»   » ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?

ಮಂಡ್ಯ ಗದ್ದುಗೆಗೆ ಉತ್ತರಾಧಿಕಾರಿಯಾಗುತ್ತಾರಾ ಅಂಬಿ ಪುತ್ರ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಿನಿಮಾ ನಟರ ಪುತ್ರರತ್ನರು ಸಿನಿಮಾ ಇಂಡಸ್ಟ್ರಿಗೆ ಬರುವ ವಾಡಿಕೆ ಇದೆ. ಅಪ್ಪ-ಅಮ್ಮನ ಹಾದಿಯಲ್ಲೇ ಬಣ್ಣ ಹಚ್ಚುವ ಇರಾದೆ ಚಿಕ್ಕವಯಸ್ಸಲ್ಲೇ ಮಕ್ಕಳಿಗೆ ಬಂದು ಬಿಟ್ಟಿರುತ್ತೆ. ಇದೇ ಕಾರಣಕ್ಕೆ ಅನೇಕ ಸ್ಟಾರ್ ನಟರ ಮಕ್ಕಳು, ಅರ್ಧದಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಬಿಟ್ಟು ಕಟೌಟ್ ಹಾಕಿಸಿಕೊಂಡಿರುವ ಉದಾಹರಣೆ ಬೇಕಾದಷ್ಟಿದೆ.

  ಆದ್ರೆ, ಅಂಥವರಿಗೆ ಹೋಲಿಸಿದರೆ 'ಸಕ್ಕರ ನಾಡಿನ ಯುವರಾಜ' ಅಭಿಶೇಕ್ ಗೌಡ ಕೊಂಚ ವಿಭಿನ್ನ. ಅಪ್ಪ-ಅಮ್ಮ ಇಬ್ಬರೂ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಕಲಾವಿದರಾದರೂ, ಬಣ್ಣದ ಬದುಕಿನಿಂದ ಕೊಂಚ ದೂರವೇ ಉಳಿದಿದ್ದ ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಪುತ್ರ ಅಭಿಷೇಕ್ ಗೌಡ ಇದೀಗ ಸ್ನಾತಕೋತ್ತರ ಪದವೀಧರ. [ಅಂಬರೀಶ್ ಪುತ್ರ ಅಭಿಷೇಕ್ ಗೌಡ ಸ್ಟೈಲೇ ಬೇರೆ!]

  ಲಂಡನ್ ನಲ್ಲಿರುವ ಪ್ರತಿಷ್ಠಿತ ವೆಸ್ಟ್ ಮಿನ್ಸಟರ್ ವಿಶ್ವವಿದ್ಯಾನಿಲಯದಿಂದ (UNIVERSITY OF WESTMINSTER) ಕಲಾ ವಿಭಾಗದಲ್ಲಿ (MASTER OF ARTS) INTERNATIONAL RELATIONS AND DEMOCRATIC POLITICS ವಿಷಯದಲ್ಲಿ ಅಭಿಶೇಕ್ ಗೌಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

  ಆ ಮೂಲಕ ತಂದೆ ಡಾ.ಅಂಬರೀಶ್ ಹಾಗೂ ತಾಯಿ ಸುಮಲತಾ ಅಂಬರೀಶ್ ರವರ ಹೆಮ್ಮೆಯ ಸುಪುತ್ರನಾಗಿದ್ದಾರೆ ಅಭಿಶೇಕ್ ಗೌಡ. ಮಗನ ಈ ಸಾಧನೆಯನ್ನು ಸುಮಲತಾ ತಮ್ಮ ಟ್ವಿಟ್ಟರ್ ನಲ್ಲಿ 'ಪ್ರೌಡ್ ಫಾರ್ ಎವರ್' ಅಂತ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ರೆಬೆಲ್ ಸ್ಟಾರ್ ಕೂಡ ಬೆನ್ನು ತಟ್ಟಿಕೊಂಡು ಖುಷಿಯಲ್ಲಿ ತೇಲಾಡ್ತಿದ್ದಾರೆ.

  'ಕರುನಾಡ ಕರ್ಣ'ನ ಘನತೆ ಹೆಚ್ಚಿಸಿರುವ ಅಂಬಿಮಾಮನ ಕುಡಿ, ಸದ್ಯದಲ್ಲೇ ಪದವಿಯೊಂದಿಗೆ ತಾಯ್ನಾಡಿಗೆ ಮರಳಲಿದ್ದಾರೆ. ಇದು ಅಂಬಿ ಕುಟುಂಬ ಮತ್ತವರ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಆಗಿದ್ರೆ, ಕುತೂಹಲ ಕಾಡುತ್ತಿರುವುದೇ ಬೇರೆ ವಿಷಯಕ್ಕೆ. ಅಂಬಿ ಪುತ್ರ ಓದು ಮುಗಿಸಿದ್ದಾಯ್ತು. ಆದ್ರೆ ಮುಂದೇನು ಮಾಡ್ತಾರೆ?

