ಡಾಕ್ಟರ್ ಮಾತು ಕೇಳದೆ ಸಿನಿಮಾ ನೋಡಲು ಬಂದ ಅಂಬರೀಶ್

Recommended Video

ಅಂಬಿಯನ್ನು ಕಂಡು ಖುಷ್ ಆದ ಅಂಬಿ..! | Filmibeat Kannada

ಕಳೆದ ಒಂದು ವಾರದಿಂದ ಅಂಬರೀಶ್ ಆರೋಗ್ಯ ಸರಿ ಇಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಅಂಬರೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬರೀಶ್ ಅನಾರೋಗ್ಯದ ಕಾರಣ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಆಡಿಯೋ ರಿಲೀಸ್ ಕೂಡ ಮುಂದಕ್ಕೆ ಹೋಯ್ತು.

ವಯೋ ಸಹಜ ಅನಾರೋಗ್ಯ ಅವರನ್ನು ಕಾಡುತ್ತಿರುವ ಕಾರಣ, ಹೆಚ್ಚು ಓಡಾಡದೆ, ವಿಶ್ರಾಂತಿ ತೆಗೆದುಕೊಳ್ಳುವಂತೆ ಅಂಬರೀಶ್ ಗೆ ವೈದ್ಯರು ತಿಳಿಸಿದ್ದರು. ಡಾಕ್ಟರ್ ಮಾತಿನಂತೆ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಬಿಟ್ಟು, ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ನೋಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘಕ್ಕೆ ಬಂದ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ನೋಡಿ ಖುಷಿ ಪಟ್ಟ ಮೇಲೆ ಮನೆಗೆ ತೆರಳಿದ್ದಾರೆ. ಮುಂದೆ ಓದಿರಿ...

'ಯು' ಸರ್ಟಿಫಿಕೇಟ್

'ಯು' ಸರ್ಟಿಫಿಕೇಟ್

ರೆಬೆಲ್ ಸ್ಟಾರ್ ಅಂಬರೀಶ್ ಹೀರೋ ಆಗಿ ಅಭಿನಯಿಸಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ಸೆನ್ಸಾರ್ ಆದ್ಮೇಲೆ, ಚಿತ್ರವನ್ನ ಕಣ್ತುಂಬಿಕೊಳ್ಳಲು ಅಂಬರೀಶ್ ಮನಸ್ಸು ಮಾಡಿದರು. ಹೀಗಾಗಿ, ನೇರವಾಗಿ ಕಲಾವಿದರ ಸಂಘಕ್ಕೆ ಬಂದು ಚಿತ್ರವನ್ನ ವೀಕ್ಷಿಸಿದರು.

ತಿಂಗಳ ಕೊನೆಗೆ ಚಿತ್ರ ಬಿಡುಗಡೆ

ತಿಂಗಳ ಕೊನೆಗೆ ಚಿತ್ರ ಬಿಡುಗಡೆ

ಸೆಪ್ಟೆಂಬರ್ 27ಕ್ಕೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನಿಮ್ಮೆಲ್ಲರ ಮುಂದೆ ಬರಲಿದೆ. ಬಿಡುಗಡೆ ಆಗುವ ಮುನ್ನ ಚಿತ್ರ ಹೇಗೆ ಮೂಡಿಬಂದಿರಬಹುದು ಎಂಬ ಕಾತರ ಅಂಬರೀಶ್ ರವರಲ್ಲಿ ಇತ್ತು. ಹೀಗಾಗಿ, ಅವರು ಚಿತ್ರವನ್ನ ವೀಕ್ಷಿಸಲು ಮುಂದಾದರು.

ನಿರ್ದೇಶಕರ ಬೆನ್ನು ತಟ್ಟಿದ ಅಂಬರೀಶ್

ನಿರ್ದೇಶಕರ ಬೆನ್ನು ತಟ್ಟಿದ ಅಂಬರೀಶ್

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನೋಡಿದ್ಮೇಲೆ, ಅಂಬರೀಶ್ ಖುಷಿ ಪಟ್ಟಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗ ಶ್ರಮಕ್ಕೆ ಭೇಷ್ ಎಂದಿದ್ದಾರೆ. ಉತ್ತಮ ಸಿನಿಮಾ ತಯಾರಾಗಿರುವುದಕ್ಕೆ ಅಂಬರೀಶ್ ಖುಷಿಯಾಗಿ ಮನೆ ಕಡೆಗೆ ತೆರಳಿದರು.

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕುರಿತು

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕುರಿತು

ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಆಗಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬಿ ಜೊತೆಗೆ ಸುಹಾಸಿನಿ, ಸುದೀಪ್, ಶ್ರುತಿ ಹರಿಹರನ್ ನಟಿಸಿದ್ದಾರೆ. ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Kannada Actor Ambareesh watched Ambi Ning Vayasaytho movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X