ಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳು
Recommended Video

ಬಿಳಿಗಡ್ಡ, ವಯಸ್ಸಾದ ವ್ಯಕ್ತಿ, ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಸುಮಲತಾ ಮತ್ತು ಅಭಿಷೇಕ್ ಅವರ ಪಕ್ಕದಲ್ಲೇ ಇದ್ದು, ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡುತ್ತಿದ್ದ ಇವ್ರು ಯಾರು ಎಂಬ ಕುತೂಹಲ ಹಲವರನ್ನ ಕಾಡಿದೆ.
ಹೆಸರು ಶ್ರೀನಿವಾಸ್, ಅಂಬಿ ಮತ್ತು ಅಂಬಿ ಆಪ್ತರಿಗೆ ಇವರು ಸೀನಣ್ಣ. ಸೀನಣ್ಣ ಅಂಬರೀಶ್ ಅವರ ಪಿಎ, ಸಹೋದರ, ಅಭಿಮಾನಿ, ಕುಟುಂಬದ ಸದಸ್ಯ ಎಲ್ಲವೂ ಆಗಿದ್ದರು. ಅಂಬರೀಶ್ ಮತ್ತು ಸೀನಣ್ಣ ಬಾಂಧವ್ಯ ನಿನ್ನೆ ಮೊನ್ನೆಯದಲ್ಲ. ಸುಮಾರು 35 ವರ್ಷದ ಪರಿಚಯ.
ಅಲ್ಲಿಂದ ಇಲ್ಲಿಯವರೆಗೂ ಅಂಬಿ ನಿವಾಸದಲ್ಲೇ ಜೀವನ ಮಾಡಿರುವ ಸೀನಣ್ಣ, ಅಂಬರೀಶ್ ಅವರನ್ನ ಬಹಳ ಹತ್ತಿರದಿಂದ ಬಲ್ಲವರು. ತನ್ನ ಒಡೆಯನ ಬಗ್ಗೆ ಯಾರಿಗೂ ಗೊತ್ತಿಲ್ಲದ ಅನೇಕ ವಿಷ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ತಿಳಿಯಲು ಮುಂದೆ ಓದಿ....

'ಅಂತ' ಸಿನಿಮಾ ವೇಳೆ ಬೇಟಿ
ಅಂಬರೀಶ್ ಅವರಿಗೆ ಕಾಲೇಜು ದಿನಗಳಿಂದಲೂ ಅಭಿಮಾನಯಾಗಿದ್ದ ಶ್ರೀನಿವಾಸ್ ಅವರು, ಹೇಗಾದರೂ ಮಾಡಿ ಅವರನ್ನ ಭೇಟಿಯಾಗಬೇಕು ಎಂದು ಯೋಚಿಸುತ್ತಿದ್ದರು. ಹೀಗೆ, ಒಂದು ದಿನ 'ಅಂತ' ಸಿನಿಮಾ ಶೂಟಿಂಗ್ ಗೆ ಸೀನಣ್ಣ ಹೋಗಿದ್ದರು. ಅಲ್ಲಿ ಅಂಬಿಯನ್ನ ಮಾತನಾಡಿಸಿದರು. ನಂತರ ಪದೇ ಪದೇ ಭೇಟಿಯಾಗುತ್ತಿದ್ದೆ. ಅದಕ್ಕೆ ಒಂದು ದಿನ ಅಂಬರೀಶ್ ''ಯಾಕೋ ಹೀಗ್ ಮಾಡ್ತೀಯಾ, ಬಾ ನನ್ ಜೊತೆನೇ ಇದ್ಬಿಡು'' ಅಂದ್ರು. ನಂತರ ಪಿಎ ಆಗಿ ಸೇರಿಕೊಂಡೆ. ಅಲ್ಲಿಂದ ಇಲ್ಲಿಯವರೆಗೂ ನಾನು ಸಹೋದರನಾಗಿಯೇ ನೋಡಿಕೊಂಡಿದ್ದಾರೆ ಎಂದು ಸೀನಣ್ಣ ಹೇಳಿಕೊಂಡಿದ್ದಾರೆ.

ನನ್ನನ್ನು ಬಿಟ್ಟು ಇರ್ತಿರಲಿಲ್ಲ
''ಒಂದ್ಕಡೆ ಅಭಿಮಾನ, ಅವರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ಅಂಬಿ ಅವರಲ್ಲಿ ಒಂದೇ ಒಂದು ದಿನವೂ ನೋವು ನೋಡಿಲ್ಲ. ನಾನೇನಾದರೂ ಕೆಲಸ ಇದೆ ಅಂತ ಮನೆಗೆ ಹೋಗಿದ್ದಾಗ, ಎರಡು ದಿನ ಬಂದಿಲ್ಲ ಅಂದ್ರೆ ಫೋನ್ ಮಾಡಿ 'ಈಗ ನನ್ ಮುಂದೆ ನೀನು ಇರಬೇಕು' ಅಂತಿದ್ರು. ಆಗ ಓಡಿ ಬರ್ತದ್ದೆ''

