ರಮ್ಯಾಗೆ ಮಾತ್ರವಲ್ಲ ಶ್ರುತಿಗೂ ಪ್ರಶ್ನೆ ಮಾಡಿದ ಅಂಬಿ ಫ್ಯಾನ್ಸ್

ಅಂಬರೀಶ್ ಅವರ ಅಂತ್ಯಕ್ರಿಯೆ ಸಮಯದಲ್ಲಿ ನಟಿ ರಮ್ಯಾ ಇರಲಿಲ್ಲ ಎಂದು ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಅದರ ಜೊತೆಗೆಯೇ ನಟಿ ಶ್ರುತಿ ಹರಿಹರನ್ ಅವರಿಗೂ ಅಂಬರೀಶ್ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

ಶ್ರುತಿ ಹರಿಹರನ್, ಅಂಬರೀಶ್ ಅವರ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಮೀ ಟೂ ಪ್ರಕರಣದಲ್ಲಿ ಶ್ರುತಿ ಹಾಗೂ ಅರ್ಜುನ್ ಸರ್ಜಾ ನಡುವೆ ಗಲಾಟೆ ನಡೆದಾಗ ಅದಕ್ಕೆ ಕೂಡ ಅಂಬಿ ಮಧ್ಯಸ್ಥಿಕೆ ವಹಿಸಿದ್ದರು. ಎಲ್ಲದಕ್ಕೂ ಹೆಚ್ಚಾಗಿ ಚಿತ್ರರಂಗದ ಒಬ್ಬ ಸದಸ್ಯೆಯಾಗಿ ಶ್ರುತಿ ಈ ಕಾರ್ಯದಲ್ಲಿ ಇರಲಿಲ್ಲ ಎನ್ನುವುದು ಅಂಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇನ್ನು, ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಶ್ರುತಿ ಹರಿಹರನ್ ಬರದೆ ಫೇಸ್ ಬುಕ್ ಮಾತ್ರ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಮುಂದೆ ಓದಿ..

ಫೇಸ್ ಬುಕ್ ನಲ್ಲಿ ಸಂತಾಪ

ಫೇಸ್ ಬುಕ್ ನಲ್ಲಿ ಸಂತಾಪ

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಂಬರೀಶ್ ಅವರ ಅಗಲಿಕೆಗೆ ಶ್ರುತಿ ಹರಿಹರನ್ ಸಂತಾಪ ಸೂಚಿಸಿದ್ದಾರೆ. ''ನಾಲ್ಕು ದಶಕಗಳಿಂದ ನಮಗೆ ಮನರಂಜನೆ ನೀಡುತ್ತಿದ್ದರು. ಅವರ 'ನಾಗರಹಾವು' ಮತ್ತು 'ಮಸಣದ ಹೂವು' ನನ್ನ ನೆಚ್ಚಿನ ಚಿತ್ರಗಳು. 200ಕ್ಕೂ ಹೆಚ್ಚು ಸಿನಿಮಾ ಮಾಡಿ ಕನ್ನಡ ಚಿತ್ರರಂಗದಲ್ಲಿ ಒಂದು ವಿಶೇಷ ಸ್ಥಾನ ಪಡೆದಿದ್ದಾರೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ಶ್ರುತಿ ಬರೆದುಕೊಂಡಿದ್ದಾರೆ.

ಮೊದಲ ಭೇಟಿ, ಮೊದಲ ಫೋಟೋ

ಮೊದಲ ಭೇಟಿ, ಮೊದಲ ಫೋಟೋ

ಅಂಬರೀಶ್ ಅವರ ಜೊತೆಗಿನ ಎರಡು ಫೋಟೋಗಳನ್ನು ಹಂಚಿಕೊಂಡ ಅದರ ನೆನಪನ್ನು ಶ್ರುತಿ ಹಂಚಿಕೊಂಡಿದ್ದಾರೆ. '' ಪ್ರಾರಂಭದಿಂದ ಅಂಬರೀಶ್ ಸರ್ ಸಿನಿಮಾಗಳನ್ನ ನೋಡಿದ್ದೆ ಹಾಗೂ ಅವರ ಬಗ್ಗೆ ಬೇರೆಯವರಿಂದ ಅನೇಕ ವಿಷಯಗಳನ್ನು ಕೇಳಿದ್ದೆ. ಆದರೆ, ನಾನು ಅವರ ಕೊನೆಯ ಸಿನಿಮಾದ ಭಾಗವಾದ ಮೇಲೆ ಅವರನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು.'' ಎಂದು ಮೊದಲ ಫೋಟೋ ಬಗ್ಗೆ ಬರೆದುಕೊಂಡಿದ್ದಾರೆ.

ಎರಡನೇ ಫೋಟೋ, ಕೊನೆಯ ಭೇಟಿ

ಎರಡನೇ ಫೋಟೋ, ಕೊನೆಯ ಭೇಟಿ

ಅಂಬರೀಶ್ ಅವರ ಜೊತೆಗಿನ ಮತ್ತೊಂದು ಫೋಟೋ ಹಂಚಿಕೊಂಡಿರುವ ಶ್ರುತಿ ಮೀ ಟೂ ಪ್ರಕರಣದಲ್ಲಿ ಅಂಬಿ ವಹಿಸಿದ್ದ ಜವಾಬ್ದಾರಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೀಟೂ ಅಭಿಯಾನ ಅಗತ್ಯವನ್ನು ಅಂಬರೀಶ್ ಸರ್ ಅರ್ಥ ಮಾಡಿಕೊಂಡಿದ್ದರು, ಈ ಬಗ್ಗೆ ಸುದ್ದಿಗೋಷ್ಟಿ ನೆಡೆದ ದಿನ ನನ್ನ ಕೂಗನ್ನು ಸರಿಯಾಗಿ ಅವರು ಮಾತ್ರ ಕೇಳಿಸಿಕೊಂಡಿದ್ದರು.'' ಎಂದಿದ್ದಾರೆ.

ಅಭಿಮಾನಿಗಳ ಪ್ರಶ್ನೆ

ಶ್ರುತಿ ಹರಿಹರನ್ ಅವರ ಫೇಸ್ ಬುಕ್ ಪೋಸ್ಟ್ ಗಮನಿಸಿದ ಅಂಬರೀಶ್ ಅಭಿಮಾನಿಗಳು ಅದಕ್ಕೆ ತಮ್ಮ ಕಮೆಂಟ್ಸ್ ಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ಅಂಬರೀಶ್ ಅವರನ್ನು ಕೊನೆಯಗಳಿಗೆಯಲ್ಲಿ ನೋಡಿಕೊಂಡು ಬರಲು ಆಗಲಿಲ್ಲವೇ ನಿಮಗೆ? ಎಂದು ಕೇಳುತ್ತಿದ್ದಾರೆ.

ಉತ್ತರ ನೀಡುತ್ತಾರಾ ಶ್ರುತಿ ?

ಉತ್ತರ ನೀಡುತ್ತಾರಾ ಶ್ರುತಿ ?

ಶ್ರುತಿ ಹರಿಹರನ್ ವಿದೇಶದಲ್ಲಿ ಇರುವ ಕಾರಣ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಬರಲು ಸಾಧ್ಯ ಆಗಲಿಲ್ಲ ಎನ್ನುವ ಮಾತಿದೆ. ಆದರೆ, ನಿಜವಾಗಿಯೂ ಅಂಬಿ ಅಂತ್ಯಕ್ರಿಯೆಗೆ ಶ್ರುತಿ ಬರಲು ಆಗದೆ ಇರುವುದಕ್ಕೆ ಇದ್ದ ಸಮಸ್ಯೆ ಏನು ಎನ್ನುವುದನ್ನು ಅವರೇ ಅಭಿಮಾನಿಗಳಿಗೆ ತಿಳಿಸಬೇಕು.

ಅಂಬಿ ಮಧ್ಯಸ್ಥಿಕೆಯ ಕೊನೆಯ ಪ್ರಕರಣ

ಅಂಬಿ ಮಧ್ಯಸ್ಥಿಕೆಯ ಕೊನೆಯ ಪ್ರಕರಣ

ಅಂಬರೀಶ್ ಎಷ್ಟೋ ಬಾರಿ ಫಿಲ್ಮ್ ಚೆಂಬರ್ ನಲ್ಲಿ ಎಷ್ಟೋ ಗಲಾಟೆಗಳಿಗೆ ನ್ಯಾಯ ತೀರ್ಮಾನ ಮಾಡಿದ್ದರು. ಆದರೆ, ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ನಡುವಿನ ಮೀಟೂ ಪ್ರಕರಣದಲ್ಲಿ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇನ್ನು ಇದು ಅಂಬಿ ನಡೆಸಿದ ಕೊನೆಯ ಪ್ರತಿಕಾಗೋಷ್ಟಿಯಾಗಿದೆ.

More from Filmibeat

English summary
Kannada actor Ambareesh fans unhappy with actress Sruthi Hariharan. Sruthi Hariharan absence during Ambarishs funeral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X