twitter
    For Quick Alerts
    ALLOW NOTIFICATIONS  
    For Daily Alerts

    'ಒಂದೇ ಒಂದು ಫೋನ್ ಮಾಡಿ ಎಂಎಲ್‌ಎ ಟಿಕೆಟ್ ಕೊಡಿಸಿದ್ದರು ರೆಬೆಲ್ ಸ್ಟಾರ್'

    |

    ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಬಾಳಿ ಬದುಕಿದ್ದೆ ಹಾಗೆ. ತಾನು ಅಂದುಕೊಂಡಿದ್ದು ಆಗಬೇಕು. ತಾನು ಹೇಳಿದ್ದು ನಡೆಯಬೇಕು ಎಂಬ ಹಠವಾದಿ ಗುಣ. ಅಂಬರೀಶ್‌ರನ್ನು ಬಹಳ ಹತ್ತಿರದಿಂದ ನೋಡಿದವರೆಲ್ಲಾ 'ರಾಜನಂತೆ ಇದ್ದರು, ರಾಜನಂತೆ ಬದುಕಿದರು, ರಾಜನಂತೆ ಹೋದರಿ' ಅಂತಾರೆ.

    ಸಿನಿಮಾ ಆಗಲಿ ಅಥವಾ ರಾಜಕೀಯ ಆಗಲಿ ರೆಬೆಲ್ ಆಗಿ ಜೀವಿಸಿದ್ದರು. ಅಂಬಿ ಸ್ನೇಹ ಜೀವಿ. ಅಜಾತಶತ್ರು ಎಂದು ಹೇಳಬಹುದು. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಟ ಶತ್ರಘ್ನ ಸಿನ್ಹಾ, ತೆಲುಗು ನಟ ಮೋಹನ್ ಬಾಬು, ವಿಷ್ಣುವರ್ಧನ್ ಅಂತಹ ಮೇರು ಕಲಾವಿದರೆಲ್ಲರಿಗೂ ಅಂಬಿ ಆಪ್ತರು. ಅಂಬಿ ಮಾತಿಗೆ ಇಲ್ಲ ಎನ್ನಲ್ಲ ಈ ಕಲಾವಿದರು. ಅಷ್ಟರ ಮಟ್ಟಿಗೆ ಆ ಆತ್ಮೀಯತೆ, ಆ ಸ್ನೇಹ ಉಳಿದುಕೊಂಡಿತ್ತು.

    ಅಂಬರೀಶ್ ಜೊತೆ ಬಹುವರ್ಷಗಳ ಒಡನಾಟ ಹೊಂದಿದ್ದ, ಅವರ ಜೊತೆ ಕೆಲಸ ಮಾಡ್ತಿದ್ದ ಎಸ್‌ಕೆ ಅನಂತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ....

    ಚಿರಂಜೀವಿ ಪಕ್ಷ ಸ್ಥಾಪಿಸಿದ್ದರು

    ಚಿರಂಜೀವಿ ಪಕ್ಷ ಸ್ಥಾಪಿಸಿದ್ದರು

    ಮೆಗಾಸ್ಟಾರ್ ಚಿರಂಜೀವಿ ಪ್ರಜಾ ರಾಜ್ಯಂ ಪಕ್ಷ ಸ್ಥಾಪಿಸಿದ್ದು ಎಲ್ಲರಿಗೂ ನೆನಪಿದೆ. ಆಂಧ್ರ ಪ್ರದೇಶ ರಾಜಕೀಯದಲ್ಲಿ ಬಹಳ ದೊಡ್ಡ ಸಂಚಲನ ಸೃಷ್ಟಿಸಿದ ಪ್ರಜಾ ರಾಜ್ಯಂ ಆಮೇಲೆ ರಾಷ್ಟ್ರೀಯ ಪಕ್ಷದ ಜೊತೆ ವಿಲೀನವಾಗಿದ್ದು ಬೇರೆ ಸಂಗತಿ. ಪ್ರಜಾ ರಾಜ್ಯಂ ಪಕ್ಷದಿಂದ ಎಂಎಲ್‌ಎ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿಜಯವಾಡದ ಉದ್ಯಮಿಯೊಬ್ಬರು ಅಂಬರೀಶ್‌ರನ್ನು ಭೇಟಿ ಮಾಡಿದರು. ಆಮೇಲೆ ಅವರಿಗೆ ಟಿಕೆಟ್ ಸಿಕ್ತು ಎಂದು ಎಸ್‌ಕೆ ಅನಂತು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