  ಅಪ್ಪನ ಹಾದಿಯಲ್ಲೇ ಬಣ್ಣದ ಬದುಕಿಗೆ ಬರ್ತಾರಾ? ಈ ಪ್ರಶ್ನೆಗೆ ಖುದ್ದು ಅಂಬಿ ಹಿಂದೊಮ್ಮೆ ಉತ್ತರ ನೀಡಿದ್ದರು. ''ಮಗನ ಇಚ್ಛೇಯೇ ನನ್ನ ಇಚ್ಛೇ. ಸಿನಿಮಾದಲ್ಲಿ ಅವನಿಗೆ ಅಷ್ಟು ಇಂಟ್ರೆಸ್ಟ್ ಇಲ್ಲ. ಓದು ಮುಗಿದ ಮೇಲೆ ಏನು ಮಾಡಬೇಕು ಅಂತ ಅವನೇ ನಿರ್ಧರಿಸಬೇಕು'', ಅಂತ ಅಂಬರೀಶ್ ಹೇಳಿದರು.

  Rebel Star Ambareesh1

  ಹಾಗೆ ಸುಮಲತಾ ಕೂಡ, ''ಓದು ಮುಗಿಯುವವರೆಗೂ ಮಗನಿಗೆ ನೋ ಸಿನಿಮಾ'', ಅಂತ ಖಡಾಖಂಡಿತವಾಗಿ ಹೇಳಿದ್ದರು. ಈಗ ವಿದ್ಯಾಭ್ಯಾಸ ಕಂಪ್ಲೀಟ್ ಆಗಿದೆ. ಈಗಲಾದರೂ ಅಭಿಶೇಕ್ ಗಾಂಧಿನಗರವನ್ನು ಶೇಕ್ ಮಾಡ್ತಾರಾ ಅನ್ನುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. [ಮಗನನ್ನು ಕಂಡ ಅಂಬರೀಶ್ ಕಣ್ಣಲ್ಲಿ ಹೊಸ ಮಿಂಚು]

  ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಅಂದ್ರೆ, ಅಂಬಿ ಸಿನಿಮಾದಲ್ಲಿ ಎಷ್ಟು ಜನಪ್ರಿಯವೋ, ರಾಜಕೀಯದಲ್ಲೂ ಜನರ ಮೆಚ್ಚಿನ ನಾಯಕ. ಅಪ್ಪನಿಗೆ ತಕ್ಕ ಮಗನಂತೆ, ಅಂಬಿ ಪುತ್ರ ಅಭಿ ಸ್ನಾತಕೋತ್ತರ ಪದವಿ ಪಡೆದಿರುವುದು 'ಇಂಟರ್ ನ್ಯಾಷಿನಲ್ ರಿಲೇಷನ್ಸ್ ಮತ್ತು ಡೆಮೋಕ್ರಾಟಿಕ್ ಪಾಲಿಟಿಕ್ಸ್' ಅನ್ನುವ ರಾಜಕೀಯ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧ ಪಟ್ಟ ವಿಷಯದ ಬಗ್ಗೆ.

  ಇದನ್ನ ನೋಡಿದ್ರೆ, ಸಿನಿಮಾಗಿಂತ ಹೆಚ್ಚಾಗಿ ಅಂಬಿ ಕುಡಿಗೆ ರಾಜಕೀಯದಲ್ಲಿ ಹೆಚ್ಚು ಗಮನ ಇದ್ಹಾಗಿದೆ. ಇದಕ್ಕೆ ಪುಷ್ಠಿ ಅನ್ನುವಂತೆ ಮಗ ರಾಜಕೀಯಕ್ಕೆ ಸೇರುವ ಬಗ್ಗೆ ಅಂಬಿ ಎಲ್ಲೂ ಅಡ್ಡಗಾಲು ಹಾಕಿಲ್ಲ. ಜನಸೇವೆ ಮಾಡುವ ಮನಸ್ಸು ಅಂಬಿ ಫ್ಯಾಮಿಲಿಗೆ ತುಸು ಹೆಚ್ಚಿದೆ. ಇದ್ರಿಂದ ಪ್ರೇರಿತವಾಗಿ ಅಂಬಿಯ ರಾಜಕೀಯ ಪರಂಪರೆಯನ್ನು ಮಗ ಅಭಿ ಮುಂದುವರಿಸಿದರೆ ಅಚ್ಚರಿಯಿಲ್ಲ. [ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು]

  ಒಂದ್ವೇಳೆ ಇದು ನಿಜವಾಗಿ, ಅಂಬಿ ಪುತ್ರ ಅಭಿಶೇಕ್ ರಾಜಕೀಯಕ್ಕೆ ಬಂದ್ರೆ, ಮಂಡ್ಯ ಗದ್ದುಗೆಯಲ್ಲಿ ರಾಜನಾಗಿ ಮೆರೆಯುವುದು ಖಚಿತ. ಎಷ್ಟೇ ಆಗ್ಲಿ ಅಪ್ಪನಂತೆ ಮಗ ಅನ್ನುವ ಮಾತಿದ್ಯಲ್ಲಾ..! (ಫಿಲ್ಮಿಬೀಟ್ ಕನ್ನಡ)

  English summary
  Rebel Star Ambareesh's son Abhishek Gowda had received Master Degree from The University of Westminster. Abhishek Gowda is now Master of Arts in International Relations and Democratic Politics. Will Abhishek Gowda enter politics is the big question now!

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more