ಟಿಕೆಟ್ ತಗೊಂಡು 'ನಾಗರಹಾವು' ಸಿನಿಮಾ ನೋಡ್ತಿನಿ ಎಂದ ಅಂಬಿ

By Naveen

Recommended Video

NAGARAHAAVU : ರಾಮಾಚಾರಿ ಬಗ್ಗೆ ಜಲೀಲನ ಮಾತು...!! | Filmibeat Kannada

ನಿನ್ನೆ 'ನಾಗರಹಾವು' ಸಿನಿಮಾದ ವಿಶೇಷ ಸುದ್ದಿಗೋಷ್ಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು ಹೊಸ ತಂತ್ರಜ್ಙಾನದೊಂದಿಗೆ ಬಂದಿದ್ದ 'ನಾಗರಹಾವು' ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ನೋಡಿ ಮೆಚ್ಚಿಕೊಂಡರು.

'ನಾಗರಹಾವು' ನಟ ಅಂಬರೀಶ್ ವೃತ್ತಿ ಜೀವನದಲ್ಲಿಯೇ ಮಹತ್ವದ ಸಿನಿಮಾ. ಈ ಸಿನಿಮಾದ ಬಗ್ಗೆ ಮಾತನಾಡಿದ ಅವರು ''ಹೊಸ ರೂಪದ ನಾಗರಹಾವು ತುಂಬ ಚೆನ್ನಾಗಿದೆ. ನಾನು ಈ ಸಿನಿಮಾವನ್ನು ಟಿಕೆಟ್ ತಗೊಂಡು ನೋಡುತ್ತೇನೆ'' ಎಂದು ಹೆಮ್ಮೆಯಿಂದ ಹೇಳಿದರು.

''ನಾನು ಒಬ್ಬ ಖಳ ನಟನಾಗಿ ಬಂದು, ಪೋಷಕ ನಟನಾಗಿ, ನಾಯಕ ನಟನಾಗಿ, ಜನನಾಯಕನಾಗಿ, ಅಬ್ದುಲ್ ಕಲಾಂ ಅವರ ಮುಂದೆ ಪ್ರಮಾಣ ವಚನ ಸ್ವೀಕರಿದ್ದೇನೆ ಎಂದರೆ ಅದಕ್ಕೆಲ್ಲ ಮೊದಲ ಮೆಟ್ಟಿಲು 'ನಾಗರಹಾವು' ಸಿನಿಮಾ.'' ಎಂದ ಅಂಬರೀಶ್ ಆ ಚಿತ್ರದ ಅನೇಕ ವಿಚಾರಗಳನ್ನು ಹಂಚಿಕೊಂಡರು.

ambareesh spoke about Nagarahaavu kannada movie

'ನಾಗರಹಾವು' ಸಿನಿಮಾದ ಜಲೀಲ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದ ಅಂಬರೀಶ್ ಮುಂದೆ ರೆಬಲ್ ಸ್ಟಾರ್ ಆಗಿ ಮಿಂಚಿದರು. ಅಂದಹಾಗೆ, ಇಂತಹ 'ನಾಗರಹಾವು' ಸಿನಿಮಾ ಮತ್ತೆ ಈಗ ತೆರೆಗೆ ಬರುತ್ತಿದೆ. ಇದೇ ತಿಂಗಳ 20 ರಂದು ಸಿನಿಮಾ ಮರು ಬಿಡುಗಡೆಯಾಗುತ್ತಿದೆ.

More from Filmibeat

English summary
Kannada actor Ambareesh spoke about 'Nagarahaavu' kannada movie The movie will re releasing on july 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X