ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಕಹಿ ಸುದ್ದಿ.!

By Harshitha

Recommended Video

Ambi Ning Vayasaaytho : ಅಂಬಿ ಸಿನಿಮಾದಿಂದ ಬಂದ ಕಹಿ ಸುದ್ದಿ..! | Filmibeat Kannada

ಎಷ್ಟೋ ವರ್ಷಗಳು ಕಳೆದ್ಮೇಲೆ, ಲೀಡ್ ರೋಲ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕಾಣಿಸಿಕೊಂಡಿದ್ದು 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಮೂಲಕ.

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ರಫ್ ಅಂಡ್ ಟಫ್ ಆಗಿ ಕಾಣುವ ವಯಸ್ಸಾದ ಅಂಬಿ ಜೊತೆ ಕಿಚ್ಚ ಸುದೀಪ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಲಾಂಗ್ ಗ್ಯಾಪ್ ಬಳಿಕ ಅಂಬರೀಶ್-ಸುದೀಪ್ ಒಂದಾಗಿರೋದು ಈ ಚಿತ್ರದಲ್ಲಿಯೇ.!

ತಮಿಳಿನ 'ಪವರ್ ಪಾಂಡಿ' ಸಿನಿಮಾದ ರೀಮೇಕ್ ಈ 'ಅಂಬಿ ನಿಂಗ್ ವಯಸ್ಸಾಯ್ತೋ'. ತಮಿಳಿನಲ್ಲಿ ರಾಜ್ ಕಿರಣ್ ಮಾಡಿದ್ದ ಪಾತ್ರಕ್ಕೆ ಕನ್ನಡದಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿರುವ ಗುರುದತ್ ಗೆ ಈ ಸಿನಿಮಾದಲ್ಲಿ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿದೆ.

ಅನೇಕ ವಿಶೇಷತೆಗಳನ್ನು ಹೊಂದಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಇದೇ ತಿಂಗಳು ನಿಮ್ಮೆಲ್ಲರ ಮುಂದೆ ಬರಬೇಕಿತ್ತು. ಆದ್ರೆ, ಅದಾಗುತ್ತಿಲ್ಲ. 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.! ಮುಂದೆ ಓದಿರಿ...

ಕಹಿ ಸುದ್ದಿ

ಕಹಿ ಸುದ್ದಿ

ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಕಹಿ ಸುದ್ದಿ ಅಂದ್ರೆ ಇದೇ.! ತೆರೆಮೇಲೆ ಅಂಬರೀಶ್ ಅಬ್ಬರವನ್ನ ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದ್ರೀಗ, 'ಅಂಬಿ ನಿಂಗ್ ವಯಸ್ಸಾಯ್ತೋ' ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ.

ರಿಲೀಸ್ ಮುಂದಕ್ಕೆ ಹೋಗಿದ್ದು ಯಾಕೆ.?

ರಿಲೀಸ್ ಮುಂದಕ್ಕೆ ಹೋಗಿದ್ದು ಯಾಕೆ.?

ಪ್ರವಾಹದಿಂದಾಗಿ ಕೊಡಗು ಜಿಲ್ಲೆ ಸಂಕಷ್ಟದಲ್ಲಿದೆ. ಶಿವಮೊಗ್ಗ, ಮಂಗಳೂರು ಹಾಗೂ ಇತರೆ ಕಡೆಗಳಲ್ಲೂ ಮಳೆ ಅಬ್ಬರ ಮತ್ತು ಪ್ರವಾಹ ಸ್ಥಿತಿ ನಿರ್ಮಾಣ ಆಗಿರುವ ಕಾರಣ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಸದ್ಯಕ್ಕೆ ಬಿಡುಗಡೆ ಮಾಡದಿರಲು ಚಿತ್ರತಂಡ ತೀರ್ಮಾನ ಮಾಡಿದೆ.

ನಿರ್ಮಾಪಕ ಜಾಕ್ ಮಂಜು ಏನಂತಾರೆ.?

ನಿರ್ಮಾಪಕ ಜಾಕ್ ಮಂಜು ಏನಂತಾರೆ.?

''ಅಂಬರೀಶ್ ಅವರಿಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಹೀಗಾಗಿ ಈ ಸಿನಿಮಾ ಬಿಡುಗಡೆ ಆದಾಗ, ಅದನ್ನ ನೋಡಲು ಎಲ್ಲರಿಗೂ ಸಾಧ್ಯ ಆಗಬೇಕು. ಸದ್ಯ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ ಚಿತ್ರ ಬಿಡುಗಡೆಯ ಪ್ಲಾನ್ ನ ಮುಂದಕ್ಕೆ ಹಾಕಿದ್ದೀವಿ'' ಅಂತಾರೆ ನಿರ್ಮಾಪಕ ಜಾಕ್ ಮಂಜು.

ಆಡಿಯೋ ರಿಲೀಸ್ ಕೂಡ ಸದ್ಯಕ್ಕಿಲ್ಲ.!

ಆಡಿಯೋ ರಿಲೀಸ್ ಕೂಡ ಸದ್ಯಕ್ಕಿಲ್ಲ.!

ಇನ್ನೂ ಸಿನಿಮಾದ ಆಡಿಯೋ ರಿಲೀಸ್ ಕೂಡ ಸದ್ಯಕ್ಕೆ ಆಗುವುದು ಅನುಮಾನ. ನೆರೆ ಪರಿಸ್ಥಿತಿ ಸುಧಾರಿಸಿದರೆ, ದಸರಾ ಹಬ್ಬದ ಹೊತ್ತಿಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಬಿಡುಗಡೆ ಆಗುವ ಸಾಧ್ಯತೆ ಇದೆ.

More from Filmibeat

English summary
Kannada Actor Ambareesh starrer Ambi Ning Vayasaytho release date postponed due to rains.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X