    ಒಂದೇ ಒಂದು ಫೋನ್‌ನಲ್ಲಿ ಸಿಕ್ತು ಎಂಎಲ್‌ಎ ಟಿಕೆಟ್

    ಒಂದೇ ಒಂದು ಫೋನ್‌ನಲ್ಲಿ ಸಿಕ್ತು ಎಂಎಲ್‌ಎ ಟಿಕೆಟ್

    ಎಸ್‌ಕೆ ಅನಂತು ಅವರ ಕಡೆಯಿಂದಲೇ ಅಂಬರೀಶ್‌ರನ್ನು ಭೇಟಿ ಮಾಡಿದ ಅಂಧ್ರದ ಉದ್ಯಮಿ, ಪ್ರಜಾರಾಜ್ಯಂ ಪಕ್ಷದಿಂದ ಶಾಸಕ ಸ್ಥಾನಕ್ಕೆ ಟಿಕೆಟ್ ಬೇಕು ಎಂದು ಕೇಳಿದರು. ಅವರ ಬಗ್ಗೆ ಮಾಹಿತಿ ಪಡೆದ ಬಳಿಕ ಸ್ಥಳದಲ್ಲೇ ಚಿರಂಜೀವಿ ಅವರಿಗೆ ಫೋನ್ ಮಾಡಿ ''ನಮ್ಮವರೊಬ್ಬರಿಗೆ ಟಿಕೆಟ್ ಬೇಕಿತ್ತು'' ಎಂದು ಕೇಳಿದರು. ಅದಕ್ಕೆ ಚಿರಂಜೀವಿ ಅವರು ಮರು ಮಾತಿಲ್ಲದೇ, ನಾಳೆ ಭೇಟಿಯಾಗಲು ಹೇಳಿ ಎಂದು ಹೇಳಿದ್ದನ್ನು ತಿಳಿಸಿದರು.

    ಅಂಬರೀಶ್ ಅಂದ್ರೆ ಆ ಗೌರವ ಇತ್ತು

    ಅಂಬರೀಶ್ ಅಂದ್ರೆ ಆ ಗೌರವ ಇತ್ತು

    ಅಂಬರೀಶ್ ಅಂದ್ರೆ ಚಿರಂಜೀವಿ ಅಷ್ಟರ ಮಟ್ಟಿಗೆ ಗೌರವ ಕೊಡ್ತಿದ್ದರು. ಅಂಬಿ ತಮ್ಮದೇ ಶೈಲಿಯಲ್ಲಿ 'ನಮ್ಮವರೊಬ್ಬರಿಗೆ ಟಿಕೆಟ್ ಬೇಕು' ಎಂದಾಗ, ಚಿರಂಜೀವಿ 'ಸರ್, ನೀವು ಹೇಳಿದ್ಮೇಲೆ ಮುಗಿತು, ಕಳುಹಿಸಿ'' ಎಷ್ಟು ವಿನಯದಿಂದ ಪ್ರತಿಕ್ರಿಯಿಸಿದರು ಎಂದು ಅನಂತು ಹೇಳಿಕೊಂಡಿದ್ದಾರೆ.

    Recommended Video

    ಹೈದರಾಬಾದ್ ನ ಲಗೇಜ್ ಆಟೋ ಹತ್ತಿ ಪರದಾಡಿದ ಕನ್ನಡತಿ ಖ್ಯಾತಿಯ ರಂಜನಿ | Filmibeat Kanada
    ಪ್ರತಿಫಲ ಯಾವತ್ತು ನಿರೀಕ್ಷಿಸಿಲ್ಲ

    ಪ್ರತಿಫಲ ಯಾವತ್ತು ನಿರೀಕ್ಷಿಸಿಲ್ಲ

    ಕಷ್ಟ ಎಂದು ಮನೆ ಬಳಿ ಹೋದವರಿಗೆ ಕರ್ಣನಂತೆ ದಾನ ಮಾಡಿದ್ದಾರೆ. ತನ್ನವರಿಂದ ಸಹಾಯ ಮಾಡಿಸಿದ್ದಾರೆ. ಆದರೆ, ಯಾವತ್ತೂ ಅದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ತನ್ನಿಂದ ಸಹಾಯ ಆಗಿದೆ ಎಂದು ಯಾರ ಬಳಿಯೂ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ಮಾಡಿದ ಸಹಾಯವನ್ನು ಕ್ಷಣದಲ್ಲಿ ಮರೆತುಬಿಡುತ್ತಿದ್ದರು ಅಂಬರೀಶ್ ಎಂದು ಅನಂತು ತಮ್ಮ ಒಡೆಯನ ಕುರಿತು ನೆನೆಪು ಮೆಲುಕು ಹಾಕಿದರು.

    English summary
    Ambareesh made a single phone call to give MLA ticket from Prajarajyam party in Andhra Pradesh.
    Saturday, May 29, 2021, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X