For Quick Alerts
  ALLOW NOTIFICATIONS  
  For Daily Alerts

  ಯಶ್ ಮೇಲೆ ಅಂಬರೀಶ್ ಅಭಿಮಾನಿಗಳ ಮುನಿಸು: ಕಾರಣವೇನು?

  |

  ನಟ ಯಶ್ ಮತ್ತು ಅಂಬರೀಶ್ ಕುಟುಂಬ ಅತ್ಯಾಪ್ತವಾಗಿದ್ದವು ಹಾಗೂ ಈಗಲೂ ಅತ್ಯಾಪ್ತವಾಗಿಯೇ ಇವೆ. ಆದರೆ ಕಳೆದೆರಡು ದಿನಗಳಲ್ಲಿ ಕೆಲವು ಅಂಬಿ ಅಭಿಮಾನಿಗಳು ಯಶ್ ಮೇಲೆ ಮುನಿಸು ವ್ಯಕ್ತಪಡಿಸಿದ್ದಾರೆ.

  ಅಂಬರೀಶ್ ಹುಟ್ಟುಹಬ್ಬ ಮೇ 29 ರಂದು ಇತ್ತು. ಅದರ ಮಾರನೇಯ ದಿನ ರವಿಚಂದ್ರನ್ ಅವರ ಹುಟ್ಟುಹಬ್ಬವಿತ್ತು. ಇಬ್ಬರ ಹುಟ್ಟುಹಬ್ಬಕ್ಕೆ ಬಹುತೇಕ ಎಲ್ಲಾ ಸ್ಟಾರ್ ನಟ-ನಟಿಯರು ಸಾಮಾಜಿಜ ಜಾಲತಾಣದಲ್ಲಿ ಶುಭಾಶಯಗಳನ್ನು ಕೋರಿದ್ದರು ಆದರೆ ಯಶ್ ಮಾತ್ರ ಶುಭಾಶಯ ಕೋರಿರಲಿಲ್ಲ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ದುರಂತ ಅಂತ್ಯ ಕಾಣಲಿದ್ದಾನಾ ರಾಕಿ ಭಾಯ್?ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ಲೈಮ್ಯಾಕ್ಸ್ ಲೀಕ್?: ದುರಂತ ಅಂತ್ಯ ಕಾಣಲಿದ್ದಾನಾ ರಾಕಿ ಭಾಯ್?

  ತಮ್ಮ ಅಭಿಮಾನದ ನಟನ ಹುಟ್ಟುಹಬ್ಬಕ್ಕೆ ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿಲ್ಲವೆನ್ನುವುದು ಯಶ್ ಅವರ ಮೇಲೆ ಅಂಬರೀಶ್ ಹಾಗೂ ರವಿಚಂದ್ರನ್ ಅಭಿಮಾನಿಗಳು ಮುನಿಸಿಕೊಳ್ಳಲು ಕಾರಣವಾಗಿದೆ.

  ಸಾಮಾಜಿಕ ಜಾಲತಾಣದ ಬಳಸಿ ಒಂದು ತಿಂಗಳಾಯಿತು

  ಸಾಮಾಜಿಕ ಜಾಲತಾಣದ ಬಳಸಿ ಒಂದು ತಿಂಗಳಾಯಿತು

  ಆದರೆ ಯಶ್ ಅವರು ಟ್ವಿಟ್ಟರ್ ಅಥವಾ ಫೇಸ್‌ಬುಕ್‌ನಲ್ಲಿ ಕೊನೆಯ ಪೋಸ್ಟ್ ಹಾಕಿ ಒಂದು ತಿಂಗಳಾಯಿತು. ಯಶ್ ಅವರು ಬೇರೆ ಉಳಿದ ನಟರಷ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿಲ್ಲ.

  ಏಪ್ರಿಲ್ ತಿಂಗಳ 30 ನೇ ತಾರೀಖು

  ಏಪ್ರಿಲ್ ತಿಂಗಳ 30 ನೇ ತಾರೀಖು

  ಯಶ್ ಅವರು ಏಪ್ರಿಲ್ ತಿಂಗಳ 30 ನೇ ತಾರೀಖಿನಂದು ತಮ್ಮ ಮಗುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. 'ನಿಮ್ಮ‌ ಪ್ರೀತಿ... ಆಶೀರ್ವಾದ.. ಹಾರೈಕೆ... ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ' ಎಂದು ಕೋರಿದ್ದರು. ಮಗನ ಫೊಟೊವನ್ನು ಅದೇ ಮೊದಲ ಬಾರಿಗೆ ಪ್ರಕಟಿಸಿದ್ದರು ಯಶ್.

  ರಾಕಿಂಗ್ ಸ್ಟಾರ್ ಯಶ್ ಮನೆ ಕಾಂಪೌಂಡ್ ಗೆ ಟ್ರ್ಯಾಕ್ಟರ್ ಡಿಕ್ಕಿರಾಕಿಂಗ್ ಸ್ಟಾರ್ ಯಶ್ ಮನೆ ಕಾಂಪೌಂಡ್ ಗೆ ಟ್ರ್ಯಾಕ್ಟರ್ ಡಿಕ್ಕಿ

  ಅಂಬಿ ಕುಟುಂಬಕ್ಕೆ ಬಹು ಆಪ್ತರು ಯಶ್

  ಅಂಬಿ ಕುಟುಂಬಕ್ಕೆ ಬಹು ಆಪ್ತರು ಯಶ್

  ಯಶ್ ಅವರು ಅಂಬರೀಶ್ ಅವರ ಕುಟುಂಬಕ್ಕೆ ಬಹು ಆಪ್ತರು ಎಂಬುದರಲ್ಲಿ ಅನುಮಾನವಿಲ್ಲ. ಅಂಬರೀಶ್ ಇಲ್ಲದಾಗಲೂ ಸುಮಲತಾ ಅವರ ಬೆನ್ನಿಗೆ ನಿಂತು ಚುನಾವಣೆಯಲ್ಲಿ ಪ್ರಚಾರ ಮಾಡಿ ಚುನಾವಣೆ ಗೆಲ್ಲಲು ಕಾರಣಕರ್ತರಲ್ಲಿ ಒಬ್ಬರಾಗಿದ್ದರು ಯಶ್. ಯಶ್ ಹಾಗೂ ಅಂಬರೀಶ್ ಕುಟುಂಬದ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸುವಂತಿಲ್ಲ.

  ರವಿಚಂದ್ರನ್-ಯಶ್ ನಡುವೆ ಒಳ್ಳೆ ಬಾಂಧವ್ಯ

  ರವಿಚಂದ್ರನ್-ಯಶ್ ನಡುವೆ ಒಳ್ಳೆ ಬಾಂಧವ್ಯ

  ರವಿಚಂದ್ರನ್ ಹಾಗೂ ಯಶ್ ನಡುವೆಯೂ ಬಹಳ ಉತ್ತಮ ಬಾಂಧವ್ಯವೇ ಇದೆ. ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿಲ್ಲವೆಂಬುದು ನಿಜವೇ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ ಹಾಗಿದ್ದ ಮೇಲೆ ಅವರು ಹಟ್ಟುಹಬ್ಬಕ್ಕೆ ಸಾ.ಜಾಲತಾಣದಲ್ಲಿ ವಿಶ್ ಮಾಡಲಿಲ್ಲವೆಂದು ಹೇಳುವುದು ತರವಲ್ಲ ಎನಿಸುತ್ತದೆ.

  ತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋ

  English summary
  Some Ambareesh fans unhappy that Yash did not wish on Ambareesh's and Ravichandran's birth day on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X