»   » ಅಂಬರೀಶ್ ಮಗನ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಬಂದ ಸುದ್ದಿ.!

ಅಂಬರೀಶ್ ಮಗನ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಬಂದ ಸುದ್ದಿ.!

Posted By:
Subscribe to Filmibeat Kannada

'ಮಂಡ್ಯದ ಗಂಡು', 'ರೆಬೆಲ್ ಸ್ಟಾರ್' ಅಂಬರೀಶ್ ಅವರ ಮಗ ಅಭಿಷೇಕ್ ಸಿನಿಮಾ ಜಗತ್ತಿಗೆ ಬರ್ತಾರೆ ಎನ್ನುವ ಮಾತು ಹಲವು ದಿನಗಳಿಂದ ಹರಿದಾಡುತ್ತಲೆ ಇದೆ. ಮತ್ತೊಂದೆಡೆ ಅಭಿಷೇಕ್ ರಾಜಕಾರಣಕ್ಕೆ ಬರ್ತಾರೆ ಎಂಬ ಅಂತೆ-ಕಂತೆಗಳು ಕೇಳಿ ಬರುತ್ತಿದೆ.

ಈ ನಡುವೆ ಅಭಿಷೇಕ್ ಸದ್ದಿಲ್ಲದೇ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದಾರೆ. ಹೀಗಿರುವಾಗ, ಸುಮಲತಾ ಅಂಬರೀಷ್ ಅವರು, ತಮ್ಮ ಮಗ ಸಿನಿಮಾ ಲೋಕಕ್ಕೆ ಬರುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ.

ಹಾಗಿದ್ರೆ, ಸುಮಲತಾ ಅಂಬರೀಷ್ ಅವರು ಕೊಟ್ಟ ಸುಳಿವು ಏನು? ಅಂಬಿ ಪುತ್ರನ ಸಿನಿ ಜರ್ನಿ ಯಾವಾಗ ಶುರುವಾಗುತ್ತೆ? ಮುಂದೆ ಓದಿ....

ಮಗನ ಸಿನಿಪಯಣದ ಬಗ್ಗೆ ಸುಳಿವು ಕೊಟ್ಟ ಸುಮಲತಾ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತೆಲುಗು ನಟ ಆಲಿ ''ನಿಮ್ಮ ಮಗ ಸಿನಿಮಾ ಮಾಡ್ತಾರ'' ಎಂದು ಸುಮಲತಾ ಅವರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಸುಮಲತಾ ಅವರು ''ಅಂಬರೀಷ್ ಮತ್ತು ನಾನು ಅಭಿಷೇಕ್ ಗೆ ಹೇಳಿದ್ದೀವಿ. ನೀನು ಸಿನಿಮಾ ಮಾಡುವುದಾದರೇ ನಿನ್ನ ಸ್ವಂತ ಪ್ರತಿಭೆಯಿಂದ ಮಾಡಬೇಕು ಅಂತ'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿನಿಮಾ ಮಾಡುವ ಆಸಕ್ತಿ ಇದೆ ಎಂದು ಸೂಚನೆ ನೀಡಿದ್ದಾರೆ.

ನಟನೆ ತರಬೇತಿ ಪಡೆಯುವ ಆಸಕ್ತಿ

ಇನ್ನು ''ಈ ಬಗ್ಗೆ ಅಭಿಷೇಕ್ ಕೂಡ ಆಸಕ್ತಿ ತೋರಿದ್ದು, ನಟನೆ ಕಲಿಯಲು ತರಬೇತಿ ಪಡೆಯುವುದಾಗಿ ಅಭಿಷೇಕ್ ಕೇಳಿದ್ದಾನೆ'' ಎಂದು ಸುಮಲತಾ ತಿಳಿಸಿದ್ದಾರೆ.

ಅಲ್ಲಿಗೆ ಅಭಿಷೇಕ್ ಬರುವುದು ಪಕ್ಕಾ.!

ಅಭಿಷೇಕ್ ಸಿನಿಮಾ ರಂಗಕ್ಕೆ ಬರಬೇಕು ಎನ್ನುವುದು ಸ್ವತಃ ಸುಮಲತಾ ಅವರಿಗೂ ಹಾಗೂ ಅಂಬರೀಷ್ ಅವರಿಗೆ ಆಸೆಯಿದೆ. ಆದ್ರೆ, ಸ್ವಂತ ಪ್ರತಿಬೆಯಿಂದ ಬರಲಿ ಎನ್ನುವುದು ಮಾತ್ರ ಅವರ ಆಶಯ. ಆದ್ರೆ, ಯಾವಾಗ ಎನ್ನುವುದು ಮತ್ತಷ್ಟು ದಿನ ಕಾಯಲೇಬೇಕು.

ಅಂಬರೀಷ್ ಈ ಹಿಂದೆ ಹೇಳಿದ್ದರು

''ಯಾವುದು, ಯಾವಾಗ ಆಗಬೇಕೋ ಅದಾಗುತ್ತದೆ. ಅವನಿಗೆ ಏನು ಇಷ್ಟವೊ ಅದನ್ನು ಮಾಡಲಿ. ನನ್ನದೇನೂ ಅಭ್ಯಂತರ ಇಲ್ಲ. ಅಭಿಷೇಕ್ ನನ್ನ ಹೆಸರನ್ನು ಬಳಸಿಕೊಂಡು ಉದ್ಯಮದಲ್ಲಿ ಬೆಳೆಯಬಾರದು. ಸ್ವಂತ ಪ್ರತಿಭೆಯಿಂದ ಜನರ ಮೆಚ್ಚುಗೆ ಗಳಿಸಬೇಕು. ಅದಷ್ಟೇ ನನ್ನ ಕನಸು'' ಎಂದು ಅಂಬರೀಷ್ ಈ ಹಿಂದೆ ಹೇಳಿದ್ದರು.

English summary
in a recent interview, Sumalatha hinted that her son, Abhishek Gowda, may soon join movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada