ಈ ಚಿತ್ರದಲ್ಲಿರುವ 'ಟ್ರೈನರ್' ಯಾರೆಂದು ಗುರುತಿಸಿ?
ಕೆಳಗೆ ನೀಡಲಾಗಿರುವ ಚಿತ್ರದಲ್ಲಿರುವುದು ಯಾರು ಎಂದು ಗುರುತಿಸಿ. ಸ್ಪೋರ್ಟ್ಸ್ ಮ್ಯಾನ್ ರೀತಿಯಲ್ಲಿ ಟ್ರ್ಯಾಕ್ ಪ್ಯಾಂಟ್ ಮತ್ತು ಟಿ-ಶರ್ಟ್ ಹಾಕ್ಕೊಂಡು ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬೆನ್ನ ಮೇಲೆ ಟ್ರೈನರ್ ಎಂದು ಹೆಸರು ಬೇರೆ ಇದೆ. ಇದನ್ನೆಲ್ಲಾ ನೋಡಿ ಬಹುಶಃ ಇವರು ಯಾರೋ ಟ್ರೈನರ್ ಇರಬೇಕು ಎಂದುಕೊಳ್ಳುತ್ತಿರಬಹುದು. ಇವರನ್ನ ಟ್ರೈನರ್ ಎಂದುಕೊಂಡಿದ್ದರು ಅದು ಖಂಡಿತಾ ತಪ್ಪು. ಇವರು ಟ್ರೈನರ್ ಅಲ್ಲ. ಸೂಪರ್ ಸ್ಟಾರ್ ಆಕ್ಟರ್.

ಇನ್ನು ಗೊತ್ತಾಗಲಿಲ್ವಾ? ಅರೇ ಇದು ರೆಬೆಲ್ ಸ್ಟಾರ್ ಅಂಬರೀಷ್. ಅಂಬಿ ಯಾಕೆ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದಾರೆ ಗೊತ್ತಾ? ತಮ್ಮ ಹೊಸ ಚಿತ್ರಕ್ಕಾಗಿ. ಹೌದು, ಸುದೀಪ್ ಮತ್ತು ಅಂಬರೀಷ್ ಒಟ್ಟಿಗೆ ಅಭಿನಯಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕಾಗಿ ನಟ ಅಂಬರೀಷ್ ತಮ್ಮ ದೇಹವನ್ನ ಫಿಟ್ ಮಾಡಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನ ಸ್ವತಃ ಚಿತ್ರತಂಡವೇ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಚಿತ್ರದ ಅಪ್ ಡೇಟ್ ನೀಡಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ಜಾಕ್ ಮಂಜು ಅವರು ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಜೊತೆಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಯುವ ನಿರ್ದೇಶಕ ಗುರುದತ್ ಗಾಣಿಗೆ ಚೊಚ್ಚಲ ಬಾರಿಗೆ ಡೈರೆಕ್ಷನ್ ಮಾಡ್ತಿದ್ದಾರೆ. ಈಗಾಗಲೇ ಮುಹೂರ್ತ ಮಾಡಿಕೊಂಡಿರುವ ಸಿನಿಮಾ, ಟೀಸರ್ ಲಾಂಚ್ ಮಾಡಿದೆ. ಆದಷ್ಟೂ ಬೇಗ ಶೂಟಿಂಗ್ ಆರಂಭಿಸಲಿದೆ.


Click it and Unblock the Notifications











