»   » 'ಆಕೆ' ಚಿತ್ರಕ್ಕೆ ಗುಡ್ ಲಕ್ ಎಂದು ವಿಶ್ ಮಾಡಿದ ಅಂಬರೀಶ್

'ಆಕೆ' ಚಿತ್ರಕ್ಕೆ ಗುಡ್ ಲಕ್ ಎಂದು ವಿಶ್ ಮಾಡಿದ ಅಂಬರೀಶ್

Posted By:
Subscribe to Filmibeat Kannada

ಹಾಲಿವುಡ್ ರೇಂಜಲ್ಲಿ ರೆಡಿ ಆಗಿರುವ ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಆಕೆ' ಚಿತ್ರಕ್ಕೆ ಕನ್ನಡ ಚಿತ್ರರಂಗದ ಘಟಾನುಘಟಿಗಳು ಶುಭ ಹಾರೈಸಿದ್ದಾರೆ.

ಈಗಾಗಲೇ 'ಆಕೆ' ಚಿತ್ರದ ಟೀಸರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಮ್ಯಾ, ಸುದೀಪ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಒಳ್ಳೆಯ ಮಾತುಗಳನ್ನಾಡಿದ್ದಾರೆ.

Ambareesh speaks about Kannada Movie 'Aake' trailer

ಈಗ 'ಆಕೆ' ಚಿತ್ರ ಸೂಪರ್ ಸಕ್ಸಸ್ ಆಗಲಿ ಎಂದು ಶುಭ ಹಾರೈಸಿರುವವರು ರೆಬೆಲ್ ಸ್ಟಾರ್ ಅಂಬರೀಶ್.

ಕೆ.ಎಂ.ಚೈತನ್ಯ ನಿರ್ದೇಶನ ಮಾಡಿರುವ 'ಆಕೆ' ಚಿತ್ರದ ಟೀಸರ್ ನೋಡಿದ್ಮೇಲೆ, ''ಆಕೆ' ಚಿತ್ರದ ಪ್ರೋಮೋ ನೋಡಿದೆ ನಾನು. ಚಿತ್ರೀಕರಣವನ್ನೆಲ್ಲ ಲಂಡನ್ ನಲ್ಲಿ ಮಾಡಿದ್ದಾರೆ. ತುಂಬಾ ರಿಚ್ ಆಗಿ ಸಿನಿಮಾ ಮೂಡಿ ಬಂದಿದೆ. 'ಆಕೆ' ಸಿನಿಮಾ ಯಶಸ್ಸು ಗಳಿಸಲಿ ಅಂತ ನಾನು ಹೃದಯ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ'' ಎಂದಿದ್ದಾರೆ ಅಂಬರೀಶ್.

ಅಂದ್ಹಾಗೆ, 'ಆಕೆ' ಸಿನಿಮಾ ನಾಳೆ (ಜೂನ್ 30) ತೆರೆಗೆ ಬರಲಿದೆ. ಟೀಸರ್ ಮಾತ್ರದಿಂದಲೇ ಕುತೂಹಲ ಮೂಡಿಸಿರುವ 'ಆಕೆ' ಸಿನಿಮಾ ನೋಡಲು ನೀವು ರೆಡಿನಾ.?

English summary
Kannada Actor, Congress Politician, Ambareesh speaks about Kannada Movie 'Aake' trailer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada