ಅಂಬಿ ಕುಟುಂಬಸ್ಥರಿಂದ ಅಸ್ತಿ ಪೂಜೆ ಮತ್ತು ಹಾಲು ತುಪ್ಪ ಕಾರ್ಯ
ನಟ ಅಂಬರೀಶ್ ನಿಧನರಾಗಿ ಇಂದಿಗೆ ನಾಲ್ಕು ದಿನಗಳು ಕಳೆದಿವೆ. ಇಂದು ಅವರ ಸಮಾಧಿಗೆ ಅಸ್ತಿ ಪೂಜೆ ಹಾಗೂ ಹಾಲು ತುಪ್ಪ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ನಿಧನರಾದ ಮೂರು ದಿನಕ್ಕೆ ಅಂದರೆ, ನಿನ್ನೆ ಹಾಲು ತುಪ್ಪ ಬಿಡುವ ಕಾರ್ಯ ಮಾಡಬೇಕಿತ್ತು. ಆದರೆ, ನಿನ್ನೆ ಮಂಗಳವಾರ ಆಗಿರುವ ಕಾರಣ ಇಂದು ಈ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಅಂಬರೀಶ್ ಪತ್ನಿ ಸುಮಲತಾ, ಮಗ ಅಭಿಷೇಕ್ ಪೂಜೆ ಕಾರ್ಯಗಳನ್ನು ಮಾಡುತ್ತಿದ್ದಾರೆ.
ವಿಧಿ ವಿಧಾನದಂತೆ ಎಲ್ಲ ಪೂಜಾ ಕಾರ್ಯಗಳು ನಡೆಯುತ್ತಿದೆ. ಚಿತಾ ಬಸ್ಮವನ್ನು ಪಶ್ಚಿಮ ವಾಹಿನಿಯಲ್ಲಿ, ಕಾಶಿ ಹಾಗೂ ಗೋಕರ್ಣದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಜೊತೆಗೆ ದೇವಸ್ಥಾನವೊಂದರಲ್ಲಿ ಯಾಗ ಮತ್ತು ಹೋಮ ನಡೆಯುತ್ತಿದೆ. ದೇವಸ್ಥಾನದ ಸಿಬ್ಬಂದಿಗಳೇ ಅಂಬರೀಶ್ ಅವರ ಅಭಿಮಾನದಿಂದ ಸ್ವತಃ ಪ್ರೇರಿತವಾಗಿ ಈ ಕಾರ್ಯ ಮಾಡುತ್ತಿದ್ದಾರೆ.

ಒಗ್ಗಲಿಗ ಸಂಪ್ರದಾಯದಂತೆ ಇಂದಿನ ಪೂಜಾ ಕಾರ್ಯ ನಡೆಯುತ್ತಿದೆ. ಕಂಠೀರವ ಸ್ಟೂಡಿಯೋದಲ್ಲಿ ಇಂದು ಕೂಡ ಅಭಿಮಾನಿಗಳು ಆಗಮಿಸುತ್ತಿದ್ದು, ಪೊಲೀಸ್ ಭದ್ರತೆಯನ್ನು ವಹಿಸಲಾಗಿದೆ.
ಅಂದಹಾಗೆ, ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅಂಬರೀಶ್ ಅಪ್ತ ಸೀನಪ್ಪ ಸೇರಿದಂತೆ ಕುಟುಂಬದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.


Click it and Unblock the Notifications











