ಸುಮಲತಾ ಶೂಟಿಂಗ್ ನೋಡಿಕೊಂಡು ಬಂದ ಅಂಬರೀಶ್
Recommended Video

ನಟ ಅಂಬರೀಶ್ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಬಹಳ ವರ್ಷಗಳ ನಂತರ ಅಂಬರೀಶ್ ಮತ್ತೆ ಹೀರೋ ಆಗಿ ನಟಿಸುತ್ತಿದ್ದು ಸಿನಿಮಾದ ಮೇಲೆ ನಿರೀಕ್ಷೆ ಇದೆ. ಇತ್ತ ಅಂಬಿ ಪತ್ನಿ ನಟಿ ಸುಮಲತಾ ಕೂಡ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಸುಮಲತಾ ನಟಿಸುತ್ತಿದ್ದಾರೆ.
'ತಾಯಿಗೆ ತಕ್ಕ ಮಗ' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾದ ಚಿತ್ರೀಕರಣದ ಸೆಟ್ ಗೆ ಈಗ ನಟ ಅಂಬರೀಶ್ ಬೇಟಿ ನೀಡಿದ್ದಾರೆ. ಚಿತ್ರತಂಡದ ಜೊತೆಗೆ ಕೆಲ ಸಮಯ ಕಳೆದು ಒಂದು ಒಳ್ಳೆ ಫೋಟೋ ತೆಗೆದುಕೊಂಡಿದ್ದಾರೆ ಅಂಬಿ. ಪತ್ನಿಯ ನಟನೆಯನ್ನು ಅಂಬಿ ನೋಡಿಕೊಂಡು ಬಂದಿದ್ದಾರೆ. ಲಾಯರ್ ಪಾತ್ರದಲ್ಲಿ ಸುಮಲತಾ ನಟಿಸಿದ್ದಾರೆ.
'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ವಿಶೇಷ ಅಂದರೆ 'ಎಕ್ಸ್ ಕ್ಯೂಸ್ ಮಿ' ಸಿನಿಮಾದ ನಂತರ ಮತ್ತೆ ಈ ಚಿತ್ರದಲ್ಲಿ ಅಜಯ್ ಹಾಗೂ ಸುಮಲತಾ ತಾಯಿ ಮಗನಾಗಿ ಮಿಂಚಿದ್ದಾರೆ. ಪಾತ್ರಕ್ಕಾಗಿ ಅಜಯ್ ರಾವ್ ತಾಯಿಯಾಗಿ ಕಾಣಿಸಿಕೊಂಡಿರುವ ಸುಮಲತಾ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅಂದಹಾಗೆ, ವೇದಗುರು 'ತಾಯಿಗೆ ತಕ್ಕ ಮಗ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ ಆಗಿದ್ದಾರೆ. ನಿರ್ದೇಶಕ ಶಶಾಂಕ್ ಈ ಚಿತ್ರವನ್ನು ತಮ್ಮ ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ನಂತರ ಮತ್ತೆ ಅಜಯ್ ರಾವ್ ಜೊತೆಗೆ ಶಶಾಂಕ್ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











