»   » ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

Posted By:
Subscribe to Filmibeat Kannada

ವರ್ಷದ ಹಿಂದೆ ಅಭಿಶೇಕ್ ಹೀಗಿರ್ಲಿಲ್ಲ. ಅಷ್ಟೊಂದು ಡಯೆಟ್ ಮಾಡುತ್ತಿರಲಿಲ್ಲ. ಓದಿನಲ್ಲಿ ಹೆಚ್ಚು ಆಸಕ್ತಿ ತೋರಿದ್ದ ಅಭಿಶೇಕ್, ಜಿಮ್ ಬಾಗಿಲು ತಟ್ಟಿದ್ದೂ ಕೂಡ ಕಡಿಮೆಯೇ.

ಅಷ್ಟಕ್ಕೂ, ಅಭಿಶೇಕ್ ಇದ್ದದ್ದು ಲಂಡನ್ ನಲ್ಲಿ. ಕಳೆದ ವರ್ಷವಷ್ಟೇ ಪ್ರತಿಷ್ಠಿತ ವೆಸ್ಟ್ ಮಿನ್ಸಟರ್ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ 'ಇಂಟರ್ ನ್ಯಾಷನಲ್ ರಿಲೇಷನ್ಸ್ ಮತ್ತು ಡೆಮೋಕ್ರಾಟಿಕ್ ಪಾಲಿಟಿಕ್ಸ್' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.[ಅಂಬರೀಶ್ ಪುತ್ರ ಅಭಿಷೇಕ್ ಗೌಡ ಸ್ಟೈಲೇ ಬೇರೆ!]

ಓದು ಮುಗಿಸಿದ ಬಳಿಕ ತಾಯ್ನಾಡಿಗೆ ಮರಳಿದ ಅಭಿಶೇಕ್ ಗೌಡ ಈಗ ಹೇಗೆ ಕಾಣ್ತಿದ್ದಾರೆ ಅಂತ ಒಮ್ಮೆ ನೀವೇ ಕಣ್ಣಾಡಿಸಿ....

ambareesh-s-son-abhishek-gowda-preparing-to-make-sandalwood-debut-021691

ವಾವ್...ಎಂತಹ ವ್ಯತ್ಯಾಸ ನೋಡಿ..! ವರ್ಷದ ಹಿಂದೆ ಕೊಂಚ ದಪ್ಪಗಿದ್ದ ಅಭಿಶೇಕ್ ಗೌಡ ಈಗ ಸಖತ್ ಸ್ಲಿಮ್ ಆಗಿದ್ದಾರೆ. ಪ್ರತಿನಿತ್ಯ ಡಯೆಟ್ ಹಾಗೂ ವರ್ಕೌಟ್ ಮಾಡಿ ತಮ್ಮ ತೂಕ ಇಳಿಸಿಕೊಂಡಿದ್ದಾರೆ ಅಂಬಿ ಸುಪುತ್ರ. ಇದಕ್ಕೆ 'ಸಿನಿಮಾ' ಕಾರಣ ಇರಬಹುದಾ? ಎಂಬ ಡೌಟ್ ಸದ್ಯ ಅಂಬಿ ಅಭಿಮಾನಿಗಳನ್ನ ಕಾಡುತ್ತಿದೆ. [ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?]

ಹೇಗಿದ್ದರೂ, ಅಭಿಶೇಕ್ ಓದು ಮುಗಿಸಿದ್ದಾಗಿದೆ. ಅಪ್ಪನ ಹಾದಿಯಂತೆ ಮಗನೂ 'ಹೀರೋ' ಆಗಲಿ ಎಂಬುದು ಸಿನಿ ಪ್ರಿಯರ ಆಶಯ. ಅದಕ್ಕೆ ತಕ್ಕ ಹಾಗೆ, ಅಭಿಶೇಕ್ ತಯಾರಿ ನೋಡಿದರೆ, ರೆಬೆಲ್ ಪುತ್ರ ತೆರೆಮೇಲೆ ಮಿಂಚುವುದಕ್ಕೆ ಕಾಲ ಕೂಡಿ ಬಂದ ಹಾಗಿದೆ. (ಈ ಬಗ್ಗೆ ಇನ್ನೂ ಕನ್ಫರ್ಮ್ ಆಗಿಲ್ಲ)

-
-
-
-
-
-
ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

-
-
-
-

ಅಪ್ಪನಂತೆ ಅಭಿಶೇಕ್ ಗೆ ರಾಜಕೀಯದಲ್ಲೂ ಆಸಕ್ತಿ ಇದೆ. ಇದೇ ಕಾರಣಕ್ಕೆ 'ಇಂಟರ್ ನ್ಯಾಷನಲ್ ರಿಲೇಷನ್ಸ್ ಮತ್ತು ಡೆಮೋಕ್ರಾಟಿಕ್ ಪಾಲಿಟಿಕ್ಸ್' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಾಗಿ ರಾಜಕೀಯ ಹಾಗೂ ಸಿನಿಮಾ...ಎರಡರಲ್ಲಿ ಅಭಿಶೇಕ್ ಮೊದಲ ಆಯ್ಕೆ ಯಾವುದು ಎಂಬುದು ಸದ್ಯಕ್ಕಿನ್ನೂ ಪ್ರಶ್ನೆ.![ಮಗನನ್ನು ಕಂಡ ಅಂಬರೀಶ್ ಕಣ್ಣಲ್ಲಿ ಹೊಸ ಮಿಂಚು]

'ಮಗನ ಇಚ್ಛೆಯೇ ನನ್ನ ಇಚ್ಛೆ' ಅಂತ ಹಿಂದೊಮ್ಮೆ ಅಂಬರೀಶ್ ಹೇಳಿದ್ದರು. ಇನ್ನೂ ಸುಮಲತಾ ಕೂಡ ಮಗ ಆಸೆಗೆ ಎಂದೂ ಅಡ್ಡಗಾಲು ಹಾಕಿಲ್ಲ.

ಈಗ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣುವ ಅಭಿಶೇಕ್ ತೆರೆಮೇಲೆ 'ಯಂಗ್ ರೆಬೆಲ್ ಸ್ಟಾರ್' ಆಗಿ ಅಬ್ಬರಿಸಿ, ಆರಡಿ ಕಟೌಟ್ ಹಾಕಿಸಿಕೊಳ್ಳುತ್ತಾರೋ, ಇಲ್ಲ 'ಸಕ್ಕರೆ ನಾಡಿನ ಸಿಡಿ ಗುಂಡು' ಆಗುತ್ತಾರೋ ಕಾದು ನೋಡ್ಬೇಕಷ್ಟೆ.

English summary
Is Congress Politician, Karnataka Housing Minister, Rebel Star Ambareesh's son Abhishek Gowda preparing to make debut in Sandalwood? is a question as of now.
Please Wait while comments are loading...