»   » ದರ್ಶನ್ 'ಅಂಬರೀಶ'ನಿಗೆ ಗುರು ರಾಯರ ಕೃಪೆ

ದರ್ಶನ್ 'ಅಂಬರೀಶ'ನಿಗೆ ಗುರು ರಾಯರ ಕೃಪೆ

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 'ಅಂಬರೀಶ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 21ಕ್ಕೆ 'ಅಂಬರೀಶ' ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೀಗ 'ಅಂಬರೀಶ' ಚಿತ್ರ ಒಂದು ದಿನ ಮುಂಚಿತವಾಗಿಯೇ ತೆರೆಗೆ ಅಪ್ಪಳಿಸ್ತಾಯಿದೆ. ಅಂದರೆ ನವೆಂಬರ್ 20 ಕ್ಕೆ 'ಅಂಬರೀಶ' ನಿಮ್ಮೆಲ್ಲರನ್ನ ರಂಜಿಸೋಕೆ ತೆರೆಮೇಲೆ ಬರ್ತಿದ್ದಾನೆ.

ಥಿಯೇಟರ್ ಸಮಸ್ಯೆ, ಪಬ್ಲಿಸಿಟಿ ಕೊರತೆ ಅಂತ ಚಿತ್ರಗಳು ಮುಂದೂಡುವುದು ಸಹಜ. ಆದ್ರೆ 'ಅಂಬರೀಶ' ಈಗಾಗಲೇ ನಿಗಧಿಯಾಗಿದ್ದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ರಿಲೀಸ್ ಆಗ್ತಿರುವುದಕ್ಕೂ ಒಂದು ಕಾರಣ ಇದೆ. ಅದೇ 'ಮಂತ್ರಾಲಯ ಮಹಾತ್ಮೆ'. [ನವೆಂಬರ್ 21ಕ್ಕೆ ಅಂಬರೀಶ ರಿಲೀಸ್]

ನಿಮಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ, 'ಅಂಬರೀಶ' ಚಿತ್ರದ ನಿರ್ದೇಶಕ ಮಹೇಶ್ ಸುಖಧರೆ ಗುರು ರಾಘವೇಂದ್ರ ಸ್ವಾಮಿಗಳ ಆರಾಧಕರು. ಬಹಳ ವರ್ಷಗಳ ನಂತ್ರ ಮಹೇಶ್ ಸುಖಧರೆ ಚಿತ್ರವನ್ನ ನಿರ್ದೇಶಿಸ್ತಾಯಿರುವುದಕ್ಕೆ 'ಗುರುಗಳ ಕೃಪೆ'ಯೇ ಕಾರಣವಂತೆ.

Ambareesha releasing on 20th November

ಈ ಕಾರಣಕ್ಕಾಗಿ ಗುರುವಾರ ಅಂದ್ರೆ ನವೆಂಬರ್ 20ಕ್ಕೆ 'ಅಂಬರೀಶ' ಚಿತ್ರವನ್ನ ರಿಲೀಸ್ ಮಾಡ್ತಿದ್ದಾರೆ. ಮಹೇಶ್ ಸುಖಧರೆ ಗುರು ರಾಯರ ಪರಮ ಭಕ್ತರಾಗಿರುವುದಕ್ಕೆ 'ಅಂಬರೀಶ' ಚಿತ್ರಕ್ಕಾಗಿ ಮಂತ್ರಾಲಯದಲ್ಲಿ ಶೂಟಿಂಗ್ ಮಾಡಿದ್ದಾರೆ.

ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಮಹೇಶ್ ಸುಖಧರೆ, ''ನಾನು ಗುರುರಾಘವೇಂದ್ರ ಸ್ವಾಮಿಗಳ ಭಕ್ತ. ರಾಯರ ಕೃಪೆಯಿಂದಲೇ ನಾನು ಸಿನಿಮಾ ಮಾಡುತ್ತಿರುವುದು. ಹೀಗಾಗಿ ರಾಯರಿಗೆ ನಮನ ಸಲ್ಲಿಸುವುದಕ್ಕೆ ಮಂತ್ರಾಲಯದಲ್ಲಿ ಶೂಟಿಂಗ್ ಮಾಡಿದ್ದೀವಿ. 'ಅಂಬರೀಶ' ಚಿತ್ರಕ್ಕೆ ಮುಖ್ಯ ತಿರುವು ಸಿಗುವುದು ಮಂತ್ರಾಲಯದಲ್ಲೇ'' ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. [ಕೆಂಪೇಗೌಡ ಗೆಟಪ್ ನಲ್ಲಿ ಅಂಬರೀಷ್]

ಬೆಂಗಳೂರಿನ ಲ್ಯಾಂಡ್ ಮಾಫಿಯಾ ಸುತ್ತ ಹೆಣೆದಿರುವ 'ಅಂಬರೀಶ' ಚಿತ್ರಕಥೆಯಲ್ಲಿ ಮಂತ್ರಲಯಾ ಹೇಗೆ ಲಿಂಕು ಅನ್ನುವುದನ್ನ ತಿಳಿದುಕೊಳ್ಳುವುದಕ್ಕೆ ನೀವು ನವೆಂಬರ್ 20ರ ವರೆಗೂ ಕಾಯಲೇಬೇಕು. (ಫಿಲ್ಮಿಬೀಟ್ ಕನ್ನಡ)

English summary
Rebel Star Ambareesh and Challenging Star Darshan starrer 'Ambareesha' is releasing on November 20th and not on November 21st as scheduled earlier. The reason for the prepone of the date is that Director Mahesh Sukhadare is the great devotee of Guru Raghavendra Swamy. The important sequence of the film is shot in Mantralaya and hence, the team decided to release the fim on Thursday i.e, 20th November.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X