ರೇಸ್ ಚಟ ಆಗಿರಲಿಲ್ಲ
''ಅಂಬರೀಶ್ ಅವರಿಗೆ ಹೆಚ್ಚು ಇಷ್ಟವಾದ ಆಟ ರೇಸ್ ಎನ್ನುವುದು ಗೊತ್ತಿರುವ ವಿಚಾರ. ಆದ್ರೆ, ಭಾರಿ ಹಣವನ್ನ ಬೆಟ್ ಕಟ್ಟುವಷ್ಟು ಚಟ ಅವರಿಗಿರಲಿಲ್ಲ. ಕೇವಲ ಒಂದು ಸಾವಿರ, ಎರಡು ಸಾವಿರ ಬೆಟ್ ಕಟ್ತಿದ್ರು ಅಷ್ಟೇ. ಬಟ್, ರೇಸ್ ನ ತುಂಬಾ ಇಷ್ಟಪಡ್ತಿದ್ರು. ನಾನು ನೋಡಿದಾಗೆ ಐದು ಸಾವಿರವೇ ಅತಿ ಹೆಚ್ಚು ಬಟ್ ಕಟ್ಟಿದ್ದು ಅವರು''

ಯಾರ ಬಳಿಯೂ ಒಂದು ಪಡೆದಿಲ್ಲ
''ಅಂಬರೀಶ್ ಅವರು ಇದುವರೆಗೂ ಯಾರ ಬಳಿಯೂ ಒಂದು ರೂಪಾಯಿ ಪಡೆದಿಲ್ಲ. ಆದ್ರೆ, ಅದೇಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಹಲವು ಸಿನಿಮಾಗಳನ್ನ ಸಂಭಾವನೆ ಇಲ್ಲದೇ ಮಾಡಿಕೊಟ್ಟಿದ್ದಾರೆ. ಕಷ್ಟ ಅಂತ ಬಂದವರಿಗೆ ಏನಾದರೂ ಸಹಾಯ ಮಾಡ್ತಿದ್ರು. ಯಾರ ಬಳಿಯೂ ಕೈಚಾಚ ಬೇಡ, ಬೇರಯವರು ಕಾಸಿನಲ್ಲಿ ಕಾಫಿ ಕೂಡ ಕುಡಿಯಬೇಡ. ನಿನಗೆ ಏನಾದರೂ ಬೇಕು ಅಂದ್ರೆ ನನ್ನನ್ನು ಕೇಳು. ನೀನು ಎಷ್ಟು ಪ್ರಮಾಣಿಕತೆಯಿಂದ ಇರ್ತಿಯೋ ಅಲ್ಲಿಯವರೆಗೂ ನನ್ನ ಜೊತೆಯಲ್ಲೇ ಇರ್ತೀಯಾ'' ಎಂದು ಹೇಳಿಕೊಟ್ಟಿದ್ದರು.

ಅಲ್ಲವೂ ಸುಮ ಅತ್ತಿಗೆ ನೋಡಿಕೊಳ್ಳುತ್ತಿದ್ದರು
''ಅಂಬರೀಶ್ ಅವರಿಗೆ ಶಾಪಿಂಗ್ ಮಾಡುವುದು ಇಷ್ಟವಿರುತ್ತಿರಲಿಲ್ಲ. ಎಲ್ಲವೂ ಸುಮಲತಾ ಅತ್ತಿಗೆ ಮಾಡ್ತಿದ್ದರು. ಅಂಬಿ ಅಣ್ಣನಿಗೆ ಬಟ್ಟೆ ಬೇಕು ಅಂದ್ರೆ, ಮನೆಗೆ ಕರೆಯಿಸಿ ಕೊಡಿಸುತ್ತಿದ್ದರು. ಅಣ್ಣನಿಗೆ ಏನು ಬೇಕು ಏನು ಬೇಡ ಎನ್ನುವುದು ಸುಮ ಅತ್ತಿಗೆ ಗೊತ್ತಿತ್ತು. ಅವರಿಗೆ ಎಲ್ಲವೂ ಅವರೇ'' ಎಂದು ಅವರಿಬ್ಬರ ಬಾಂಧವ್ಯ ತಿಳಿಸಿದ್ದಾರೆ.

ಮೂರು ಟೇಕ್ ಮೇಲೆ ತಗೊಳ್ತಿರಲಿಲ್ಲ
''ನಾನು ನೋಡಿದ ಹಾಗೆ ಅವರು ಮೂರು ಶಾಟ್ ತೆಗೆದುಕೊಂಡ ಇತಿಹಾಸವೇ ಇಲ್ಲ. ಒಂದು ಅಥವಾ ಎರಡು ಶಾಟ್ ನಲ್ಲೇ ಓಕೆ ಆಗ್ತಿತ್ತು. ಒಂದು ಸಲ ಡೈರೆಕ್ಟರ್ ಸ್ಕ್ರಿಪ್ಟ್ ಓದಿದರೇ, ಒಂದೆ ಸಲ ಡೈಲಾಗ್ ಹೇಳ್ತಿದ್ರು. ಇನ್ನು ಅಂಬಿ ಅಣ್ಣನಿಗೆ ಹೆಚ್ಚು ಜ್ಞಾಪಕ ಶಕ್ತಿ ಇತ್ತು. ಸಾವಿರಾರು ಸಂಖ್ಯೆಗಳನ್ನ ನೆನಪಿನಲ್ಲಿಟ್ಟುಕೊಂಡಿದ್ದರು. ಯಾರಿಗಾದರೂ ಫೋನ್ ಮಾಡಬೇಕು ಅಂದ್ರೆ, ಹಾಗೆ ನಂಬರ್ ಹೇಳುತ್ತಿದ್ದರು''


Click it and Unblock the Notifications











