»   » ಕ್ಯಾಬಿನೆಟ್ ನಿಂದ ಅಂಬರೀಶ್ ಡ್ರಾಪ್: ಟ್ವಿಟ್ಟರ್ ನಲ್ಲಿ ಗುಡುಗಿದ ಪತ್ನಿ ಸುಮಲತಾ

ಕ್ಯಾಬಿನೆಟ್ ನಿಂದ ಅಂಬರೀಶ್ ಡ್ರಾಪ್: ಟ್ವಿಟ್ಟರ್ ನಲ್ಲಿ ಗುಡುಗಿದ ಪತ್ನಿ ಸುಮಲತಾ

Posted By:
Subscribe to Filmibeat Kannada

ಅಂತೂ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಂಪುಟ ಸರ್ಜರಿ ಸರ್ಕಸ್ ಮುಗಿದಿದೆ. ಕ್ಯಾಬಿನೆಟ್ ನ ವಸತಿ ಸಚಿವ ಸ್ಥಾನದಿಂದ ಅಂಬರೀಶ್ ರವರನ್ನ ಕೈಬಿಟ್ಟಾಗಿದೆ.

ಇದರಿಂದ ಮಂಡ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಸ್ಯಾಂಡಲ್ ವುಡ್ ಕೂಡ ಬಂದ್ ಆಗಿದೆ. ಇಷ್ಟಾದರೂ, ಅಂಬರೀಶ್ ಇದುವರೆಗೂ ತುಟಿ ಬಿಚ್ಚಿಲ್ಲ. ಪತ್ನಿ ಸುಮಲತಾ ಅಂಬರೀಶ್ ಮಾತ್ರ ಟ್ವಿಟ್ಟರ್ ನಲ್ಲಿ ಸರ್ಕಾರದ ವಿರುದ್ಧ ಗಧಾ ಪ್ರಹಾರ ನಡೆಸಿದ್ದಾರೆ. [ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!]

''ಭ್ರಷ್ಟಾಚಾರ ಮಾಡದೆ, ನೇರ ನುಡಿಯಿಂದ, ಸತ್ಯ-ನಿಷ್ಟೆ ಇಂದ ಇಂದಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಆದ್ರೆ, ಸಮರದ ಅಂತಿಮ ವಿಜೇತ ಯಾರು ಎಂಬುದು ಕಾಲವೇ ನಿರ್ಧರಿಸುತ್ತೆ'' ಅಂತ ನಟಿ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

ambareesh-dropped-from-cabinet-sumalatha-twitter-reaction

ಸುಮಲತಾ ರವರ ಟ್ವೀಟ್ ಗೆ ಅಂಬಿ ಅಭಿಮಾನಿಗಳೂ ಕೂಡ ದನಿಗೂಡಿಸಿದ್ದಾರೆ. ಯಾರು ಏನೇ ಹೇಳಿದರೂ, ಈಗ ಏನೂ ಮಾಡಲು ಸಾಧ್ಯವಿಲ್ಲ. ಸಿದ್ದು ನೂತನ ಸಂಪುಟ ರಚನೆ ಆಗಿದ್ದಾಗಿದೆ.

English summary
Kannada Actress, Wife of Kannada Actor, Congress Politician, EX Housing Minister Ambareesh, Sumalatha has taken her twitter account to express her anger for dropping her Husband Ambareesh from C.M Siddaramaiah's Cabinet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada