For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಮುತ್ತಿನ ಬಗ್ಗೆ ಮೌನ ಮುರಿದ ಅಂಬರೀಶ್

  By ಹರಾ
  |

  ರೆಬೆಲ್ ಗೂ ಟ್ರಬಲ್ ಗೂ ಬಿಡಿಸಲಾರದ ನಂಟು. ಮೆದುಳಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ ಬಿಂದಾಸ್ ಆಗಿ ಮಾತನಾಡುವ ಅಂಬಿ, ಕೆಲವರ ಕೆಂಗಣ್ಣಿಗೆ ಆಗಾಗ ಗುರಿಯಾಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೆ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ, ಅಂಬಿ ತೆಗೆಸಿಕೊಂಡ ಒಂದು ಫೋಟೋ, ಇಡೀ ಬೆಳಗಾವಿ ಸದನ, ಮಂಡ್ಯ ಕಾಂಗ್ರೆಸ್, ದೆಹಲಿ ಹೈಕಮಾಂಡ್, ರಾಹುಲ್ ಗಾಂಧಿವರೆಗೂ ತಲುಪಿ, ಸ್ಯಾಂಡಲ್ ವುಡ್ ನೆಲವನ್ನೇ ಶೇಕ್ ಮಾಡಿಬಿಡ್ತು.

  ನಟ, ನಿರ್ಮಾಪಕ ಜೈಜಗದೀಶ್ ಮತ್ತು ವಿಜಯ್ ಲಕ್ಷ್ಮಿ ಸಿಂಗ್ ಪುತ್ರಿ ವೈಭವಿ ಕೆನ್ನೆಗೆ ಮುತ್ತು ಕೊಟ್ಟ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗಿತ್ತು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಂಬಿ, ಮೊನ್ನೆ ''ನನ್ನಿಷ್ಟ, ನಾನು 350 ಹುಡುಗಿಯರನ್ನ ಇಟ್ಟುಕೊಂಡಿದ್ದೀನಿ, ಅದು ನನ್ನ ವೈಯುಕ್ತಿಕ ಜೀವನ, ಏನ್ ಮಾಡ್ತೀರಾ'' ಅಂತ ಬಿಂದಾಸ್ ಆಗಿ ಪಟಾಕಿ ಸಿಡಿಸಿದ್ದರು.

  ಅದು ಕೆಲವೆಡೆ ಬಾಂಬ್ ನಂತೆ ಸಿಡಿದ ಪರಿಣಾಮ, ಜೈಜಗದೀಶ್ ಕುಟುಂಬ ಸುದ್ದಿಗೋಷ್ಠಿಯನ್ನು ನಡೆಸಿ, ಫೋಟೋ ಲೀಕ್ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿಕೆ ನೀಡಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಇನ್ನು ಸುಮಲತಾ ಮೇಡಂ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು. ಇದೀಗ ಮತ್ತೊಂದು ಸುತ್ತು ರೆಬೆಲ್ ಆಗಿರುವ ವಸತಿ ಸಚಿವ ಅಂಬರೀಶ್, ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಮುಂದೆ ಕೆಂಡಮಂಡಲವಾಗಿದ್ದಾರೆ. [ಸುಮಲತಾ ಬಯಲು ಮಾಡಿದ ಅಂಬಿ 'ಮುತ್ತಿ'ನ ರಹಸ್ಯ!]

  ambareesh kiss vaibhavi

  ''ಮೊಮ್ಮಕ್ಕಳಿಗೆ ಮುತ್ತು ಕೊಡುವುದು ತಪ್ಪಾ. ಮೊಮ್ಮಗಳನ್ನು ಮುದ್ದಿಸುವ ಅಧಿಕಾರ ನಂಗಿಲ್ವಾ. ನನಗೂ ಖಾಸಗಿ ಬದುಕಿದೆ. ನನ್ನನ್ನು ಬದುಕಲು ಬಿಡಿ. ಸಮಾಜದಲ್ಲಿ ನನಗೂ ಘನತೆ ಗೌರವ ಇದೆ. ಎಲ್ಲದಕ್ಕೂ ಅಪಾರ್ಥ ಕಲ್ಪಿಸಬೇಡಿ'', ಅಂತ ಕಲಾಪಕ್ಕೆ ತೆರಳುವ ಮುನ್ನ ಮಾಧ್ಯಮಗಳಿಗೆ ಅಂಬರೀಶ್ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ, ಆದ ವಿವಾದದ ಬಗ್ಗೆ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. [ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?]

  ಇಲ್ಲಿವರೆಗೂ ಸೈಲೆಂಟ್ ಆಗಿದ್ದ ಅಂಬಿ ಮಾಮ, ಕೊನೆಗೂ ವಿವಾದದ ಬಗ್ಗೆ ಪ್ರತಿಕ್ರಿಯೆಸಿ ತೆರೆ ಎಳೆದಿದ್ದಾರೆ. ಇನ್ನಾದರೂ ಅಂತೆ-ಕಂತೆಗಳ ಪುಂಗಿ ನಿಂತರೆ ಸಾಕು! ಅಂದಹಾಗೆ, ಅಂಬರೀಶ್ ಅವರ ವಯಸ್ಸು ಅರುವತ್ತೆರಡು ಪ್ಲಸ್ ಎಂಬುದು ಬಹುಶಃ ಎಲ್ಲರಿಗೂ ನೆನಪಿದೆ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)

  English summary
  Rebel Star Ambareesh has finally reacted on the controversy of he kissing Vaibhavi, daughter of Actor and Producer Jai Jagadeesh. Ambareesh has slamed the reports and questioned whether it is a crime to kiss his grand daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X