twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ-ಶ್ರುತಿ ಸಂಧಾನಕ್ಕೆ ಅಂಬರೀಶ್ ಎಂಟ್ರಿ.!

    |

    ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮೀಟೂ ವಿವಾದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಂಟ್ರಿಯಾಗಿದೆ. ಬುಧವಾರ (ಆಗಸ್ಟ್ 24) ಶ್ರುತಿ ಮತ್ತು ಸರ್ಜಾ ನಡುವೆ ಸಂಧಾನ ಸಭೆ ಮಾಡಲು ನಿರ್ಧರಿಸಲಾಗಿದೆ.

    ಈ ಸಭೆಯಲ್ಲಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ನಿರ್ದೇಶಕ ಸಂಘ, ನಿರ್ಮಾಪಕ ಸಂಘದವರು ಸೇರಿ ಈ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೆಗೌಡ ತಿಳಿಸಿದ್ದಾರೆ.

    ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ

    ಅರ್ಜುನ್ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರ ದೂರಿನ ಹಿನ್ನೆಲೆ ಇಂದು ಫಿಲ್ಮ್ ಚೇಂಬರ್ ನಲ್ಲಿ ಸಭೆ ಸೇರಲಾಗಿತ್ತು. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೆಗೌಡ, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ದೇಶಕರ ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್ ಸೇರಿದಂತೆ ಕಾರ್ಯದರ್ಶಿ, ಸದಸ್ಯರು ಭಾಗಿಯಾಗಿ ಚರ್ಚೆ ಮಾಡಿದ್ದಾರೆ.

    ambareesh will discuss with Arjun Sarja and Shruti Hariharan

    ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

    ಈ ವೇಳೆ ಮಾತನಾಡಿದ ಸಾರಾ ಗೋವಿಂದು ''ಇದು ಸಿನಿಮಾ ಚಿತ್ರೀಕರಣದ ವೇಳೆ ಆಗಿರುವ ಘಟನೆ ಆಗಿದ್ದು, ಎಲ್ಲವನ್ನೂ ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಸಿಕೊಳ್ಳಬೇಕು, ಎಲ್ಲವನ್ನೂ ಟ್ವಿಟ್ಟರ್, ಫೇಸ್ ಬುಕ್ ನಲ್ಲೇ ಮಾತನಾಡುವುದು ಸರಿಯಿಲ್ಲ. ಇಲ್ಲಿ ಬರಲ್ಲ, ಕೋರ್ಟ್ ಗೆ ಹೋಗ್ತಾರೆ ಅಂದ್ರೆ, ಹೋಗಲಿ ನಾವು ಏನೂ ಮಾಡೋಕೆ ಆಗಲ್ಲ'' ಎಂದಿದ್ದಾರೆ.

    ನಟಿ ಶ್ರುತಿ ಹರಿಹರನ್ ಗೆ ಬೆಂಬಲ ಸೂಚಿಸಿದ ನೀತೂ ಶೆಟ್ಟಿ ನಟಿ ಶ್ರುತಿ ಹರಿಹರನ್ ಗೆ ಬೆಂಬಲ ಸೂಚಿಸಿದ ನೀತೂ ಶೆಟ್ಟಿ

    ಇನ್ನು ಚೇತನ್ ಅವರ ಬಗ್ಗೆ ಮಾತನಾಡಿದ ಸಾರಾ ಗೋವಿಂದು ''ಚೇತನ್ ಸುಮ್ಮನೆ ಶ್ರುತಿಯನ್ನ ಎತ್ತಕಟ್ಟುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಚಿತ್ರದಲ್ಲಿ ಅವಕಾಶ ನೀಡಿಲ್ಲ ಅಂತ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ನಡವಳಿಕೆಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    English summary
    Kannada Artist association president ambareesh and film chamber will discuss with Arjun Sarja and Shruti Hariharan to resolve dispute.
    Monday, October 22, 2018, 18:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X