For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಕ್ಷೇತ್ರದಿಂದ ಅಭಿ ಸ್ಪರ್ಧೆ: ಅಂಬಿ ಪುತ್ರ ಹೇಳಿದ್ದೇನು?

  |

  ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿ ಸ್ಪರ್ಧೆ ಮಾಡ್ಬೇಕು ಎಂದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡ್ತಿದ್ದಾರೆ.

  ಇನ್ನೊಂದು ಕಡೆ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿಬರ್ತಿದೆ. ಆದ್ರೆ, ಈ ಬಗ್ಗೆ ಯಾವ ಪಕ್ಷದ ನಾಯಕರು ಅಧಿಕೃತವಾಗಿ ಹೇಳಿಲ್ಲ.

  ಇದೀಗ, ಅಂಬರೀಶ್ ಅವರ ಪುತ್ರ ಅಭಿ ಈ ಬಗ್ಗೆ ಮಾತನಾಡಿದ್ದು, ರಾಜಕೀಯಕ್ಕೆ ಬರ್ತಾರೆ ಎಂಬ ಊಹಾಪೋಹಕ್ಕೆ ಬ್ರೇಕ್ ಹಾಕಿದ್ದಾರೆ.

  ಅಂಬರೀಶ್ ಸ್ಥಾನ ತುಂಬ ಬಲ್ಲ ನಟನ ಬಗ್ಗೆ ಅಭಿ ಹೇಳೋದೇ ಬೇರೆ ಅಂಬರೀಶ್ ಸ್ಥಾನ ತುಂಬ ಬಲ್ಲ ನಟನ ಬಗ್ಗೆ ಅಭಿ ಹೇಳೋದೇ ಬೇರೆ

  ''ಸದ್ಯಕ್ಕೆ ಸಿನಿಮಾ ಮಾತ್ರ ನನ್ನ ಗುರಿ ಮತ್ತು ಕೆಲಸ, ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ. ಮುಂದೆ ನೋಡೋಣ, ಇನ್ನು ಅಭಿಮಾನಿಗಳು ಸ್ಪರ್ಧೆ ಮಾಡಿ ಎಂದು ಹೇಳಿದಾಗ ನೋಡೋಣ'' ಎಂದರು. ಅಭಿ ಅಥವಾ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡ್ತಾರಂತೆ ಎಂದು ಕೇಳಿದ್ದಕ್ಕೆ ''ಅದನ್ನ ಸುಮಲತಾ ಅವರ ಬಳಿಯೇ ಕೇಳಬೇಕು. ಇದರ ಬಗ್ಗೆ ನಾವು ಚರ್ಚೆ ಕೂಡ ಮಾಡಿಲ್ಲ'' ಎಂದಿದ್ದಾರೆ.

  ಸ್ನೇಹಿತರ ಸವಾಲ್: ನಿಖಿಲ್ ಮತ್ತು ಅಭಿ ಇಬ್ಬರಲ್ಲಿ ಮಂಡ್ಯ ಉತ್ತರಾಧಿಕಾರಿ ಯಾರು? ಸ್ನೇಹಿತರ ಸವಾಲ್: ನಿಖಿಲ್ ಮತ್ತು ಅಭಿ ಇಬ್ಬರಲ್ಲಿ ಮಂಡ್ಯ ಉತ್ತರಾಧಿಕಾರಿ ಯಾರು?

  ಅಭಿ ಸದ್ಯ ನಾಗಶೇಖರ್ ನಿರ್ದೇಶನದ 'ಅಮರ್' ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಇದೇ ವರ್ಷ ತೆರೆಗೆ ಬರಲಿದೆ. ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Ambareesh son abhishek will contestant in mandya lok sabha constituency? what he told?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X