್ನು ನೋಡುವ ಬಯಕೆ ಹೊಂದಿದ್ದರು. 'ಕೆ ಜಿ ಎಫ್' ಚಿತ್ರದ ಟ್ರೇಲರ್ ಅನ್ನು ಸಹ ಅಂಬರೀಶ್ ಅವರೇ ಬಿಡುಗಡೆ ಮಾಡಿದ್ದರು. ತಮ್ಮ ಪ್ರೀತಿಯ ಅಂಬರೀಶಣ್ಣನಿಗೆ 'ಕೆ ಜಿ ಎಫ್' ಚಿತ್ರವನ್ನು ತೋರಿಸುವ ಯಶ್ ಕನಸು ಹಾಗೆ ಉಳಿಯಿತು.

'ಡಾಟರ್ ಆಫ್ ಪಾರ್ವತಮ್ಮ' ವೀಕ್ಷಿಸಲಿಲ್ಲ

'ಡಾಟರ್ ಆಫ್ ಪಾರ್ವತಮ್ಮ' ವೀಕ್ಷಿಸಲಿಲ್ಲ

ಇತ್ತೀಚಿಗಷ್ಟೆ ತಮ್ಮ ಪ್ರೀತಿಯ ಪತ್ನಿ ಸುಮಲತಾ ಅವರ 'ತಾಯಿಗೆ ತಕ್ಕ ಮಗ' ಸಿನಿಮಾವನ್ನು ಅಂಬರೀಶ್ ವೀಕ್ಷಿಸಿದ್ದರು. ಈ ಸಿನಿಮಾದ ಬಗ್ಗೆ ಬಹಳ ಮೆಚ್ಚಿಕೊಂಡು ಮಾತನಾಡಿದ್ದರು. ಆದರೆ, ಸುಮಲತಾ ಅವರ ಮತ್ತೊಂದು ಸಿನಿಮಾ 'ಡಾಟರ್ ಆಫ್ ಪಾರ್ವತಮ್ಮ' ಬರುವ ಮೊದಲೇ ಅಂಬರೀಶ್ ಈ ಲೋಕ ಬಿಟ್ಟು ಹೋದರು.

More from Filmibeat

English summary
Kannada actor Ambareesh did not seen these movies. Actor, Former Minister, Congress Politician Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X