»   » ಯುಗಾದಿ ಹಬ್ಬದ ಪ್ರಯುಕ್ತ 'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ಬಿಡುಗಡೆ

ಯುಗಾದಿ ಹಬ್ಬದ ಪ್ರಯುಕ್ತ 'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ಬಿಡುಗಡೆ

Posted By:
Subscribe to Filmibeat Kannada
'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ಬಿಡುಗಡೆ | Filmibeat Kannada

ಯುಗಾದಿ ಹಬ್ಬದ ಪ್ರಯುಕ್ತ ಕನ್ನಡ ಕುಲಕೋಟಿಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರತಂಡ ಉಡುಗೊರೆ ನೀಡಿದೆ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಇಂದು ಅಂದ್ರೆ ಯುಗಾದಿ ಹಬ್ಬದ ಶುಭ ಸಂದರ್ಭದಂದು ಬಿಡುಗಡೆ ಆಗಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳ ಎದೆ ಬಡಿತ ಜೋರು ಮಾಡೋದ್ರಲ್ಲಿ ಡೌಟೇ ಅಲ್ಲ. ಅಷ್ಟರಮಟ್ಟಿಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ಖಡಕ್ ಆಗಿದೆ.

''ಹೀರೋ ನಮ್ ಮಂಡ್ಯ ಹುಲಿ ಕಣ್ಲಾ...'' ಎಂಬ ಡೈಲಾಗ್ ನಿಂದ ಶುರು ಆಗುವ 'ಅಂಬಿ ನಿಂಗ್ ವಯಸ್ಸಾಯ್ತೋ' ಟೀಸರ್ ನಲ್ಲಿ ಅಂಬರೀಶ್ ಅವರ ನಿಜ ಬದುಕಿನ ಅಪರೂಪದ ಫೋಟೋಗಳನ್ನು ತೋರಿಸಲಾಗಿದೆ. ಆ ಎಲ್ಲ ಫೋಟೋಗಳನ್ನ ನೋಡ್ತಾ ಅಂಬಿ ಒಂದು ಲುಕ್ ಕೊಡ್ತಾರೆ.

Ambareesh starrer Ambi Ning Vayasaytho teaser out

ಜೊತೆಗೆ 'ರೆಬೆಲ್ ಈಸ್ ಬ್ಯಾಕ್', 'ಯಂಗ್ ಅಂಡ್ ಎನೆರ್ಜಿಟಿಕ್', 'ಓಲ್ಡ್ ಯೆಟ್ ಎನೆರ್ಜಿಟಿಕ್' ಎಂಬ ಸಾಲುಗಳು ಟೀಸರ್ ನಲ್ಲಿ ಕಣ್ಣಿಗೆ ರಪ್ ಅಂತ ಬೀಳುತ್ತದೆ. ಇವೆಲ್ಲವೂ ಅಂಬಿ 'ಭಕ್ತ'ರಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಸಂಶಯ ಇಲ್ಲ. ವಯಸ್ಸಾದರೂ ಅಂಬಿ ಚಾರ್ಮ್ ಮಾತ್ರ ಹಾಗೇ ಇದೆ ಎಂದು ಈ ಟೀಸರ್ ಸಾರಿ ಸಾರಿ ಹೇಳುತ್ತಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

ಟೀಸರ್ ನಲ್ಲಿ ಅಂಬರೀಶ್ ಅವರ ಅಪರೂಪದ ಫೋಟೋಗಳ ಜೊತೆಗೆ ವಯಸ್ಸಾದ ಅಂಬರೀಶ್ ಕಾಣ್ತಾರೆ. ಅಷ್ಟು ಬಿಟ್ಟರೆ, ಕಿಚ್ಚ ಸುದೀಪ್ ಆಗಲಿ ಅಥವಾ ಹೀರೋಯಿನ್ ಗಳ ಝಲಕ್ ಬಿಟ್ಟು ಕೊಟ್ಟಿಲ್ಲ.

ಕಿಚ್ಚ ಕ್ರಿಯೇಷನ್ಸ್ ಅರ್ಪಿಸುವ ಕೆ.ಎಸ್.ಕೆ ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಗುರುದತ್ ಗಣಿಗ ಡೈರೆಕ್ಟರ್. ಇಲ್ಲಿಯವರೆಗೂ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿರುವ ಗುರುದತ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಚಿತ್ರ ಇದು. ಅಂದ್ಹಾಗೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್.

ಇದೀಗಷ್ಟೇ ಬಿಡುಗಡೆ ಆಗಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಟೀಸರ್ ಹೇಗಿದೆ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Kannada Actor, Congress Politician, Mandya MLA Ambareesh starrer Kannada Film Ambi Ning Vayasaytho teaser is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X